
ನನ್ನ ಹೆಸರು ಅನು ಐಯ್ಯರ್. ನಾನು ಅಮ್ಮನನ್ನು ೧೯೮೭ರಲ್ಲಿ ಅಮೆರಿಕಾದ ಪಾಲೊ ಆಲ್ಟೋದಲ್ಲಿ ನಮ್ಮ ಕುಟುಂಬದ ಸ್ನೇಹಿತರ ಮನೆಯಲ್ಲಿ ಮೊದಲು ಭೇಟಿಯಾದೆ. ನಾನು ಮತ್ತು ನನ್ನ ತಂಗಿ ಅಮ್ಮನಿಂದ ಆ ಕೂಡಲೆ ಸೆಳೆಯಲ್ಪಟ್ಟೆವು. ಅಮ್ಮನ ಭಜನೆ ತುಂಬಾ ಇಷ್ಟವಾಯಿತು. ಅಮ್ಮನ ಜೊತೆ ಯಾತ್ರೆ ಮಾಡಲು ನಮಗೆ ಬಯಕೆಉಂಟಾಯಿತು. ಆ ಮೊದಲ ವರ್ಷಗಳು ತುಂಬಾ ವಿಶೇಷ ಕ್ಷಣಗಳಾಗಿದ್ದವು ಕಾರಣ ಅಮ್ಮ ಮತ್ತು ಹಿರಿಯ ಸನ್ಯಾಸಿಗಳ ಒಡನಾಟದಲ್ಲಿ ಬೆಳೆಯಲು ನಮಗೆ ಅವಕಾಶದೊರೆಕಿತು. ಆ ಸಮಯದಲ್ಲೇ ನನಗೆ ಗೇಲ್ ಟ್ರೆಡ್ವೆಲ್ ಸಹ ಪರಿಚಯವಾಗಿದ್ದು. ೧೯೮೮ರಲ್ಲಿ ಅಮ್ಮನನ್ನು ಮೊದಲ ಸಲ ನಮ್ಮ ಮನೆಗೆ ಆಹ್ವಾನಿಸದಾಗ, ನನಗೆ ಅವಳ ವ್ಯಕ್ತಿತ್ವದ ಒಳನೋಟದ ಪರಿಚಯ ಸಿಕ್ಕಿತು. ಅವಳ ನುಡಿ ತೀಕ್ಷ್ಣವಾಗಿತ್ತು. ನಾವು ಕೇವಲ ಮಕ್ಕಳಾಗಿದ್ದರೂ ಅವಳು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಳು. ಇಷ್ಟಾನಿಷ್ಟ ತೋರಿಸುವಲ್ಲಿ ಹಿಂಜರಿಯುತ್ತಲೇ ಇರಲಿಲ್ಲ. ಹೀಗಿದ್ದೂ, “ಗಾಯತ್ರಿ ಅಕ್ಕ” ಎಂಬ ಕುಖ್ಯಾತ ಹೆಸರಿನಿಂದ ಅವಳು ಎಲ್ಲರಿಂದ ಸಂಬೋಧಿಸಲ್ಪಡುತ್ತಿದ್ದಳು, ಅವಳೊಬ್ಬ ಪ್ರಖ್ಯಾತ ಮಾಫಿಯಾ ಬಾಸ್ ಥರ ಇದ್ದಳು. ಎಷ್ಟೋ ಜನ ಹೆಣ್ಣುಮಕ್ಕಳ ಜೀವನಗಳ ಅನೇಕ ಮಗ್ಗಲುಗಳನ್ನು ಅವಳು ಕಂಟ್ರೋಲ್ ಮಾಡುತ್ತಿದ್ದಳು. ಬಹುಬೇಗನೇ ಅವಳ ಕಂಟ್ರೋಲ್ ಗೆ ಮತ್ತೆ ಅವಳ ಕ್ರೂರತೆಗೆ ನಾನೂ ನನ್ನ ತಂಗಿಯೂ ಸಿಲುಕಿಬೀಳುತ್ತೇವೆ ಎಂದು ನನಗಂತೂ ಗೊತ್ತಿರಲಿಲ್ಲ.
೧೯೯೨ರಲ್ಲಿ ಅಮ್ಮನ ಜೊತೆ ಮೂರು ತಿಂಗಳುಗಳ ಕಾಲ ಅಮೆರಿಕಾ ಮತ್ತು ಯೂರೋಪ್ ಯಾತ್ರೆ ಮಾಡಿದೆವು. ಅದೊಂದು ಆಧ್ಯಾತ್ಮಿಕವಾದ ಸಾಹಸ ಯಾತ್ರೆಯಾಗಿತ್ತು; ಅಲ್ಲದೆ ಗೇಲ್ಳ ಮತ್ತಷ್ಟು ಹತ್ತಿರ ಇರುವ ಅವಕಾಶವನ್ನೂ ನೀಡಿತು. ನಾವು ಎಲ್ಲಿ ಉಳಿಯಬೇಕು, ನಾವು ಯಾವ ಸೇವೆ ಮಾಡಬೇಕು ಎಂದೆಲ್ಲಾ ಅವಳೇ ಅವಳಿಗೆ ಬೇಕಾದ ಹಾಗೆ ನಿರ್ಧರಿಸುತ್ತಿದ್ದಳು. ನಮಗೆ “ಯೂ ಲೇಜಿ ಬಮ್ಸ್ (ಹೇ! ಪ್ರಯೋಜನವಿಲ್ಲದ ಸೋಂಬೇರಿಗಳೆ), ಅಡುಗೆ ಮನೆ ಕ್ಲೀನ್ ಮಾಡಿ!” ಎಂದು ಆಜ್ಞಾಪಿಸುವುದರಲ್ಲಿ ಅವಳಿಗೆ ಏನೋ ಖುಷಿ; ಹಾಗೆ ಕೂಗುತ್ತಾ ಕೈಯ್ಯಲ್ಲಿದ್ದ ಟವಲ್ಲಿನಿಂದ ನನ್ನ ಹಿಂದಕ್ಕೆ ಏಟು ಕೊಡುತ್ತಿದ್ದಳು. ಆ ಕೆಲಸಗಳನ್ನೆಲ್ಲಾ ನಾವು ದಾಪುಗಾಲು ಹಾಕುತ್ತಾ, ಅದರಿಂದ ನಮಗೆ ಶಿಸ್ತು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಭಾವಿಸುತ್ತಾ, ತೆರೆದ ಮನದಿಂದ ಮಾಡುತ್ತಿದ್ದೆವು. ಆದರೆ ಬರಬರುತ್ತಾ ದಿನಕಳೆದಂತೆ ಅವಳ ವ್ಯಕ್ತಿತ್ವವು ಹೆಚ್ಚು ಹೆಚ್ಚು ಕಪ್ಪಿಟ್ಟಿತು, ಹೆಚ್ಚು ಹೆಚ್ಚು ನೆಗೆಟೀವ್ ಆಗುತ್ತಾ ಹೋಯಿತು. ನಿಜ ಹೇಳಬೇಕೆಂದರೆ, ಅವಳ ಹತ್ತಿರ ಇರುವುದೇ ನಮಗೆ ಭಯವಾಗುತ್ತಿತ್ತು. ವ್ಯಂಗ್ಯವಾಗಿ, ಈ ರೀತಿ ಮಾರ್ಪಾಡಾದ ಬಳಿಕ, ಅವಳು ತನಗಿಷ್ಟಬಂದ ಕೆಲವರನ್ನು ಗುಂಪುಗೂಡಿಸಿಕೊಂಡಿದ್ದಳು; ಅವರು ಇವಳು ಹೇಳಿದ್ದನ್ನೆಲ್ಲಾ ಕೇಳುವಂತೆ, ಇವಳ ಬೆನ್ನನ್ನು ಆಗಾಗ ಚಪ್ಪರಿಸಿ ಹುರಿದುಂಬಿಸುವಂತೆ ಖಚಿತಪಡಿಸಿಕೊಳ್ಳುತ್ತಿದ್ದಳು. ನಮ್ಮನ್ನು ಎಲ್ಲರಿಂದ ದೂರವಿರಿಸಿ, ನಾವು ಮೂಲೆಗುಂಪಾದರೆ, ಹೇಳಿದ್ದು ಕೇಳಿಕೊಂಡಿರುವಂತಾದರೆ ಅವಳಿಗೆ ಸಂತೋಷವಾಗುತ್ತಿತ್ತು.
“ “ಅಮ್ಮನಿಗೆ ಹತ್ತಿರ” ಇರುವ ವ್ಯಕ್ತಿಯನ್ನು ನಾವು ತುಂಬಾ ಉನ್ನತ ವ್ಯಕ್ತಿಗಳೆಂದು ಪೂಜ್ಯಭಾವದಿಂದ ಕಾಣುತ್ತೇವೆ. ಆದರೆ ಅವಳು ಸನ್ಯಾಸಿನಿಯಂತೆ ಮಾತಾಡುತ್ತಿರಲಿಲ್ಲ; ಅಲೆಮಾರಿ ಕುಡುಕನ ಹಾಗಿತ್ತು ಅವಳ ನಡೆನುಡಿ”.
ನನಗೆ ನೆನಪಿದೆ, ಬಾರ್ದೋ ಎಂಬಲ್ಲಿ ಅಮ್ಮನ ಜೊತೆ ಯಾತ್ರೆಯಲ್ಲಿದ್ದೆವು. ಒಂದು ದೇವಿಭಾವದ ರಾತ್ರಿ, ದೀರ್ಘ ಸಮಯ ತಬಲಾ ನುಡಿಸಿದ ಬಳಿಕ ಆಗತಾನೇ ನಾನು ಎದ್ದು ನಿಂತ್ತಿದ್ದೆ. ಬಹಳ ಹೊತ್ತಿನಿಂದ ಹಿರಿಯ ಸ್ವಾಮೀಜಿಯವರ ಭಜನೆಗೆ ತಬಲಾ ನುಡಿಸಿದ್ದೆ. ಅಷ್ಟರಲ್ಲಿ ದಿಢೀರ್ ಅಂತ, ಗೇಲ್ ತಾನೀಗ ಭಜನೆ ಹಾಡಬೇಕು ಎಂದು ನಿರ್ಧರಿಸಿದಳು. ಅವಳಿಗೆ ನಾನು ತಬಲಾ ನುಡಿಸಬೇಕು ಎಂದು ಹೇಳಿದಳು. ಅವಳ ಸೆಶನ್ ನನಗೆ ಯಾವತ್ತೂ ವಿಶೇಷವಾಗಿ ತೋರುತ್ತಿತ್ತು, ಹಾಗಾಗಿ ಅವಳಿಗೆ ನುಡಿಸಲು ನನಗೆ ಸದಾ ಗೌರವವೆನಿಸುತ್ತಿತ್ತು. ಬೇಗ ತಿರುಗಿ ಬರೋಣ ಎಂದುಕೊಂಡು, ಅವಳನ್ನು, “ಕೊಂಚ ಕೈಕಾಲು ಸಡಿಲ ಮಾಡಿಕೊಂಡು ರೆಸ್ಟ್ ರೂಮಿಗೂ ಹೋಗಿ, ಬೇಗ ಬಂದುಬಿಡಲೆ?” ಎಂದು ಒಂದು ಮಾತು ಕೇಳಿದೆ. ತಟ್ಟೆಂದು ಅವಳ ವ್ಯಕ್ತಿತ್ವ ಬದಲಾಗಿ, “ನಿನ್ನ ಸ್ತನಗಳನ್ನು ಕತ್ತರಿಸಿಕೊಂಡು ನೀನು ಹುಡುಗನೆಂದು ಏಕೆ ನಟಿಸಬಾರದು? ಎಂತಾದರೂ ನೀನು ಸ್ವಾಮೀಜಿಗಳಿಗೇ ಸಹಕರಿಸುತ್ತೀಯ. ಹೋಗು, ಅವರ ಪೃಷ್ಟಗಳಿಗೆ ಮುತ್ತನ್ನಿಡು!” ಎಂದುಬಿಟ್ಟಳು. ಹಾಗೆಂದು ಹೇಳಿ ಬಿರ್ರನೆ ಹೋಗಿಬಿಟ್ಟಳು. ನಾನು ಆಗತಾನೇ ಹದಿಹರೆಯಕ್ಕೆ ಕಾಲಿಟ್ಟಿದ್ದೆ. ಇಂಥ ವಿಷಯವೆಲ್ಲಾ ಹೊಸತು. ಕೇಳಿ ಭಯದಿಂದ ನಡುಗಿಹೋದೆ. ಯಾರಿಗೂ ಕಾಣದಂತೆ ಅಲ್ಲಿದ್ದ ಒಂದು ಹೂಗಿಡಗಳ ಪೊದೆಯ ಹಿಂದೆ ಹೋಗಿ, ಕತ್ತಲಲ್ಲಿ ಅಳುತ್ತಾ ಕೂತೆ. ಇನ್ನೊಬ್ಬರಿಗೆ ಅತ್ಯಂತ ನೋವಾಗಬೇಕು ಎಂದರೆ ಏನು ಹೇಳಬೇಕು ಎಂದು ಅವಳಿಗೆ ಸರಿಯಾಗಿ ಗೊತ್ತಿದ್ದಂತಿತ್ತು. ನನ್ನನ್ನು ಮಾತ್ರವಲ್ಲ ಇತರರನ್ನೂ ಈ ರೀತಿ ಕೀಳಾಗಿ ನಡೆಸಿಕೊಂಡು ಅಳಿಸಿರುವ ಹತ್ತಾರು ಉದಾಹರಣೆ ನನಗೆ ನೆನಪಿಗೆ ಬರುತ್ತವೆ. ದೇಹದ ಅಂಗಾಗಗಳ ಬಗ್ಗೆ ಅವಳಿಗೆ ಏನೋ ಭ್ರಾಂತಿ ಇದ್ದಂತ್ತವಳಂತೆ, ಅವಳದು ಲೈಂಗಿಕ ಸೂಚ್ಯಾರ್ಥ ಇರುತ್ತಿದ್ದ ಶಾಪದಂಥ ನುಡಿಗಳಾಗಿರುತ್ತಿದ್ದವು. ತಮಾಷೆ ಎಂದರೆ, ಇದೇ ಸಮಯ ಅವಳು ಹೀಗಿದ್ದೂ “ತಾನು ಬಹುಶುದ್ಧಳು, ತಾನು ಬಹು ನಿಷ್ಕಳಂಕಳು” ಎಂಬಂತೆ ತೋರಿಸಿಕೊಳ್ಳುತ್ತಿದ್ದಳು. “ಅಮ್ಮನಿಗೆ ಹತ್ತಿರ” ಇರುವ ವ್ಯಕ್ತಿಯನ್ನು ನಾವು ತುಂಬಾ ಉನ್ನತ ವ್ಯಕ್ತಿಗಳೆಂದು ಪೂಜ್ಯಭಾವದಿಂದ ಕಾಣುತ್ತೇವೆ. ಆದರೆ ಅವಳು ಸನ್ಯಾಸಿನಿಯಂತೆ ಮಾತಾಡುತ್ತಿರಲಿಲ್ಲ; ಅಲೆಮಾರಿ ಕುಡುಕನ ಹಾಗಿತ್ತು ಅವಳ ನಡೆನುಡಿ”.
“ವರ್ಷಗಳು ಉರುಳಿದಂತೆ, ಅವಳು ಕುಸಿಯುತ್ತಿದ್ದಾಳೆ ಎನ್ನುವುದು ಸಷ್ಟವಾಯಿತು.”
ವರ್ಷಗಳು ಉರುಳಿದಂತೆ, ಅವಳು ಕುಸಿಯುತ್ತಿದ್ದಾಳೆ ಎನ್ನುವುದು ಸ್ಪಷ್ಟವಾಯಿತು. ಅಮ್ಮನಿಗೆ ಒಂದಿಷ್ಟೂ ಗೌರವ ತೋರಿಸುತ್ತಿರಲಿಲ್ಲ. ಆಶ್ರಮದ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದಳು. ಹಿರಿಯ ಸನ್ಯಾಸಿಗಳನ್ನು, ಅವಳ ಸುತ್ತಲೂ ಇದ್ದ ಮತ್ತಿತರ ಹಿರಿಯರನ್ನು ಸಂಬೋಧಿಸುವಾಗ “ಬಾಸ್ಟರ್ಡ್”(ಜಾರಜ), “ಬಿಚ್”(ಹೆಣ್ಣುನಾಯಿ) ಮುಂತಾದ ಪದಗಳು ಅವಳ ಬಾಯಿಯಿಂದ ಸಲೀಸಾಗಿ ಉದುರುತ್ತಿದ್ದವು. ನನಗೆ ನೆನಪಿದೆ, ೧೯೯೬ರಲ್ಲಿ ಪ್ಯಾರಿಸ್ ನಲ್ಲಿ ಒಂದು ಫ್ಲಾಟಿನಲ್ಲಿ ಅಮ್ಮನ ತಂಡದವರ ಜೊತೆಗೆ ತಂಗಿದ್ದೆವು. ಗೇಲ್ ಸನ್ಯಾಸಿಯೊಬ್ಬರ ಗಮನ ಪಡೆಯಲು ಬಹಳ ಅನಾದರದಿಂದ ತನ್ನ ಕಾಲಿನಲ್ಲಿ ತಟ್ಟಿ ಮಾತಾಡಿಸಿದ್ದಳು. ತನಗೆ ಭಾರತೀಯ ಸಂಸ್ಕಾರ ಬಹಳ ಚೆನ್ನಾಗಿ ಗೊತ್ತಿದೆ ಎಂದು ಬೀಗುತ್ತಿದ್ದ ಅವಳಿಗೆ, ಇದು ಎಷ್ಟು ಅಗೌರವ ಸೂಚಿಸುವುದು ಎಂದು ಗೊತ್ತಿರಬೇಕಿತ್ತು. ಇದೂ ಅವಳ ವ್ಯಕ್ತಿತ್ವದ ಭಾಗವೇ ಎಂದು ನಾವು ಪರಿಗಣಿಸುತ್ತಾ ಸುಮ್ಮನಿದ್ದೆವು; ಯಾಕೆ ಹಾಗೆ ಮಾಡಿದ್ದು ಎಂದು ಯಾರೂ ಅವಳನ್ನು ಕೇಳಲಿಲ್ಲ.
ನಮ್ಮ ಗೆಳತಿಯೊಬ್ಬಳು ಆಶ್ರಮವನ್ನು ೧೯೯೬ರಲ್ಲಿ ಸೇರಿದಳು; ಹೊಸಬರಿಗಾಗಿ ನಡೆದ ಒಂದು ಮೀಟಿಂಗ್ ನಲ್ಲಿ ಗೇಲ್ ತುಂಬಾ ಕೆಟ್ಟದಾಗಿ ಮೂರ್ಖತನದಿಂದ ನಡೆದುಕೊಂಡ ಬಗ್ಗೆ ಅವಳು ಸ್ಪಷ್ಟಪಡಿಸಿದಳು. ಅಮ್ಮನ ಅತ್ಯಂತ ಹತ್ತಿರದ ಸ್ವಾಮಿನಿಯ ಆಧ್ಯಾತ್ಮಿಕ ಬೋಧನೆಯನ್ನು ಓದಿದ್ದ ಹೊಸಾ ಆಶ್ರಮವಾಸಿಗಳಿಗೆಲ್ಲಾ ಇವಳ ಈ ವರ್ತನೆಯನ್ನು ಕಂಡು ಗೊಂದಲವೂ ಭಯವೂ ಉಂಟಾಯಿತು. ಹಾಗಿದ್ದೂ, ಅವಳಿಗೆ ಸಮಾಧಾನ ಇರಲಿಲ್ಲ; ಅವಳು ತನ್ನ ಅಧಿಕಾರ ದಾಹವನ್ನು ಬಿಟ್ಟುಕೊಡಲಾಗದೆ ಅದಕ್ಕೇ ಕಚ್ಚಿಕೊಂಡಿದ್ದಳು, ಎಲ್ಲವನ್ನೂ ನಿಯಂತ್ರಿಸುವುದನ್ನು ಮುಂದುವರೆಸಿದಳು.
ಅವಳು ಬಿಟ್ಟುಹೋಗುವ ಕೆಲವು ದಿನಗಳ ಹಿಂದೆ, ಸಾನ್ ರಮೊನ್ ನಲ್ಲಿ ನವೆಂಬರ್ ೧೯೯೯ರಲ್ಲಿ ನನಗಾದ ಅನುಭವ ಬಹುಶಃ ನನಗೆ ಅತ್ಯಂತ ಭಯಾನಕವಾದುದು ಎನ್ನಬೇಕು. ಒಬ್ಬ ಗೆಳತಿಯ ಜೊತೆ ಹತ್ತಿರದ ಮಾಲ್ ಗೆಂದು ಹೋರಟಿದ್ದೆ; ಗೇಲ್ ಗೆ ಬರ್ತಡೇ ಗಿಫ್ಟ್ ಕೊಂಡುಕೊಳ್ಳಬೇಕು ಎಂದು. ಆದರೆ ದಾರಿಯಲ್ಲಿ ನಮ್ಮ ಕಾರು ಅಪಘಾತಕ್ಕೆ ಸಿಕ್ಕಿತು. ಹಾಗಗಿ ಮಾಲ್ ಗೆ ಹೋಗಲು ಆಗಲೇ ಇಲ್ಲ. ಆಸ್ಪತ್ರೆಯ ಎಮರ್ಜೆನ್ಸಿ ರೂಮಿಗೆ ಹೋಗಬೇಕಾಗಿ ಬರಲಿಲ್ಲ, ಆದರೆ ನನಗೆ ಕತ್ತಿನಲ್ಲಿ ಸಂವೇದನೆಯೇ ಇಲ್ಲವಾಯಿತು; ಕೆಲವು ದಿನಗಳವರೆಗೆ ಕತ್ತನ್ನು ಅಲುಗಿಸಲೂ ಆಗದಾಯಿತು. ಆ ದಿನಗಳಲ್ಲಿ ಸಾನ್ ರಮೊನ್ ಆಶ್ರಮದಲ್ಲಿ ಒಂದು ಬೆಳಿಗ್ಗೆ ಸ್ಲೀಪಿಂಗ್ ಬ್ಯಾಗ್ ನೊಳಗೆ ಮಲಗೇ ಇದ್ದೆ. ಇದ್ದಕಿದ್ದಂತೆ ಕಾರಿಡಾರ್ ನಲ್ಲಿ ಅವಳ ಕೂಗಾಟ ಕೇಳಿಬಂತು. “ಏಳೇ ಲೇಜಿ ಬೋನ್ಸ್!(ಸೋಂಬೇರಿಗಳೇ!)” ಎಂದು ಕೂಗುತ್ತಾ ಬಲಗಾಲನ್ನು ನನ್ನ ತಲೆಯ ಹತ್ತಿರವೇ ತುಳಿಯುತ್ತಾ ತಪ್ಪೆಂದು ಇಟ್ಟಾಳು. ನನಗೆ ನಿಜವಾಗಿಯೂ ಭಯವಾಯಿತು ಏಕೆಂದರೆ ನನಗೆ ಕತ್ತನ್ನು ಒಂದಿಷ್ಟು ಅಲುಗಿಸಲು ಆಗದಂಥಾ ಅವಸ್ಥೆಯಲ್ಲಿದ್ದೆ. ಕೂಡಲೆ, ನನ್ನ ಭೀತಿಯಂತೆ, ಅವಳು ನನ್ನನ್ನು ಒದೆಯತೊಡಗಿದಳು. ನಾನು, “ದಯವಿಟ್ಟು ನಿಲ್ಲಿಸಿ! ನನಗೆ ಕತ್ತು ಹೊರಳಿಸಲು ಆಗದು!” ಎಂದು ಬೇಡಿದೆ. ನೋವಿನಿಂದ, ಅಸಹಾಯಕತೆಯಿಂದ ನಾನು ನರಳುತ್ತಿದ್ದರೆ ಅವಳಿಗೆ ಸಹಾನುಭೂತಿ ಇರಲಿ, ಒಂದಿಷ್ಟೂ ಮರುಕವೂ ಉಂಟಾಗಲಿಲ್ಲ. ಅವಳಿಗೆ ಅದು ಜೋಕ್ ಮಾಡುವ ಸಮಯವಾಗಿತ್ತು. “ಕತ್ತು ಹೊರಳಿಸಲು ಆಗದೆ? ಎ?” ತನ್ನ ಆ ಸ್ಟ್ರೇಲಿಯನ್ ಶೈಲಿಯಲ್ಲಿ ಅಣಕಿಸುತ್ತಾ ಕೇಳಿದಳು. ಇದಕ್ಕೂ ಹೆಚ್ಚಿನ ನೋವು ನೀಡಿದ್ದು ಎಂದರೆ ನನ್ನ ಇಬ್ಬರು ಸ್ನೇಹಿತೆಯರು – ಅಮ್ಮನನ್ನು ನನಗೆ ಪರಿಚಯಿಸಿದವರೇ ಅವರು- ಅವರೂ ಕೂಡ ಗೇಲ್, ನನ್ನ ಮೇಲೆ ನಡೆಸುತ್ತಿದ್ದ ಹಲ್ಲೆಯನ್ನು ನಿಂತು ನೋಡುತ್ತಿದ್ದರು. ಅವರು ಒಂದು ಮಾತೂ ಹೇಳಲಿಲ್ಲ, ಏನೂ ಮಾಡಲೂ ಇಲ್ಲ. ಮಾತ್ರವಲ್ಲ, ಮೂವರೂ ಕೈಕೈ ಹಿಡಿದುಕೊಂಡು ಕೋಣೆಯಿಂದ ಹೊರಗೆ ಹೋದರು.
ಯಾರನ್ನು ನಾನು ತುಂಬಾ ಹತ್ತಿರದವರು ಎಂದು ಭಾವಿಸಿಕೊಂಡಿದ್ದೆನೋ ಅವರೇ ಈ ರೀತಿ ನಡೆದುಕೊಂಡಿದ್ದು ನೋಡಿ ನನಗೆ ತುಂಬಾ ವೇದನೆ ಆಯಿತು. ನೋವು, ಗೊಂದಲಗಳ ಜೊತೆ ನನ್ನನ್ನು ಅಲ್ಲಿಯೇ ಆ ಸ್ಥಿತಿಯಲ್ಲಿ ಬಿಟ್ಟು ಅವರೆಲ್ಲಾ ಹೋದದ್ದನ್ನು ಕಂಡು ನನ್ನ ಕಣ್ಣಿಂದ ನೀರು ಹರಿಯಿತು. ಗೇಲ್ ಅಮ್ಮನನ್ನು ತೊರೆದ ಅಲ್ಪಕಾಲದಲ್ಲೇ ಇವರಿಬ್ಬರೂ ಸಹ ಅಮ್ಮನನ್ನು ತೊರೆದುಹೋದರು. ಗೇಲ್ ಇವರಿಬ್ಬರ ಮನಸ್ಸನ್ನು ಕೆಡಿಸಿದ್ದನ್ನು ಆಗ ನಾನು ಕಂಡೆ. ಇವರಿಬ್ಬರೂ ಅವಳ ಸಂಚಿನ ಭಾಗವಾಗಿದ್ದವರು; ಅವಳು ಮಾಡಿದ್ದಕ್ಕೆ ತಲೆತೂಗಿಸುವವರು, ಅವಳಿಗೆ ಸೇವೆ ಮಾಡಿಕೊಡುವವರು… ಹೀಗೆ ಅವಳು ತನ್ನ ಯೋಜನೆಗೆ ತಕ್ಕಂತೆ ಅವರನ್ನು ಪಳಗಿಸಿ ಇಟ್ಟುಕೊಂಡಿದ್ದಳು.
“ಅಮ್ಮನಿಗೆ ಬಹಳಾ ಹತ್ತಿರವಾಗಿದ್ದ ಇವರಿಬ್ಬರೂ ಪಾತ್ರದಲ್ಲಿ ಒಂದೇ ಥರ. ಆದರೆ ಒಬ್ಬರು ಎಷ್ಟು ಪ್ರೇಮ ಮತ್ತು ಕರುಣೆಯನ್ನು ಹೊಂದಿದ್ದರು, ಮತ್ತೊಬ್ಬರು ಎಷ್ಟು ದುಷ್ಟತನ, ದ್ವೇಷ ಹಾಗು ವರಟುತನವನ್ನು ಹೊಂದಿದ್ದರು!”
ಅಮ್ಮನ ವೈಯಕ್ತಿಕ ಸೇವೆಯನ್ನು ಮಾಡುವ ಲಕ್ಷ್ಮಿ ಅಕ್ಕ, ತಮ್ಮ ಬಿಡುವಿಲ್ಲದ, ಜವಾಬ್ದಾರಿಯುತ ದಿನಚರಿಯ ನಡುವೆಯೂ ಕೂಡ, ನಾನು ಅಪಘಾತವಾಗಿ ಹಾಸಿಗೆ ಹಿಡಿದಿದ್ದ ಆ ದಿನಗಳಲ್ಲಿ, ಅತ್ಯಂತ ಪ್ರೇಮದಿಂದ ನನ್ನ ಬಟ್ಟೆಗಳನ್ನು ಒಗೆದು, ಒಣಗಿಸಿ ಪ್ರೀತಿಯಿಂದ ಮಡಚಿ ಕೊಡುಟ್ಟು ನನ್ನ ಸೇವೆ ಮಾಡಿದರು. ಇದು ನನಗೆ ನಿಜವಾಗಿಯೂ ಆಶಾವಾದದ ಮನೋಭಾವದ ಹಾಗು ಸಕಾರಾತ್ಮಕ ದೃಷ್ಟಿಕೋನದ ಪಾಠವನ್ನು ಕಲಿಸಿತು. ಅಮ್ಮನಿಗೆ ಬಹಳಾ ಹತ್ತಿರವಾಗಿದ್ದ ಇವರಿಬ್ಬರೂ ಪಾತ್ರದಲ್ಲಿ ಒಂದೇ ಥರ. ಆದರೆ ಒಬ್ಬರು ಎಷ್ಟು ಪ್ರೇಮ ಮತ್ತು ಕರುಣೆಯನ್ನು ಹೊಂದಿದ್ದರು, ಮತ್ತೊಬ್ಬರು ಎಷ್ಟು ದುಷ್ಟತನ, ದ್ವೇಷ ಹಾಗು ವರಟುತನವನ್ನು ಹೊಂದಿದ್ದರು!
೨೦೦೧ರಲ್ಲಿ ನನಗೆ ಗೇಲ್ಳ ಅಂತರಂಗ ಮಿತ್ರವೃಂದದಿಂದ ಒಂದು ಅಜ್ಞಾತ ಈಮೇಲ್ ಬಂದಿತು; ಅದರಲ್ಲಿ ಅಮ್ಮನ ಮೇಲೆ ಏನೇನೋ ಆಪಾದನೆಗಳಿದ್ದವು. ಅವರು ಅಮ್ಮನ ಪ್ರತಿ ನನ್ನ ವಿಶ್ವಾಸವನ್ನು ಧ್ವಂಸಮಾಡಿ, ಅವರಂತೆ ನಾನೂ ಅಮ್ಮನನ್ನು ತೊರೆಯಬೇಕು ಎಂಬ ಪ್ರಯತ್ನವನ್ನು ನಡೆಸಿದರು. ಹಾಗಿದ್ದೂ, ಆ ಅವರ ಪತ್ರಕ್ಕೆ ತಮ್ಮ ಸಹಿ ಹಾಕುವ ಧೈರ್ಯ ಮಾತ್ರ ಅವರಿಗಿರಲಿಲ್ಲ. ಅವರುಗಳು ಯಾರು ಎಂದು ನನಗೆ ಸುಲಭವಾಗಿ ತಿಳಿದುಹೋಯಿತು. ಸುಳ್ಳನ್ನು ಹಬ್ಬಿಸಲು ಎಷ್ಟು ನೀಚತನಕ್ಕಾದರೂ ಇಳಿಯಲು ಸಿದ್ಧರಿರುವರಲ್ಲಾ ಎಂದು ಕಂಡು ನನಗೆ ಆಘಾತವಾಯಿತು. ಅವರು ಹೋಗಿದ್ದಾಯಿತು, ನನ್ನನ್ನು ನನ್ನ ಪಾಡಿಗೆ ಬಿಡಬಾರದೇಕೆ? ಅವರ ಪ್ರಯತ್ನಗಳು ಅವರಿಗೇ ಮುಳ್ಳಾದವು. ಅವರ ಪ್ರಯತ್ನಗಳೆಲ್ಲಾ ಏನೂ ಪರಿಣಾಮ ಬೀರಲಿಲ್ಲ, ಈಗಲೂ ಬೀರುತ್ತಿಲ್ಲ. ನನ್ನ ಅನುಭವವೇ ನನ್ನ ಗುರು. ಪ್ರಪಂಚಕ್ಕೆ ಒಳಿತಾದ ಏನನ್ನೂ ಕೊಡಲು ಇಲ್ಲದ ಇಂಥ ಜನರು ನನ್ನನ್ನು ಕಾಪಾಡಬೇಕಿಲ್ಲ. ಶಾಲೆಯ ಆ ದಿನಗಳಲ್ಲಿ ಕಲಿತದ್ದ ವಿಸ್ಟನ್ ಚರ್ಚಿಲ್ಲರ ಒಂದು ಮಾತು ನೆನಪಾಗುತ್ತಿದೆ, “ಸತ್ಯವನ್ನು ತಿರುಚಲಾಗದು. ಕುಬುದ್ಧಿ ಅದರ ಮೇಲೆ ಆಕ್ರಮಣ ಮಾಡಬಹುದು, ಅಜ್ಞಾನ ಅದನ್ನು ಅಲ್ಲಗಳೆಯಬಹುದು. ಆದರೆ ಕಡೆಯಲ್ಲಿ ಅದೋ ಸತ್ಯವು ಸತ್ಯವೇ ಆಗಿರುತ್ತದೆ.”
“ಸತ್ಯವನ್ನು ತಿರುಚಲಾಗದು. ಕುಬುದ್ಧಿ ಅದರ ಮೇಲೆ ಆಕ್ರಮಣ ಮಾಡಬಹುದು, ಅಜ್ಞಾನ ಅದನ್ನು ಅಲ್ಲಗಳೆಯಬಹುದು. ಆದರೆ ಕಡೆಯಲ್ಲಿ ಅದೋ ಸತ್ಯವು ಸತ್ಯವೇ ಆಗಿರುತ್ತದೆ.”
ಅವರು ಮಾಡಿದಂಥ ಗಾಯ ಮಾಗಲು ಅಮ್ಮನ ಪ್ರೇಮ ಮತ್ತು ಕ್ಷಮೆಯ ಬೋಧನೆ ಮಾತ್ರವೇ ನನಗೆ ಸಹಾಯಮಾಡಿರುವುದು. ಅಮ್ಮ ಮತ್ತು ಸ್ವಾಮಿಗಳೆಲ್ಲರೂ ನಮಗೆ ಸದಾ ಪ್ರೇಮ ಕರುಣೆಗಳನ್ನು ಮಾತ್ರವೇ ತೋರಿಸಿದ್ದಾರೆ. ಮೊದಲ ಆ ದಿನಗಳಲ್ಲಿ ಕೆಲವು ಯೂರೋಪಿಯನ್ ನಗರಗಳಲ್ಲಿ ನಾವು ಉಳಿದುಕೊಳ್ಳುತ್ತಿದ್ದ ಜಾಗದಲ್ಲಿ ಚಳಿ ಅಪಾರವಾಗಿರುತಿತ್ತು. ಅಮ್ಮ ನಮ್ಮನ್ನು ಎಷ್ಟರಮಟ್ಟಿಗೆ ಆರೈಸುತ್ತಿದ್ದರೆಂದರೆ, ಅಮ್ಮ ಅವರ ಬಿಸಿನೀರನ್ನು ನಮಗೆ ಸ್ನಾನ ಮಾಡಲು ನೀಡುತ್ತಿದ್ದರು, ಕೆಲವೊಮ್ಮೆ ನಮ್ಮನ್ನು ತಮ್ಮ ಕೋಣೆಯಲ್ಲಿ ಮಲಗಿಸಿಕೊಳ್ಳುತ್ತಿದ್ದರು. ಪ್ರಾಪಂಚಿಕ ಸ್ಥರದಲ್ಲಿಯೂ ಸಹ ಅಮ್ಮ ನಮ್ಮ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದರು.
ಆಶ್ರಮವು “ಮೇಲ್ ಡಾಮಿನೇಟೆಡ್” (ಪುರುಷ ಪ್ರಾಬಲ್ಯವಾದುದು) ಎಂದು ಗೇಲ್ ಅಪವಾದ ಹೊರಿಸುತ್ತಾಳೆ; ಆದರೆ ಸ್ವಾಮಿಗಳೆಲ್ಲರೂ ನಮಗೆ ಗೌರವ ಮತ್ತು ಪ್ರೇಮವನ್ನೇ ತೋರಿದ್ದಾರೆ. ೧೯೯೩ರಲ್ಲಿ ಚಿಕಾಗೋದಲ್ಲಿ ನಡೆದ “ಪಾರ್ಲಿಮೆಂಟ್ ಆಫ್ ವರ್ಲ್ಡ್ ರಿಲೀಜಿಯನ್ಸ್” ನ ಸಂದರ್ಭದಲ್ಲಿ, ಒಂದು ದಿನ ನಾನು ಗೇಲ್ ಳನ್ನು “ಗಾಯತ್ರಿ” ಎಂದು ಕರೆದೆ; ಅದನ್ನು ಕೇಳಿದ ಸ್ವಾಮೀಜಿ, ಸ್ವತಃ ತಾವೇ ಎಲ್ಲರಿಗಿಂತಲೂ ಹಿರಿಯ ಸನ್ಯಾಸಿಯಾಗಿದ್ದರೂ, ಆ ರೀತಿ ಅವಳಾನ್ನು ಕರೆದುದ್ದಕ್ಕೆ ನನ್ನನ್ನು ತಿದ್ದಿದರು. ಭಾರತೀಯ ಸಂಸ್ಕೃತಿಯಲ್ಲಿ ಹಿರಿಯ ಸೋದರ ಅಥವಾ ಸೋದರಿಯರಿಗೆ “ಅಕ್ಕ” ಅಥವಾ “ಚೇಚಿ” ಎಂದು ಸಂಬೋಧಿಸಿ ಗೌರವ ತೋರಿಸುತ್ತೇವೆ. ಅವಳಿಗೆ ಸರಿಯಾಗಿ ಗೌರವ ತೋರಿಸುತ್ತ ನಾನು “ಗಾಯತ್ರಿ ಅಕ್ಕ” ಎಂದು ಕರೆಯಬೇಕು ಎಂದು ಸ್ವಾಮೀಜಿ ಕಲಿಸಿದರು. ಅಮ್ಮ ನನಗೆ ತಬಲಾ ನುಡಿಸುವ ವಿಶೇಷವಾದ ಅವಕಾಶ ನೀಡಿದರು; ಅಮ್ಮನ ವಿದೇಶಯಾತ್ರೆಗಳಲ್ಲೆಲ್ಲಾ ಮೊದಲ ಮಹಿಳಾ ತಬಲಾ ವಾದಕಿಯಾಗಿ ನನ್ನನ್ನು ಸ್ವಾಮಿಗಳೆಲ್ಲರೂ ಪ್ರೀತಿಯಿಂದ ಒಪ್ಪಿಕೊಂಡರು. ಅವರೆಲ್ಲರೂ ನನ್ನ ಕ್ರಿಯಾತ್ಮಕತೆಯನ್ನು ಪೋಷಿಸಿದರು, ತಿದ್ದಿದರು ಪ್ರೋತ್ಸಾಹಿಸಿದರು, ಕಲಿಸಿದರು. ಸೋಜಿಗವೆಂಬಂತೆ, ಆಶ್ರಮದ ಅತ್ಯುನ್ನತ ಸಂನ್ಯಾಸಿನಿಯಾದ ಸ್ತ್ರೀ – ಗೇಲ್ ಳೇ, ನನ್ನ ಪ್ರತಿಭೆಗೆ ತಣ್ಣೀರೆರಚುತ್ತಿದ್ದಳು. ನನ್ನ ಹಾಗು ಇತರ ಹೆಣ್ಣುಮಕ್ಕಳ ಉತ್ಸಾಹ ಕುಗ್ಗಿಸಿ, ನಿಯಂತ್ರಿಸಿ ಅವಹೇಳನ ಮಾಡುತ್ತಿದ್ದಳು. ಸ್ವಾಮಿಗಳೆಲ್ಲರೂ ಸದಾ ಹಸನ್ಮುಖಿಗಳು, ತಮಾಷೆ ನಗುಗಳಲ್ಲಿ ಮುಳುಗುತ್ತಿದ್ದವರು, ಮತ್ತೆ ಆಧ್ಯಾತ್ಮಿಕ ವರ್ಚಸ್ಸು ಉಳ್ಳವರಾಗಿದ್ದರು. ಆದರೆ ಗೇಲ್ ಸದಾ ಸಿಡಿಮಿಡಿ ಮಾಡುತ್ತಿದ್ದಳು, ಎಲ್ಲದರಿಂದಲೂ ಎಲ್ಲರ ಮೇಲೂ ಸಿಟ್ಟಿಗೇಳುತ್ತಿದ್ದಳು. ಉನ್ನತ ನೆಲೆಯಲ್ಲಿ ಇರುವವರಿಂದ ಅಪೇಕ್ಷಣೀಯವಾದ ಹೃದಯ ವೈಶಾಲ್ಯ ಅವಳಲ್ಲಿ ಇರಲೇಇಲ್ಲ. ವಾಸ್ತವದಲ್ಲಿ, ಗೇಲ್ ಸ್ತ್ರೀಯರಿಗೆ ಯಾವ ರೀತಿಯಲ್ಲೂ ಆದರ್ಶಪ್ರಾಯವಾಗಿರಲೇ ಇಲ್ಲ. ಸ್ತ್ರೀಯರ ಹಕ್ಕುಗಳ ಬಗ್ಗೆ ಅರಿವುಂಟುಮಾಡುವವರಲ್ಲಿ ಅಮ್ಮ ಮುಂಚೂಣಿಯಲ್ಲಿದ್ದಾರೆ. ಹೋಮ ಪೂಜೆ ಇತ್ಯಾದಿಗಳನ್ನು ಮಾಡುವ ಹಕ್ಕನ್ನು ನೀಡಿ ಭಾರತದಲ್ಲಿ ಮೊದಲ ಬಾರಿಗೆ ಅಮ್ಮ ಪೂಜಾರಿಣಿಯರನ್ನು ತಯಾರು ಮಾಡಿದರು. ಅಮ್ಮನ ಎಲ್ಲಾ ಸಂಸ್ಥೆಗಳಲ್ಲಿ ಮಹಿಳೆಯರು ಉನ್ನತ ಪದವಿಗಳಲ್ಲಿದ್ದಾರೆ. ಶಾಲೆಗಳ ಪ್ರಾಂಶುಪಾಲರಾಗಿದ್ದಾರೆ, ವಿಶ್ವವಿದ್ಯಾಲಯದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾಗಿದ್ದಾರೆ. ಮಹಿಳೆಯರ ಸಬಲೀಕರಣ ಯೋಜನೆಯಡಿಯಲ್ಲಿ ಭಾರತದಾದ್ಯಂತ ಮಹಿಳೇಯರಿಗೆ “ಲೈಫ್ ಸ್ಕಿಲ್ಸ್” (“ಜೀವನ ಕೌಶಲ್ಯವನ್ನು”) ಕಲಿಸುವಂಥ ಯೋಜನೆಗಳೂ ಚಟುವಟಿಕೆಗಳೂ ಇವೆ. ನಾನು ಸ್ವತಃ ಈ ಯೋಜನೆಗಳ ಮೂಲಕ ಹಲವಾರು ಮಹಿಳೆಯರ ಸಂಪರ್ಕದಲ್ಲಿದ್ದೇನೆ. ಅಮ್ಮ ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಮಾಡಿರುವ ಭಾಷಣಗಳಲ್ಲಿ ಅನೇಕ ಭಾಷಣಗಳು ಮಹಿಳೆಯರ ಉದ್ಧಾರದ ಬಗ್ಗೆಯೇ ಇದೆ; ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಬಗೆ ಯಾವುದು ಎಂದು ಆ ಭಾಷಣಗಳಲ್ಲಿ ಅಮ್ಮ ಚರ್ಚಿಸುತ್ತಾರೆ. ಪಟ್ಟಿ ದೀರ್ಘವಿದೆ. ಇದನ್ನು ವಿಶದೀಕರಿಸುತ್ತಾ ಹೋದರೆ ಸೂರ್ಯನಿಗೆ ಮೋಂಬತ್ತಿ ಹಿಡಿದಂತಾಗುತ್ತದೆ ಅಷ್ಟೇ.
“ಅವರು ಮಾಡಿದಂಥ ಗಾಯ ಮಾಗಲು ಅಮ್ಮನ ಪ್ರೇಮ ಕರುಣೆಗಳ ಬೋಧನೆ ಮಾತ್ರವೇ ನನಗೆ ಸಹಾಯಮಾಡಿರುವುದು.”
ವರ್ಷಗಳು ಕಳೆದಂತೆ ಗೇಲ್ ಅದೆಷ್ಟು ಕಹಿಯಾಗಿಹೋಗಿದ್ದಳು ಎಂಬುದನ್ನು ಕಂಡು ನನಗೆ ಬಹಳ ಖೇದವಾಯಿತು. ಇವಳನ್ನು ನಾನು ಹಿಂದೆ ಅಭಿಮಾನದಿಂದ, ಗೌರವದಿಂದ ಕಾಣುತ್ತಿದ್ದೆ. ಹಾಗಿದ್ದೂ ಕಡೆಗೆ ಉಳಿದಿದ್ದು ಮರೆಯಲು ಕಷ್ಟವಾಗುವ ವೇದನಾಮಯ ಅನುಭವಗಳು ಮಾತ್ರವಾದವಲ್ಲಾ! ಅವಳ ಯಾವುದನ್ನು ಪ್ರತಿನಿಧಿಸುತ್ತಾಳೋ ಅದರ ಪ್ರತಿ ಗೌರವಾದರಗಳಿಂದ ಅವಳ ಪಾದವನ್ನು ನಾನು ಎಷ್ಟೋ ಸಲ ಮುಟ್ಟಿ ನಮಸ್ಕರಿಸಿದ್ದೆ; ಅದು ಅವಳು ಪರಮಪ್ರೇಮದ ಮಾರ್ಗದಲ್ಲಿರುವ ಸಂನ್ಯಾಸಿನಿ ಎಂಬ ಕಾರಣದಿಂದ. ಆದರೆ ಅವಳು ಈ ಮಾರ್ಗವನ್ನು ಪೂರ್ತಿ ಹಾಳುಗೆಡವಿದಳು; ತಾನು ಮಾಡಿದ ಪ್ರತಿಜ್ಞೆಗೆ ಅನುಸಾರ ಜೀವಿಸಲು ಅಸಮರ್ಥಳಾದಳು. ಬದಲಿಗೆ ಅದರ ದುರುಪಯೋಗ ಮಾಡಿಕೊಂಡು, ಇತರರಿಗೆ ವೇದನೆ ನೀಡಿದಳು. ಅವಳ ಮನಸ್ಸಿಗೆ ಶಾಂತಿ ದೊರಕಲಿ, ಅವಳು ಚೆನ್ನಾಗಿರುವಂತಾಗಲಿ! ಎಲ್ಲಕ್ಕೂ ಉತ್ತರ ದ್ವೇಷ ಸಿಟ್ಟಲ್ಲ, ಬದಲಿಗೆ ಪ್ರೇಮ ಎಂದು ಅವಳು ಅರಿತುಕೊಳ್ಳಲಿ.
ನಾನು ಈ ಲೇಖನವನ್ನು ಬರೆಯುತ್ತಿರುವ ಈ ಹೊತ್ತು ತಿಳಿಯಬಯಸುವುದೇನೆಂದರೆ ನಾನು ಯಾವ ರೀತಿಯಲ್ಲೂ ಅಧಿಕೃತವಾಗಿ ಅಮ್ಮನ ಆಶ್ರಮಕ್ಕೆ ಅಫಿಲಿಯೇಟ್ ಆಗಿಲ್ಲ. ಆಧ್ಯಾತ್ಮವನ್ನು ನನ್ನ ಮಾರ್ಗವಾಗಿ ಆರಿಸಿಕೊಂಡಿದ್ದೇನೆ. ಕಳೆದ ೨೨ ವರ್ಷಗಳಿಂದ ಅಮ್ಮನ ಜೊತೆ ಯಾತ್ರೆಗಳಲ್ಲಿ ಹೋಗಿ ಸೇವೆ ಮಾಡುತ್ತೇನೆ; ಇದು ನನ್ನದೇ ನಿರ್ಣಯ. ಅಮ್ಮ ಎಂದಿಗೂ ನನಗೆ “ಶಿಕ್ಷಣ ಮೊದಲ ಆದ್ಯತೆ ಆಗಿರಬೇಕು” ಎಂದೇ ಒತ್ತುನೀಡಿದ್ದಾರೆ. ನಾನೇ ನನ್ನ ಕಣ್ಣಿನಿಂದ ಪ್ರಪಂಚ ನೋಡಬೇಕು, ವಿಚಾರ ಮಾಡಿ ಸ್ವಂತವಾಗಿ ನಿರ್ಣಯ ಕೈಗೊಳ್ಳಬೇಕು ಎಂದು ಉತ್ತೇಜನ ನೀಡಿದ್ದಾರೆ. ಅಮ್ಮ ನನ್ನಲ್ಲಿನ ಸೃಜನಾತ್ಮಕ ಪ್ರತಿಭೆಗಳನ್ನು ಪೋಷಿಸಿದ್ದಾರೆ. ನಾನಿಂದು ಸ್ವತಂತ್ರಳೂ ಸಬಲಳೂ ಆಗಿರುವುದು ಅಮ್ಮನಿಂದಾಗಿಯೇ. ನನಗೇನಾದರೂ ಆಶ್ರಮದ ಕಡೆಯಿಂದ ಅಹಿತಕರವಾದ ಕಹಿ ಅನುಭವಗಳಾಗಿದ್ದರೆ ಅದು ಕೇವಲ ಗೇಲ್ ಳ ಬೋಧನೆಗಳಿಂದಾಗಿ.
Source: Anu Iyer’s Memories of Gayatri