ಬ್ರಹ್ಮಚಾರಿಣಿ ಲಕ್ಷ್ಮಿ ಬರೆದ ಪತ್ರ ( ಜನವರಿ ೧೫, ೨೦೧೪)

ನನ್ನ ಹೆಸರು ಲಕ್ಷ್ಮಿ. ಹಾಲೆಂಡ್ ಮೂಲದವಳಾದ ನಾನು ಕಳೆದ ೨೯ ವರ್ಷಗಳಿಂದ ಅಮ್ಮನ ಅಮೃತಪುರಿಯ ನಿವಾಸಿಯಾಗಿದ್ದೇನೆ. ಅಲ್ಲದೆ, ಕಳೆದ ೧೯ ವರ್ಷಗಳಿಂದ ಆಶ್ರಮದಲ್ಲಿ ಅಮ್ಮನ ಕೋಣೆಯಲ್ಲಿ ಪೂರ್ಣಾವಧಿ ಅಮ್ಮನ ಸೇವೆ ಮಾಡುತ್ತಲಿದ್ದೇನೆ. ನನ್ನ ಕಡೆಯ ಗಳಿಗೆಯವರೆಗೂ ಅಮ್ಮನ ಸೇವೆಮಾಡುವ ಈ ಸೌಭಾಗ್ಯ ನನ್ನೊಂದಿಗೆ ಇರಬೇಕು ಎನ್ನುವುದೊಂದೇ ನನ್ನ ಮನದಾಳದ ಪ್ರಾರ್ಥನೆ. ನಾನು ಇಲ್ಲಿ ಬರೆಯಬೇಕಾಗಿಬಂದದ್ದು ಏಕೆಂದರೆ ನಾನು ಮತ್ತು ಸ್ವಾಮಿನಿ ಆತ್ಮಪ್ರಾಣ ( ಡಾಕ್ಟರ್ ಲೀಲಾ ) ಅಮ್ಮನನ್ನು ಬಿಟ್ಟು ಹೋದೆವು ಎಂದು ಇಂಟರ್ನೆಟ್ ನಲ್ಲಿ ವದಂತಿಯೊಂದು ಹರಡುತ್ತಿದೆ ಎಂದು ಯಾರೋ ನನ್ನ ಗಮನಕ್ಕೆ ತಂದರು. ಇಲ್ಲ. ನಾವಿಬ್ಬರೂ ಅಮ್ಮನ ಜೊತೆಗೇ ಇದ್ದೇವೆ, ಸೇವಾನಿರತರಾಗಿ ಸಮಾಧಾನದಿಂದ, ತೃಪ್ತಿಯಿಂದ ಇದ್ದೇವೆ. ಗೇಲ್ ಬಗ್ಗೆ ಮತ್ತು ಅವಳೊಂದಿಗಿನ ನನ್ನ ವೈಯಕ್ತಿಕ ಅನುಭವಗಳ ಬಗ್ಗೆ ಕೆಲವು ವಾಸ್ತವ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕಾದುದು ನನ್ನ ಧರ್ಮ ಎಂದು ನನಗೆ ಈ ಹಂತದಲ್ಲಿ ಅನ್ನಿಸುತ್ತಿದೆ.

ಮೊಟ್ಟೆ ಮೊದಲನೆಯದಾಗಿ, ತಾನು ಅಮ್ಮನ ಕೋಣೆಯಲ್ಲಿ ೨೦ ವರ್ಷ ಇದ್ದು ಅಮ್ಮನ ಸೇವೆ ಮಾಡುತ್ತಿದ್ದೆ ಎಂದು ಅವಳು ಹೇಳಿಕೊಂಡಿರುವುದು ನಿಜವಲ್ಲ. ೧೯೯೯ ರಲ್ಲಿ ಅವಳು ಅಮ್ಮನನ್ನು ಬಿಟ್ಟುಹೋಗುವ ಮುಂಚೆ, ಅಂದರೆ ಸುಮಾರು ಐದಾರು ವರ್ಷಗಳಿಂದ ಅಮ್ಮನ ಕೋಣೆಯಲ್ಲಿ ಇರುತ್ತಿರಲಿಲ್ಲ. ಮೇಲಿನ ಮಹಡಿಯ ಕೋಣೆಯಲ್ಲಿರುತ್ತಿದ್ದಳು. ಆಗ ಯಾವಾಗಲಾದರೊಮ್ಮೆ ನನಗೆ ಸಹಾಯ ಮಾಡಲು ಬರುತ್ತಿದ್ದಳಷ್ಟೇ. ನಾನು ಅಮ್ಮನ ಕೋಣೆಯಲ್ಲಿ ಇರಲು ಶುರುಮಾಡುವುದಕ್ಕೆ ಮುಂಚೆಯೂ, ಅಮ್ಮ ಮತ್ತು ಗೇಲ್ ಜೊತೆಗೆ ಇತರ ಹೆಣ್ಣುಮಕ್ಕಳೂ ಇರುತ್ತಿದ್ದರು. ಗೇಲ್ ಕೋಣೆಯಿಂದ ಹೋದಮೇಲೆ ಸ್ವಾಮಿನಿ ಕೃಷ್ಣಾಮೃತ ಪ್ರಾಣ (ಸೌಮ್ಯ, ಆಸ್ಟ್ರೇಲಿಯಾ) ಅಮ್ಮನ ಕೋಣೆಯಲ್ಲಿ ಇರತೊಡಗಿದರು.

೧೯೮೧ರಲ್ಲಿ, ಗೇಲ್ ಮೊದಲ ಬಾರಿಗೆ ಅಮ್ಮನನ್ನು ಕಾಣಲು ಬಂದಾಗ, ಅವಳ ಹತ್ತಿರ ಒಂದು ಜೋಡಿ ಬಟ್ಟೆಯೂ ಇರಲಿಲ್ಲ. ಆಗ ಆಶ್ರಮವೂ ಇರಲಿಲ್ಲ. ಇದ್ದಿದ್ದು ಅಮ್ಮನ ಕುಟುಂಬ ವರ್ಗದವರ ಮನೆ ಮಾತ್ರ. ಹಾಗಿದ್ದೂ, ಅವಳ ಹೆಸರನ್ನಾಗಲಿ, ಊರನ್ನಾಗಲೀ, ಹಿನ್ನೆಲೆಯನ್ನಾಗಲೀ ಏನನ್ನೂ ಕೇಳದೆ ಅಮ್ಮ ಅವಳನ್ನು ಪೂರ್ಣವಾಗಿ ಸ್ವೀಕರಿಸಿದರು, ಎಲ್ಲಾ ಜವಾಬ್ದಾರಿಯನ್ನೂ ಕೊಟ್ಟರು. ಆ ದಿನದಿಂದ ಹಿಡಿದು, ಆಶ್ರಮ ಬಿಟ್ಟು ಹೋದ ದಿನದವರೆಗೂ, ಅವಳು ರಾಣಿಯ ಹಾಗೆ ಇದ್ದಳು. ಅಮ್ಮನ ತಂದೆತಾಯಿಯರ ಮೇಲೆ, ಸೋದರಿಯರ ಮೇಲೆ, ಬಂಧುಗಳ ಮೇಲೆ, ಭಕ್ತರ ಮೇಲೆ, ಆಶ್ರಮವಾಸಿಗಳ ಮೇಲೆ, ಅಮ್ಮನ ಶಿಷ್ಯರ ಮೇಲೂ ಅವಳು ಅಧಿಕಾರ ಚಲಾಯಿಸುತ್ತಿದ್ದಳು. ಗೇಲ್ ಯಾವಾಗಲೂ ಕೆಲವೇ ಕೆಲವರ ಜೊತೆ, ಅದೂ ಅವಳ ಮಾತನ್ನು ಕೇಳುವವರ ಜೊತೆ ಗುಂಪುಮಾಡಿಕೊಂಡಿರುತ್ತಿದ್ದಳು. ಸರ್ವಾಧಿಕಾರಿಯ ಹಾಗೆ, ಇನ್ನೊಬ್ಬರ ಭಾವನೆಗಳ ಬಗ್ಗೆ ಒಂದಿಷ್ಟೂ ಕಳಕಳಿ ಇಲ್ಲದೆ, ಎಲ್ಲರ ಮೇಲೂ ದಬ್ಬಾಳಿಕೆ ಮಾಡುತ್ತಿದ್ದಳು.

ಗೇಲ್, ಎಷ್ಟು ಸಲ ನಾನು ನಿನ್ನ ನಿಯಂತ್ರಣವಿಲ್ಲದ ಕೋಪವನ್ನೂ, ಹಿಂಸಾತ್ಮಕ ಆಕ್ರಮಣವನ್ನೂ ಸಹಿಸಬೇಕಾಯಿತು? ಹೊಡೆಯುತ್ತಿದ್ದೆ, ಒದೆಯುತ್ತಿದ್ದೆ, ಗಿಲ್ಲುತ್ತಿದ್ದೆ, ನನ್ನ ಮುಖದಲ್ಲಿ ನೇರವಾಗಿ ಉಗಿಯುತ್ತಿದ್ದೆ, ಕೂದಲು ಕೀಳುತ್ತಿದ್ದೆ, ಬೆದರಿಸುತ್ತಿದ್ದೆ….. ಇದೆಲ್ಲವೂ ಕಾರ್ಯತಃ ಪ್ರತಿನಿತ್ಯದ ನಿನ್ನ ಕೆಲಸವಾಗಿಹೋಯಿತು. ಬಿಸಿಯಾಗಿದ್ದ ಐರನ್ ಬಾಕ್ಸ್ ಅನ್ನು ನನ್ನ ಮೇಲೆ ನೀನು ಎಸೆದಿದ್ದು ನೆನಪಿದೆಯಾ? ಆಶ್ರಮವಾಸಿಗಳು ಮಾತ್ರವಲ್ಲ, ಯೂರೋಪ್ ಮತ್ತು ಅಮೆರಿಕಾದ ಭಕ್ತರೂ ಸಹ ನಿನ್ನ ಇಂಥ ಘಟನೆಗಳಿಗೆ ಸಾಕ್ಷಿಯಿದ್ದಾರೆ.

“ಗೇಲ್, ಎಷ್ಟು ಸಲ ನಾನು ನಿನ್ನ ನಿಯಂತ್ರಣವಿಲ್ಲದ ಕೋಪವನ್ನೂ, ಹಿಂಸಾತ್ಮಕ ಆಕ್ರಮಣವನ್ನೂ ಸಹಿಸಬೇಕಾಯಿತು? ಹೊಡೆಯುತ್ತಿದ್ದೆ, ಒದೆಯುತ್ತಿದ್ದೆ, ಗಿಲ್ಲುತ್ತಿದ್ದೆ, ನನ್ನ ಮುಖದಲ್ಲಿ ನೇರವಾಗಿ ಉಗಿಯುತ್ತಿದ್ದೆ, ಕೂದಲು ಕೀಳುತ್ತಿದ್ದೆ, ಬೆದರಿಸುತ್ತಿದ್ದೆ….. ಇದೆಲ್ಲವೂ ಕಾರ್ಯತಃ ಪ್ರತಿನಿತ್ಯದ ನಿನ್ನ ಕೆಲಸವಾಗಿಹೋಯಿತು. ಬಿಸಿಯಾಗಿದ್ದ ಐರನ್ ಬಾಕ್ಸ್ ಅನ್ನು ನನ್ನ ಮೇಲೆ ನೀನು ಎಸೆದಿದ್ದು ನೆನಪಿದೆಯಾ?”

ನಿನ್ನನ್ನು ಆಶ್ರಮದಲ್ಲಿ ಯಾರೂ ಪ್ರೀತಿಯಿಂದ ಕಾಣಲಿಲ್ಲ, ಯಾರೂ ನಿನಗೆ ಬೆಂಬಲ ಇರಲಿಲ್ಲ ಎನ್ನುವುದೆಲ್ಲಾ ಎಷ್ಟು ಸುಳ್ಳು ಅಲ್ಲವೆ! ವಾಸ್ತವವಾಗಿ, ಭಾರತದ ಮತ್ತು ಪಶ್ಚಿಮದ ಆಶ್ರಮವಾಸಿಗಳೆಲ್ಲರೂ, ಭಕ್ತರು ಮತ್ತು ಶಿಷ್ಯರೂ ಸಹ -ಎಲ್ಲರೂ ನಿನ್ನನ್ನು ಎಷ್ಟು ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದರು. ಭಕ್ತರು ನಿನ್ನನ್ನು ಸಾಂಪ್ರದಾಯಿಕ ರೀತಿಯಲ್ಲಿ ಬರಮಾಡಿಕೊಳ್ಳುತ್ತಿರಲಿಲ್ಲವೆ, ನಿನ್ನ ಪಾದಪೂಜೆಯನ್ನು ಮಾಡುತ್ತಿರಲಿಲ್ಲವೆ? ನಿನಗೆ ಭಾರತೀಯ ಆಹಾರವನ್ನು ತಂದುಕೊಡಲು ಭಾರತೀಯ ಆಶ್ರಮವಾಸಿಗಳು, ಪಶ್ಚಿಮದ ಆಹಾರವನ್ನು ತಂದುಕೊಡಲು ಪಶ್ಚಿಮದ ಆಶ್ರಮವಾಸಿಗಳೂ ಇರಲಿಲ್ಲವೆ? ನಿನ್ನ ಬಟ್ಟೆ ಒಗೆಯಲು ಜನರು, ನಿನಗೆ ಮಸಾಜ್ ಮಾಡಲು ಜನರು ಇರಲಿಲ್ಲವೆ? ನಿನ್ನ ಅಂತಃಸಾಕ್ಷಿಗೆ ಮೋಸಮಾಡದೆ ನೀನು ‘ಇದೆಲ್ಲಾ ನಿಜವಲ್ಲ’ ಎಂದು ಹೇಳಲು ನಿನಗೆ ಸಾಧ್ಯವಿದೆಯೇ?

ಗೇಲ್, ವಾಸ್ತವದಲ್ಲಿ, ನೀನು ಸನ್ಯಾಸ ಜೀವನವನ್ನು ಯಾಕೆ ಬಿಟ್ಟೆ, ಆಶ್ರಮ ಜೀವನವನ್ನು ಯಾಕೆ ಬಿಟ್ಟೆ ಎಂಬುದು ನಿನಗೂ, ನನಗೂ ಹಾಗು ಕೆಲವರಿಗೆ ಚೆನ್ನಾಗಿ ಗೊತ್ತು. ಅಮ್ಮನ ಒಬ್ಬ ಅಮೆರಿಕನ್ ಭಕ್ತನನ್ನು ನೀನು ಪ್ರೇಮಿಸುತ್ತಿದ್ದೆ. ನೀನು ಹೋದಮೇಲೆ ಆತನೇ ವಿಷಯವನ್ನು ಅಮ್ಮನ ಬಳಿ ಹೇಳಿದ. ಅವನು ಗಾಬರಿಯಾಗಿ, ನೀನು ಆತನಿಗೆ ಕಳಿಸಿದ್ದ ಈಮೇಲ್ ಗಳನ್ನು ಅಮ್ಮನಿಗೆ ಆತನೇ ತೋರಿಸಿದ. ಬ್ರಹ್ಮಚಾರಿ ಶುಭಾಮೃತ ಮತ್ತು ಇನ್ನೊಬ್ಬ ಆಶ್ರಮವಾಸಿ ಈ ಈಮೇಲ್ ಗಳನ್ನು ಮಲಯಾಳದಲ್ಲಿ ಅನುವಾದಿಸಿ ಅಮ್ಮನಿಗೆ ಹೇಳುವಾಗ ನಾನು ಅಲ್ಲಿದ್ದೆ. ಆ ನಿಷ್ಕಳಂಕ ವ್ಯಕ್ತಿಯನ್ನು ಅಮ್ಮನಿಂದ ದೂರಮಾಡಿ ನಿನ್ನ ಬುಟ್ಟಿಗೆ ಹಾಕಿಕೊಳ್ಳಲು ನೀನು ಪ್ರಯತ್ನಿಸಿದೆ. ಆದರೆ ನಿನ್ನ ಬಯಕೆ ಈಡೇರಲಿಲ್ಲ. ನಿರೀಕ್ಷೆಗಳು ಈಡೇರದೆ, ಬಯಕೆಗಳು ಪೂರೈಕೆಯಾಗದೆ ಅವು ನಿನ್ನಲ್ಲಿ ಸೇಡು, ಅಸೂಯೆಗಳನ್ನು ತುಂಬಿದೆ, ಗೇಲ್! ಜನರ ನಿಷ್ಕಳಂಕ ಹೃದಯಗಳಲ್ಲಿ ನಿನ್ನ ಸುಳ್ಳುಗಳ ಹಾಗು ದುಷ್ಟತೆಗಳ ವಿಷವನ್ನು ಕಕ್ಕಿ ಅವರಲ್ಲಿ ರೋಗ ಹರಡಿಸುವ ನಿನ್ನ ವ್ಯರ್ಥ ಪ್ರಯತ್ನದಿಂದಾಗಿ ನೀನೊಂದು ವಿಷಸರ್ಪವಾಗಿ ಮಾರ್ಪಟ್ಟಿದ್ದೀಯ.

“ಗೇಲ್, ವಾಸ್ತವದಲ್ಲಿ, ನೀನು ಸನ್ಯಾಸ ಜೀವನವನ್ನು ಯಾಕೆ ಬಿಟ್ಟೆ, ಆಶ್ರಮ ಜೀವನವನ್ನು ಯಾಕೆ ಬಿಟ್ಟೆ ಎಂಬುದು ನಿನಗೂ, ನನಗೂ ಹಾಗು ಕೆಲವರಿಗೆ ಚೆನ್ನಾಗಿ ಗೊತ್ತು. ಅಮ್ಮನ ಒಬ್ಬ ಅಮೆರಿಕನ್ ಭಕ್ತನನ್ನು ನೀನು ಪ್ರೇಮಿಸುತ್ತಿದ್ದೆ.”

ನಿನಗೆ ಒಂದು ಆಸೆಯಿತ್ತು; ಪ್ರಪಂಚದಲ್ಲೆಲ್ಲಾ ಯಾತ್ರೆ ಮಾಡುತ್ತಾ ನೀನಾಗಿಯೇ ಕಾರ್ಯಕ್ರಮಗಳನ್ನು ಕೊಡಬೇಕು ಎಂಬ ಆಸೆ. ಈ ನಿನ್ನ ಬಯಕೆಯನ್ನು ನೀನೇ ನನ್ನ ಹತ್ತಿರ ಮತ್ತು ಕೆಲವರ ಹತ್ತಿರ ಹೇಳಿಕೊಂಡಿದ್ದೀಯೆ. ಇಂಥ ಆಸೆಗಳಿಂದಾಗಿ ನೀನು ಆಶ್ರಮ ತೊರೆದೆ. ಏನೇಆದರೂ, ನಿನ್ನ ಸ್ವಾರ್ಥಪೂರಿತ ಉದ್ದೇಶಗಳಾಗಲೀ ಕಸುಗಳಾಗಲೀ ಯಾವುದೂ ಈಡೇರಲಿಲ್ಲ. ಮಹಾತ್ಮರು, ಸದ್ಗುರುಗಳು ಹೇಳಿದ್ದಾರೆ, “ಬಯಕೆಗಳು ಈಡೇರದಿದ್ದಾಗ ಅವು ಸಿಟ್ಟು, ಸೇಡು ಇಂಥ ಭಾವಗಳಾಗಿ ಪ್ರಕಟವಾಗುತ್ತವೆ” ಎಂದು. ಅವುಗಳಿಂದಾಗಿ ಕಡೆಯಲ್ಲಿ ನಾಶವಾಗುವವರು ನಾವೇ. ನಿನಗೆ ಈಗ ಆಗುತ್ತಿರುವುದೂ ಇದೇ.

ಅಪಾರ ಕರುಣೆಯಿಂದಾಗಿ ಅಮ್ಮ, ಮುಂದೆ ನಿನ್ನಲ್ಲಿ ಸ್ವಲ್ಪವಾದರೂ ಬದಲಾವಣೆ ಆದೀತೆಂದು ಆಶಿಸಿ, ನಿನಗೆ ಅದೆಷ್ಟು ಅವಕಾಶಗಳನ್ನು ಕರುಣಿಸಿದರು! ಅಂತಿಮವಾಗಿ ಅಮ್ಮ ನಿನಗೆ ಸನ್ಯಾಸವನ್ನೂ ಕರುಣಿಸಿದರು! ಸನ್ಯಾಸ ಎಂಬುದು ಎಷ್ಟು ಪವಿತ್ರವಾದ ಜೀವನವೆಂಬುದು ನಿನಗೆ ಏನಾದರೂ ಗೊತ್ತೇ? ಮಹಾತ್ಮರಿಗೆ ಹಿಂದೆ ಆದದ್ದೂ, ಮುಂದೆ ಆಗುವುದೂ ಮತ್ತೆ ವರ್ತಮಾನ – ಎಲ್ಲವೂ ತಿಳಿದಿರುತ್ತದೆ. ಹಾಗಿದ್ದೂ ಅವರು ಯಾವುದೇ ಭಿನ್ನ ಭೇದ ಮಾಡದೆ ಬೆಳೆಯಲು – ಪ್ರಗತಿ ಹೊಂದಲು ಎಲ್ಲರಿಗೂ ಅವಕಾಶಗಳನ್ನು ಕೊಡುತ್ತಾರೆ. ಭೂಮಿ ತಾಯಿಯ ಹಾಗೆ ತಾಳ್ಮೆಯಿಂದ ಕಾಯುತ್ತಾರೆ. ಆದರೆ ನೀನು, ನಿನ್ನ ಇಷ್ಟಾನಿಷ್ಟಗಳಿಗೆ ಮಾತ್ರ ಬೆಲೆ ಕೊಟ್ಟುಕೊಂಡು, ಅಂಥಾ ಅಮೂಲ್ಯ ಅವಕಾಶಗಳನ್ನೆಲ್ಲಾ ಗಾಳಿಗೆ ತೂರಿಬಿಟ್ಟೆ. ನಿನ್ನ ಮನಸ್ಸಿನ ದುರ್ಗುಣಗಳಿಗೆ ದಾಸಿಯಾಗಿ, ಅದರಲ್ಲಿ ಮುಳುಗಿ ಹೋದ ನೀನು ಎಂದಿಗೂ ಅಮ್ಮನ ಪ್ರೇಮ, ಕರುಣೆ ಮತ್ತು ಮಾರ್ಗದರ್ಶನವನ್ನು ಸ್ವೀಕರಿಸುವಂತಾಗಲೇ ಇಲ್ಲ. ನಿನ್ನ ತಪ್ಪುಗಳನ್ನು, ನಿನ್ನ ನ್ಯೂನತೆಗಳನ್ನು, ನಿನ್ನ ದೌರ್ಬಲ್ಯವನ್ನು ಅಮ್ಮನ ಮೇಲೇ ನೀನು ಹೊರಿಸಿಬೆಟ್ಟೆ. ಈ ಕಾರ್ಯ ವಿಧಾನದಲ್ಲಿ, ನಿನ್ನ ಮನಸ್ಸು ಅಮ್ಮನ ಪ್ರತಿ ದ್ವೇಷದಿಂದ ತುಂಬಿಹೋಗಿದೆ.

“ಈಗ ನಮಗೆ ತಿಳಿದಿದೆ ನೀನು ಎಷ್ಟು ಸಮರ್ಥೆ ಎಂದು- ಇಷ್ಟೊಂದು ಸಿಟ್ಟು, ದ್ವೇಷ, ಕುಹಕಬುದ್ಧಿ -ನನಗೆ ಈ ದುರ್ಘಟನೆಗಳೆಲ್ಲವೂ ಆಕಸ್ಮಿಕವೋ ಅಥವಾ ಎಂಬ ಸಂಶಯವನ್ನು ಮೂಡಿಸುತ್ತಿದೆ.”

ನಿನ್ನ ಮನೋಭಾವ ನಿನ್ನ ನಡವಳಿಕೆ ನಮಗೆ ಅನೇಕ ಸಲ ನಿಜವಾಗಿಯೂ ಭಯಹುಟ್ಟಿಸುತ್ತಿತ್ತು. ಒಮ್ಮೆ ಸ್ವೀಡನ್ನಿನಲ್ಲಿ ನೀನು ಅಮ್ಮನನ್ನು ಒಂದು ದೋಣಿಯಲ್ಲಿ ಹತ್ತಿಸಿಕೊಂಡು, ಅದನ್ನು ನೀರು ಅಳವಿದ್ದ ಕಡೆ ಕೊಂಡೊಯ್ದು, ದೋಣಿಯನ್ನು ತಲೆಕೆಳಗೆ ಮಗುಚಿಹಾಕಿದ್ದು ನಮ್ಮಲ್ಲಿ ಅನೇಕರಿಗೆ ಇನ್ನೂ ಸ್ಪಷ್ಟವಾಗಿ ನೆನಪಿದೆ. ಯಾತ್ರೆಯ ತಂಡದಲ್ಲಿದ್ದ ನಾವು ಅನೇಕರು ಅಮ್ಮ ನಿನಗೆ “ಆಳವಿರುವ ಕಡೆ ದೋಣಿಯನ್ನು ಹಾಗೆ ಅಲುಗಿಸದಿರು, ಹುಷಾರು!” ಎಂದು ಜೋರಾಗಿ ಹೇಳುತ್ತಿದ್ದುದನ್ನು ಕೇಳಿದೆವು. ತಕ್ಷಣ, ದೋಣಿ ಮುಗುಚಿಕೊಂಡಿದ್ದು ನೋಡಿ ನಾವೆಲ್ಲಾ ಚೀರತೊಡಗಿದೆವು. ಅಮ್ಮ ತಲೆಕೆಳಗಾದ ದೋಣಿಯ ಕೆಳಗೆ ಕೊರೆಯುವ ನೀರಿನಲ್ಲಿ ಕಣ್ಮರೆಯಾಗಿದ್ದರು. ನಮಗೆ ಅದನ್ನು ನೆನೆಸಿಕೊಳ್ಳುವುದೂ ಭಯಂಕರ ಎನಿಸುತ್ತೆ.

ಇನ್ನೊಂದು ಸಲ ನೀನು ವಿಷಪೂರಿತ ನಾಯಿಕೊಡೆಗಳನ್ನು ಹಾಕಿ ಅಮ್ಮನಿಗೆ ಪಲ್ಯ ಮಾಡಿದೆ; ಬ್ರಹ್ಮಚಾರಿಣಿ ಪವಿತ್ರಾಮೃತ (ಲೀಲಾವತಿ) ಮತ್ತು ಬ್ರಹ್ಮಚಾರಿಣಿ ವಿನೀತಾಮೃತ (ಶ್ರೀಲತಾ) ಹಾಗೆ ಮಾಡಬೇಡ ಎಂದು ನಿನ್ನಲ್ಲಿ ವಿನಂತಿಸಿಕೊಂಡರೂ ನೀನು ಕೇಳಲಿಲ್ಲ. ಅದನ್ನು ತಿಂದು ಅಮ್ಮನಿಗೆ ಎರಡು ದಿನ ವಾಂತಿ ನಿಲ್ಲಲಿಲ್ಲ. ರಕ್ತ ಪರೀಕ್ಷೆ ಮಾಡಿದಾಗ ರಕ್ತದಲ್ಲಿ ವಿಷದ ಅಂಶವು ಪ್ರಾಣಕ್ಕೆ ಅಪಾಯವೊಡ್ಡುವ ಮಟ್ಟದಲ್ಲಿದ್ದುದು ಕಂಡುಬಂದಿತ್ತು. ಮತ್ತೊಂದು ಸಂದರ್ಭದಲ್ಲಿ ನೀನು ನಿಗದಿಯಾಗಿದ್ದಕ್ಕಿಂತಾ ಹೆಚ್ಚಿನ ಪ್ರಮಾಣದಲ್ಲಿ ಅಮ್ಮನಿಗೆ ಔಷಧಿಯೊಂದನ್ನು ಕೊಟ್ಟಿದ್ದೆ. ಅಮ್ಮನಿಗೆ ಹುಷಾರು ತಪ್ಪಿತು; ಹೊಟ್ಟೆ ಕೆಟ್ಟಿತು, ತಲೆ ಸುತ್ತು ಬಂತು, ಆಯಾಸವಾಯಿತು. ಆಗ ನೀನು ತಪ್ಪನ್ನು ನನ್ನ ಮೇಲೆ ಹೊರಿಸಲು ಪ್ರಯತ್ನಿಸಿದೆ. ಇದನ್ನೆಲ್ಲಾ ನೀನು ಮರೆಯಲು ಸಾಧ್ಯವೇ ಇಲ್ಲ.

ನಿನ್ನಂತೆಯೇ ಸ್ವಾಮಿನಿ ಕೃಷ್ಣಾಮೃತ ಪ್ರಾಣ ಹಾಗೂ ಸ್ವಾಮಿನಿ ಆತ್ಮಪ್ರಾಣ ಸನ್ಯಾಸ ದೀಕ್ಷೆ ಪಡೆದವರು. ನಿನ್ನ ವಿಕೃತ ಸ್ವಭಾವವನ್ನು ನೋಡಿ ಅವರಿಬ್ಬರಿಗೂ ಆಘಾತವಾಗಿದೆ. ಈಗ ನಮಗೆ ತಿಳಿದಿದೆ ನೀನು ಎಷ್ಟು ಸಮರ್ಥೆ ಎಂದು- ಇಷ್ಟೊಂದು ಸಿಟ್ಟು, ದ್ವೇಷ, ಕುಹಕಬುದ್ಧಿ -ನನಗೆ ಈ ದುರ್ಘಟನೆಗಳೆಲ್ಲವೂ ಆಕಸ್ಮಿಕವೋ ಅಥವಾ ಎಂಬ ಸಂಶಯವನ್ನು ಮೂಡಿಸುತ್ತಿದೆ. ಹೇಗಿದ್ದರೂ, ಅಮ್ಮ ಎಂದಿಗೂ ಯಾರಲ್ಲಿಯೂ ಈ ಘಟನೆಗಳ ಬಗ್ಗೆ ಹೇಳಿಲ್ಲ. ಅವನ್ನೆಲ್ಲಾ ಅಮ್ಮ ಸುಮ್ಮನೆ ಸ್ವೀಕರಿಸಿ, ನಿನ್ನನ್ನೂ ಕ್ಷಮಿಸಿ, ನಿನಗೆ ಎಂದಿನಂತೆ ಪ್ರೇಮ ಕರುಣೆಗಳನ್ನೇ ನೀಡಿ, ನಿನ್ನನ್ನು ಪೋಷಿಸಿದರು.

“ನಿನ್ನ ವಿಷಪೂರಿತ ನುಡಿಗಳನ್ನು ಸತ್ಯವೆಂದು ಹೇಳುತ್ತಾ ಅದನ್ನು ಬಿಕರಿಮಾಡಿ, ನಿಷ್ಕಳಂಕ ಜನರನ್ನು ಅಂಧರಾಗಿಸಲು ನೀನು ಪ್ರಯತ್ನಿಸುತ್ತಿದ್ದರೂ, ಅಮ್ಮ ಹೇಳುತ್ತಾರೆ, ಅಮ್ಮನಿಗೆ ನಿನ್ನ ಮೇಲೆ ಪ್ರೇಮವಲ್ಲದೆ ಬೇರೆ ಯಾವ ಭಾವನೆಯೂ ಇಲ್ಲವೆಂದು. ಇದನ್ನು ಕೇಳಿ, ನನಗೆ ಅಮ್ಮನ ಸೀಮಾತೀತ ಕರುಣೆಗೂ ಮತ್ತು ಮಾತೃತ್ವಕ್ಕೂ ಶಿರಬಾಗುವಂತಾಗುತ್ತದೆ.”

ಇದೆಲ್ಲಾ ಹೀಗಿದ್ದೂ ಸಹ, ಅಮ್ಮ ನಮಗೆ ಹೇಳುವುದು, ಅವಳಿಗಾಗಿ ಪ್ರಾರ್ಥಿಸಿರಿ ಎಂದೇ. ಇಷ್ಟಾದರೂ, ಇಂದಿಗೂ ಸಹ, ಅನೇಕ ವೇಳೆ ಅಮ್ಮ ನನ್ನ ಹೆಸರು ಕರೆಯುವ ಮುನ್ನ ಅವರ ಬಾಯಲ್ಲಿ ಮೊದಲು ಬರುವುದು “ಗಾಯತ್ರಿ” ಎಂಬ ಪದವೇ! ನಿನ್ನ ವಿಷಪೂರಿತ ನುಡಿಗಳನ್ನು ಸತ್ಯವೆಂದು ಹೇಳುತ್ತಾ ಅದನ್ನು ಬಿಕರಿಮಾಡಿ, ನಿಷ್ಕಳಂಕ ಜನರನ್ನು ಅಂಧರಾಗಿಸಲು ನೀನು ಪ್ರಯತ್ನಿಸುತ್ತಿದ್ದರೂ, ಅಮ್ಮ ಹೇಳುತ್ತಾರೆ, ಅಮ್ಮನಿಗೆ ನಿನ್ನ ಮೇಲೆ ಪ್ರೇಮವಲ್ಲದೆ ಬೇರೆ ಯಾವ ಭಾವನೆಯೂ ಇಲ್ಲವೆಂದು. ಇದನ್ನು ಕೇಳಿ, ನನಗೆ ಅಮ್ಮನ ಸೀಮಾತೀತ ಕರುಣೆಗೂ ಮತ್ತು ಮಾತೃತ್ವಕ್ಕೂ ಶಿರಬಾಗುವಂತಾಗುತ್ತದೆ.

ಮತಿಗೆಟ್ಟ ಮನಸ್ಸಿನ ದೋಷಾರೋಪಣೆಗಳಿಗೆ ವಿವರಣೆ ನೀಡಬೇಕಾದ ಅಥವಾ ಅಮ್ಮನ ಪರವಾಗಿ ಪ್ರತಿಪಾದಿಸುವ ಯಾವುದೇ ಅವಶ್ಯಕತೆಗಳು ಅಮ್ಮನಿಗೆ ಇಲ್ಲ. ಆದರೆ ಧರ್ಮದ ನೆಲೆಯಿಂದ ನೋಡಿದಾಗ ಈ ವಿಷಯಗಳನ್ನು ಸಾರ್ವಜನಿಕರಿಗೆ ಬಯಲು ಮಾಡಬೇಕಾದ ಅಗತ್ಯವಿದೆ ಎನಿಸುತ್ತದೆ.

ಗೇಲ್, ನಿನ್ನ ಮೇಲೆ ನನಗೆ ನಿಜಕ್ಕು ಕನಿಕರವಿದೆ.

ಅಂಧಕಾರದಿಂದ ನೀನು ಹೊರಬರುವಂತಾಗಲಿ ಎಂದು ಪ್ರಾರ್ಥಿಸುತ್ತಾ,

– ಲಕ್ಷ್ಮಿ

Source: A Letter From Brahmacharini Lakshmi

ಬ್ರಹ್ಮಚಾರಿ ಶುಭಾಮೃತರರಿಂದ ಬಂದ ಇಮೇಲ್

ಅಮ್ಮನ ಆಶ್ರಮದ ಹಿರಿಯ ಬ್ರಹ್ಮಚಾರಿಗಳಲ್ಲಿ ಒಬ್ಬರಾದ ಹಾಗು ಅಮ್ಮನ ಮುಖ್ಯ ಭಾಷಾಂತರಕಾರಕರಾದ ಬ್ರಹ್ಮಚಾರಿ ಶುಭಾಮೃತ ಚೈತನ್ಯರಿಂದ ನಮಗೆ ಈ ಇಮೇಲ್ ದೊರೆತಿದೆ.

ನನ್ನ ಹೆಸರು ಶುಭಾಮೃತ. ನಾನು ಅಮ್ಮನ ಆಶ್ರಮದಲ್ಲಿ ಆಶ್ರಮವಾಸಿಯಾಗಿ ೧೯೮೯ ರಿಂದ ಇದ್ದೇನೆ. ಗೇಲ್ ಟ್ರೆಡ್ ವೆಲ್ ಮತ್ತು ಅವಳ ಬೆಂಬಲಿಗರು ಅಮ್ಮ ಮತ್ತು ಅವರ ಸಂಸ್ಥೆಯ ಕುರಿತು ಅಪಪ್ರಚಾರ ಮಾಡುತ್ತಿರುವ ಸುಳ್ಳುಗಳನ್ನು ಹಾಗು ಕಟ್ಟು ಕಥೆಗಳನ್ನು ಗಮನಿಸುತ್ತಾ, ಈ ಕುರಿತು ಮಾತನಾಡಲು ನಾನು ನಿರ್ಬಂದ್ಧಿತನಾಗಿದ್ದೇನೆ.

ಸನ್ಯಾಸ ಮಾರ್ಗವು ಯಾವಾಗಲೂ ಕಡಿಮೆ ಸಂಚರಿಸಲಾದಂತಹ ಮಾರ್ಗವಾಗಿದೆ. ಇದನ್ನು ಅನುಸರಿಸಲು ಎಲ್ಲರಿಗೂ ಸುಲಭವೇನಲ್ಲ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಗೇಲ್ ಕುರಿತು ನನಗೆ ಅನ್ನಿಸಿವುದು- ತನ್ನ ಲೌಕಿಕ ಬಯಕೆಗಳ ಕಾರಣದಿಂದಾಗಿ ಈ ಮಾರ್ಗವನ್ನು ಬಿಡಬೇಕಾಯಿತು ಎನ್ನುವುದನ್ನು ಒಪ್ಪಿಕೊಂಡು ಸ್ವೀಕರಿಸದೇ, ಬಲಿಗೆ, ತಾನು ಸನ್ಯಾಸವನ್ನು ತ್ಯಜಿಸುವ ನಿರ್ಧಾರಕ್ಕೆ ಅಮ್ಮ ಮತ್ತು ಅಮ್ಮನವರ ಸಂಸ್ಥೆಯೇ ಕಾರಣವೆಂದು ಸಮರ್ಥಿಸಿಕೊಳ್ಳುತ್ತಿದ್ದಾಳೆ.

“ಗೇಲ್ ಕುರಿತು ನನಗೆ ಅನ್ನಿಸಿವುದು- ತನ್ನ ಲೌಕಿಕ ಬಯಕೆಗಳ ಕಾರಣದಿಂದಾಗಿ ಈ ಮಾರ್ಗವನ್ನು ಬಿಡಬೇಕಾಯಿತು ಎನ್ನುವುದನ್ನು ಒಪ್ಪಿಕೊಂಡು ಸ್ವೀಕರಿಸದೇ, ಬಲಿಗೆ, ತಾನು ಸನ್ಯಾಸವನ್ನು ತ್ಯಜಿಸುವ ನಿರ್ಧಾರಕ್ಕೆ ಅಮ್ಮ ಮತ್ತು ಅಮ್ಮನವರ ಸಂಸ್ಥೆಯೇ ಕಾರಣವೆಂದು ಸಮರ್ಥಿಸಿಕೊಳ್ಳುತ್ತಿದ್ದಾಳೆ.”

ಅಮ್ಮನವರ ಭಾಷಾಂತರಕಾರರಲ್ಲಿ ಒಬ್ಬ ನಾನಾಗಲು ಅತ್ಯಂತ ಅನುಗ್ರಹೀತನೆಂದು ಭಾವಿಸುತ್ತೇನೆ, ಮತ್ತು ಇದು ಅಮ್ಮನವರ ಜೀವನವನ್ನು ಬಹಳ ಹತ್ತಿರದಿಂದ ಕಾಣಲು ನನಗೆ ಅಣಿವುಮಾಡಿಕೊಟ್ಟಿದೆ. ಅಮ್ಮನ ಜೊತೆಯಲ್ಲಿನ ನನ್ನ ೨೪ ವರ್ಷಗಳ ಜೀವಿತದಲ್ಲಿ, ಗೇಲ್ ತನ್ನ ಪುಸ್ತಕದಲ್ಲಿ ಆಪಾದಿಸಿರುವ ತಪ್ಪು ಕೆಲಸಗಳನ್ನು ಎಂದಿಗೂ ನಾನು ನೋಡಿಲ್ಲ ಅಥವಾ ಯಾವುದೇ ಸಾಕ್ಷಿಯನ್ನು ಕಂಡಿಲ್ಲ.

ಗೇಲ್ ಸಂಸ್ಥೆಯನ್ನು ಬಿಟ್ಟು ಹೋದ ಕೆಲವೇ ಸಮಯದಲ್ಲಿ ಗೇಲ್ ನ್ನು ಒಳಗೊಂಡ ಸನ್ನಿವೇಶವೊಂದು ಜರುಗಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹು ಮುಖ್ಯವೆಂದು ನಾನು ಭಾವಿಸುತ್ತೇನೆ. ಒಬ್ಬ ಅಮೆರಿಕದ ಭಕ್ತ, ಮತ್ತೊಬ್ಬ ಬ್ರಹ್ಮಚಾರಿ ಹಾಗು ನಾನು ಅಮ್ಮನನ್ನು ಭೇಟಿಮಾಡುತ್ತಿದ್ದೆವು, ಆಗ ಈ ಭಕ್ತ ಅಮ್ಮನಿಗೆ ಈಗ ಹೇಳುವ ಮಾಹಿತಿಯನ್ನು ಹೇಳಿಕೊಂಡನು. ನಾನು ಭಾಷಾಂತರಕಾರಕನಾಗಿದ್ದೆ. ನಾನು ಪ್ರಾರಂಭಿಸುವ ಮುನ್ನ, ಒಬ್ಬ ಭಾಷಾಂತರಕಾರಕನಾಗಿ ಗೋಪನೀಯತೆಯನ್ನು ಕಾಪಾಡುವುದು ನನಗೆ ಬಹಳ ಮುಖ್ಯ, ಮತ್ತು ನಾನು ಎಂದಿಗೂ ಹಾಗೆಯೇ ಮಾಡಿದ್ದೇನೆ ಹಾಗು ಅದನ್ನು ಎಂದಿಗೂ ಪಾಲಿಸುತ್ತೇನೆ. ಹಾಗಿದ್ದರೂ, ಅಮ್ಮನ ಮತ್ತು ಸಂಸ್ಥೆಯ ವಿರುದ್ಧ ಗೇಲ್ ನ ಅಪಪ್ರಚಾರದ ಅಭಿಯಾನವನ್ನು ನೋಡಿ, ಆ ಭಕ್ತನ ಹೆಸರನ್ನು ಹೇಳದೆಯೇ, ಆ ಸನ್ನಿವೇಶವನ್ನು ಹೇಳಲು ನಾನು ನಿರ್ಬಂಧಿತನಾಗಿದ್ದೇನೆ.

ಈ ವ್ಯಕ್ತಿ ಅಮ್ಮನಿಗೆ ಹೇಳಿದ, ಅವನ ಪ್ರತಿ ಗೇಲ್ ನ ಆಸಕ್ತಿ ೧೯೯೪ ರಲ್ಲಿ ಪ್ರಾರಂಭವಾಯಿತು. ಅವಳು ಸ್ಪಷ್ಟವಾಗಿ ಅವನ ಸಂಗಡ ಇರಲು ತನ್ನ ಇಚ್ಛೆಯನ್ನು ಪ್ರಕಟಪಡಿಸುತ್ತಿದ್ದಳು ಹಾಗು ಯಾತ್ರೆಗಳಲ್ಲಿ ಹಲವು ಬಾರಿ ಅವನ ಜೊತೆ ಮಾತನಾಡಲು ಅಥವಾ ಅಮೃತಪುರಿಯಿಂದ ಅವನಿಗೆ ಆಗಾಗ್ಗೆ ದೂರವಾಣಿ ಕರೆಗಳನ್ನು ಮಾಡುತ್ತಿದ್ದಳು. ಪ್ರಾರಂಭದಲ್ಲಿ ಗೇಲ್ ಳ ಈ ಸ್ನೇಹಭಾವವನ್ನು ಅವನು ಅನ್ಯಥಾ ಅಸಮಂಜಸವಾಗಿ ಪರಿಗಣಿಸಲಿಲ್ಲ. ಆದರೆ ಕ್ರಮೇಣ ಅವನು ಆತನ ಪ್ರತಿ ಅವಳ ಭಾವ ಪರಿವರ್ತನೆಯನ್ನು ಗಮನಿಸತೊಡಗಿದ. ಅವಳು ಇತನ ಮೇಲೆ ಹೆಚ್ಚು ಹೆಚ್ಚು ಭಾವನಾತ್ಮಕವಾಗಿ ಅವಲಂಬಿಸುತ್ತಿರುವುದನ್ನು ಕಂಡು ಕಳವಳಗೊಳ್ಳಲು ಪ್ರಾರಂಭಿಸಿದ. ಮತ್ತು ಕಡೆಯಲ್ಲಿ ಅವಳು ಬಹಿರಂಗವಾಗಿಯೇ ಅವನ ಪ್ರತಿ ಅವಳಿಗೆ ಪ್ರಣಯ ಭಾನೆಗಳಿರುವುದನ್ನು ಹಾಗು ಅವನೊಂದಿಗೆ ಸಂಬಂಧವನ್ನು ಪ್ರಾರಂಭಿಸುವ ತನ್ನ ಮನೋಭಿಲಾಷೆಯನ್ನು ಅವನಲ್ಲಿ ಒಪ್ಪೆಕೊಂಡಳು. ನಾವು ಮದುವೆ ಮಾಡಿಕೊಂಡು ಜೀವನ ಪ್ರಾರಂಭಿಸುವ ಎಂದೂ ಸಹ ಸಲಹೆಯನ್ನು ಕೊಟ್ಟಳು. ಅವಳ ಈ ಪ್ರಣಯ ನಿವೇದನೆಯು ಅವನಿಗೆ ಆಘಾತವುಂಟುಮಾಡಿದ್ದಲ್ಲದೇ, ಅಗಾಧವಾಗಿ ಅವನ ಮನಸನ್ನು ಕೆದಡಿಬಿಟ್ಟಿತು. ಯಾವುದೇ ರೀತಿಯ ಅನಿಶ್ಚಿತ ಪದಗಳ ಬಳಕೆಯಿಲ್ಲದೆ, ಸ್ಪಷ್ಟವಾಗಿ, ಈ ಸಂಬಂಧ ಎಂದಿಗೂ ಸಾಧ್ಯವಿಲ್ಲ ಎಂದು ಅವನು ಅವಳಿಗೆ ಹೇಳಿದ. ಈ ರೀತಿಯಲ್ಲಿ ಅಮ್ಮನಿಗೆ ಎಂದಿಗೂ ದ್ರೋಹ ಬಗೆಯಲಾರೆ ಎಂದ. ಗೇಲ್ ಗೆ ಅವಳ ಸನ್ಯಾಸಿ ಧರ್ಮದ ಬೊಧೆಯನ್ನು ಎಷ್ಟೇ ನೆನಪಿಸಿದರೂ ಕೂಡ, ಅವಳು ಪಟ್ಟುಬಿಡಲಿಲ್ಲ. ಅವಳು ಅವನಿಗೆ ದೂರವಾಣಿಯ ಮೂಲಕ ಕರೆಯುವುದನ್ನೇ ಆಗಲಿ ಅಥವಾ ಇ ಮೇಲ್ ಕಳಿಸುವುದೇ ಆಗಲಿ ಬಿಡಲಿಲ್ಲ. ಬರಬರುತ್ತಾ ಇದು ಎಲ್ಲಿಗೆ ಬಂದು ಮುಟ್ಟಿತು ಎಂದರೆ, ಆಶ್ರಮವನ್ನು ಬಿಟ್ಟನಂತರ ಅವನ ಜೊತೆಗೆ ಅವಳು ಒಟ್ಟಿಗೆ ಜೀವಿಸಲು ಒಂದು ಅಪಾರ್ಟ್ ಮೆಂಟ್ ಒಂದನ್ನು ಖರೀದಿಸುವಂತೆ ಅವನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದಳು.

“ಗೇಲ್ ನ ಪುಸ್ತಕವು ಪ್ರಾಮಾಣಿಕವಾಗಿ ಅವಳ ಜೀವನವನ್ನು ಹಾಗು ಅವಳ ಅನುಭವವನ್ನು ಹಂಚಿಕೊಳ್ಳುವುದ್ದಾಗಿದ್ದಲ್ಲಿ, ಇಂಥಹ ಪ್ರಮುಖವಾದ ಘಟನೆಯನ್ನು ಏಕೆ ಬರೆಯದೇ ಕೈಬಿಡಲಾಗಿದೆ? ಇದು ಸ್ಪಷ್ಟವಾದ, ಮಹತ್ವಪೂರ್ಣವಾದ ’ಹುಸಿ ಲೋಪವಾಗಿದೆ’ ಆಗಿದಷ್ಟೆ.”</span>

ಗೇಲ್ ಆಶ್ರಮವನ್ನು ಬಿಟ್ಟು ಹೋದ ನಂತರ, ಅಮ್ಮನ ಬಗ್ಗೆ ಮತ್ತು ಆಶ್ರಮದ ಬಗ್ಗೆ ಸುಳು ಕಥೆಗಳನ್ನು ಪ್ರಚಾರಮಾಡಲು ಪ್ರಾರಂಭಿಸಿದಾಗಲೂ, ಅಮ್ಮ ಗೇಲ್ ಬಿಟ್ಟು ಹೋಗಲು ನಿಜವಾದ ಕಾರಣವೇನೆಂದು ಜಗತ್ತಿಗೆ ತಿಳಿಸಲಿಲ್ಲ, ಕಾರಣ ಅಮ್ಮನಿಗೆ ಜನರು ಯಾವುದೇ ಕಾರಣಕ್ಕೂ ಗೇಲ್ ನ್ನು ಹೀನ ದೃಷ್ಟಿಯಿಂದ, ಕೀಳು ದೃಷ್ಟಿಯಿಂದ ನೋಡುವುದು ಇಷ್ಟವಿರಲಿಲ್ಲ. ವಿಪರ್ಯಾಸವೆಂದರೆ, ಗೇಲ್ ಅಮ್ಮನ ಈ ಕಾರುಣ್ಯದ ಮುಖವನ್ನು ಎಂದಿಗೂ ನೋಡಲೇ ಇಲ್ಲ.
ಗೇಲ್ ನ ಪುಸ್ತಕವು ಪ್ರಾಮಾಣಿಕವಾಗಿ ಅವಳ ಜೀವನವನ್ನು ಹಾಗು ಅವಳ ಅನುಭವವನ್ನು ಹಂಚಿಕೊಳ್ಳುವುದ್ದಾಗಿದ್ದಲ್ಲಿ, ಇಂಥಹ ಪ್ರಮುಖವಾದ ಘಟನೆಯನ್ನು ಏಕೆ ಬರೆಯದೇ ಕೈಬಿಡಲಾಗಿದೆ? ಇದು ಸ್ಪಷ್ಟವಾದ, ಮಹತ್ವಪೂರ್ಣವಾದ “ಹುಸಿ ಲೋಪವಾಗಿದೆ” ಆಗಿದೆಯಷ್ಟೆ. ಇದೇ ಬೆಳಕಿನಡಿಯಲ್ಲಿ ಮುಂದುವರಿಸುತ್ತಾ, ಆಶ್ರಮವನ್ನು ಬಿಟ್ಟ ಕೆಲವೇ ವರ್ಷಗಳಲ್ಲಿ ಜರುಗಿತೆಂದು ನಾನು ಕೇಳಿ ತಿಳಿದ ಸಂಗತಿಯಾದ, ಗೇಲ್, ಅದೂ ತಾನು ಮತ್ಯಾವುದೋ ಗಂಡಸಿನೊಂದಿಗೆ ವಿವಾಹದ ಬಗ್ಗೆಯೇ ಆಗಲಿ, ವಿಚ್ಛೇದನದ ಬಗ್ಗೆಯೇ ಆಗಲಿ, ಆದದ್ದನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಲು ಅಸಮರ್ಥಳಾದಿದ್ದಾಳೆ.

– ಶುಭಾಮೃತ

Source: An Email From Brahmachari Shubamrita

ಗೇಲ್ ಕುರಿತು ಬಹುಕಾಲದ ಅಮ್ಮನ ಭಕ್ತೆಯಾದ ಅರ್ಪಣಾ ಅವರ ನೆನಪುಗಳು

ನನ್ನ ಹೆಸರು ಅರ್ಪಣಾ . ನಾನೊಬ್ಬ ಅನುಜ್ಞೆ ಪಡೆದಿರುವ ನ್ಯಾಯವಾದಿ ಹಾಗು ೧೯೯೨ ರಿಂದ ಅಮ್ಮನ ಭಕ್ತೆಯಾಗಿದ್ದೇನೆ. ಗೇಲ್ ಟ್ರೆಡ್ವೆಲ್ ಆಶ್ರಮ ಬಿಟ್ಟ ಸಮಯದಲ್ಲಿ ನಾನು ಹವಾಯಿಯಲ್ಲಿದ್ದೆ. ಆಗ ಅವಳ ಪರಿಚಯ ಅಷ್ಟಾಗಿ ಇರಲಿಲ್ಲವಾದರೂ ಅವಳು ಹವಾಯಿಗೆ ಬಂದಿದ್ದಾಳೆ ಎಂದು ನನಗೆ ತಿಳಿದುಬಂದಿತು. ಇರಲು ಜಾಗ ಹುಡುಕುತ್ತಿದ್ದಾಳೆ ಎಂದು ಗೊತ್ತಾದಾಗ ನಮ್ಮ ಮನೆಗೆ ಬಂದಿರಲು ಆಹ್ವಾನಿಸಿದೆವು. ಗೇಲ್ ಬಂದು ಮುಂದಿನ ಒಂದು ವರ್ಷಕಾಲ ನಮ್ಮ ಮನೆಯಲ್ಲಿ ಇದ್ದಳು. ಆ ಒಂದು ವರ್ಷ ಕಾಲ ಅವಳಿಗೆ ಉಚಿತವಾಗಿ ಊಟ, ವಸತಿ, ಮತ್ತೆ ಜೀವಿಸಲು ಬೇಕಾದ ಅಕ್ಕರೆ ತುಂಬಿದ ಉತ್ತಮ ಉತ್ತೇಜಕ ವಾತಾವರಣವೂ ಅವಳಿಗೆ ಒದಗಿಸಿದೆವು. ನಾವು ಮನೆಮಂದಿ ಅವಳೊಂದಿಗೆ ಒಟ್ಟಿಗೆ ಸಮಯ ಕಳೆದೆವು; ನಾವು ಒಟ್ಟಿಗೆ ಅಡಿಗೆ ಮಾಡುತ್ತಿದ್ದೆವು, ಸಮುದ್ರತೀರಕ್ಕೆ ಹೋಗಿ ಈಜಾಡುತ್ತಿದ್ದೆವು, ನಾಯಿಯ ಜೊತೆ ಆಟವಾಡುತ್ತಿದ್ದೆವು, ಮಿತ್ರವರ್ಗದವರೊಂದಿಗೆ ಸಮಯ ಕಳೆಯುತ್ತಿದ್ದೆವು. ಅವಳು ಡ್ರೈವಿಂಗ್ ಕಲಿಯುತ್ತಿದ್ದಳು, ಹಾಗು ನಾನವಳಿಗೆ ಪ್ಯಾರಲೆಲ್ ಪಾರ್ಕಿಂಗ್ ಕಲಿಸಿದೆ. ಒಟ್ಟಿನಲ್ಲಿ ಹೇಳಬೆಕೆಂದರೆ, ಅವಳು ಒಬ್ಬ ಮನೆಯ ಸದಸ್ಯಳೇ ಆಗಿದ್ದಳು.

ಅಮ್ಮನ ಭಕ್ತೆಯರ ಒಂದು ಪುಟ್ಟ ಗುಂಪು ಇತ್ತು; ನಾವೆಲ್ಲಾ ಅವಳ ಬೆನ್ನಿಗೆ ಸಹಾಯವಾಗಿದ್ದೆವು. ಒಟ್ಟಿಗೆ ಕಲೆಯುತಿದ್ದೆವು. ಅಮ್ಮನೊಂದಿಗೆ ಕಳೆದ ಆ ಹಳೆಯ ಕಾಲದ ಕಥೆಗಳನ್ನು ಹೇಳಿಕೊಳ್ಳುತ್ತಿದ್ದೆವು. ಗೇಲ್ ಈ ಮಾತುಕತೆಗಳಲ್ಲಿ ತಾನಾಗಿ ಬಂದು ಪಾಲ್ಗೊಳ್ಳುತ್ತಿದ್ದಳು, ತನ್ನ ಕಥೆಗಳನ್ನು ಹಂಚಿಕೊಳ್ಳುತ್ತಾ, ನಗೆ ಚಟಾಕಿ ಹಾರಿಸುತ್ತಿದ್ದಳು. ಆಶ್ರಮ ಬಿಟ್ಟುಬಂದ ಮೇಲಿನ ಆ ಮೊದಲ ಒಂದು ವರ್ಷದಲ್ಲಿ ಒಮ್ಮೆಯೂ ಅವಳು, ಈಗ ತನ್ನ ಪುಸ್ತಕದಲ್ಲಿ ಸೇರ್ಪಡಿಸಿರುವ ಶೋಷಣೆಯ, ಹಿಂಸೆಗಳ ದೋಷಾರೋಪಗಳನ್ನು ಉಲ್ಲೇಖ ಮಾಡಿರಲಿಲ್ಲ. ಭಕ್ತೆಯರ ಆ ಗುಂಪಿನಲ್ಲಿಯೂ ಸಹ ಮಾತುಕತೆಯಲ್ಲಿ, ಈಗ ಹದಿನಾಲ್ಕು ವರ್ಷಗಳ ನಂತರ ಬರೆದ ಪುಸ್ತಕದಲ್ಲಿ ವರ್ಣಿಸಿರುವ ಯಾವುದೇ ಲೈಂಗಿಕ ಶೋಷಣೆಯ ವಿಚಾರದ ಸುಳಿವೂ ಇರಲಿಲ್ಲ.

“ಆಶ್ರಮ ಬಿಟ್ಟುಬಂದ ಆ ಮೊದಲ ಒಂದು ವರ್ಷದಲ್ಲಿ ಒಮ್ಮೆಯೂ ಅವಳು, ಈಗ ತನ್ನ ಪುಸ್ತಕದಲ್ಲಿ ಸೇರ್ಪಡಿಸಿರುವ ಶೋಷಣೆಯ, ಹಿಂಸೆಗಳ ದೋಷಾರೋಪಗಳನ್ನು ಉಲ್ಲೇಖ ಮಾಡಿರಲಿಲ್ಲ.”

ಗೇಲ್ ನನ್ನೊಂದಿಗೆ ಆಪ್ತವಾಗಿ ಮನತೆರೆದುಕೊಳ್ಳುತ್ತಿದ್ದಳು. ಆಶ್ರಮದ ಬಗ್ಗೆ ಅವಳಿಗೆ ಅನ್ನಿಸುತ್ತಿದ್ದ ಅತೃಪ್ತಿಯನ್ನು, ಅಮ್ಮ ಮತ್ತು ಸ್ವಾಮಿಯರೆಲ್ಲಾ ಅವಳನ್ನು ಕೀಳಾಗಿ ಕಾಣುತ್ತಿದ್ದರು ಎನಿಸುತ್ತಿದ್ದನ್ನು ಹೇಳಿಕೊಳ್ಳುತ್ತಿದ್ದಳು; ತಾನು ಅಮ್ಮನ ಆಶ್ರಮವನ್ನು ನಡೆಸುತ್ತಿದ್ದವಳು ಎಂದು ಭಾವಿಸಿದ್ದ ಅವಳು ಅದಕ್ಕೆ ತಕ್ಕನಾದ ಮರ್ಯಾದೆ ಮತ್ತು ಮನ್ನಣೆಯನ್ನು ಅವರು ಕೊಡಲಿಲ್ಲ ಎಂದು ನನ್ನಲ್ಲಿ ಹೇಳಿಕೋಳ್ಳುತ್ತಿದ್ದಳು. ಅದರಿಂದಾಗಿ ಅವಳಿಗೆ ಅಮ್ಮನ ಮೇಲಿನ ವಿಶ್ವಾಸ ಹೋಯಿತೆಂದು ಹೇಳಿದಳು. ನನ್ನ ಜೊತೆಗೆ ಇದ್ದ ಆ ಒಂದು ಇಡೀ ವರ್ಷದಲ್ಲಾಗಲೀ, ಆಮೇಲೆ ಆಗಲೀ ಅವಳು ಎಂದಿಗೂ ಲೈಂಗಿಕ ಶೋಷಣೆಯ ಬಗ್ಗೆ ಆರೋಪ ಮಾಡಿರಲೇ ಇಲ್ಲ. ಒಂದು ಸೂಚನೆ ಸಹ ಇಲ್ಲ. ಏನೂ ಇಲ್ಲ. ಆಧ್ಯಾತ್ಮಿಕ ಮಾರ್ಗದಲ್ಲಿ ದಾರಿತಪ್ಪಿದ ಒಬ್ಬ ಮಹಿಳೆಯಾಗಿ ಮಾತ್ರ ಅವಳು ನನಗೆ ಕಂಡುಬಂದಿದ್ದಳು. ಗೇಲ್ ಎಂದಿಗೂ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ. ಆದರೆ ಇತರರನ್ನು ಕ್ರೂರ ರೀತಿಯಲ್ಲಿ ಹಾಸ್ಯಮಾಡುವುದನ್ನು ನಾನು ಕಂಡಿದ್ದೇನೆ. ಅದನ್ನು ನೋಡಿದಾಗ ನಾನು ಕಂಗೆಟ್ಟು ಹೋಗುತ್ತಿದ್ದೆ. ಇದೇ ಸಮಯದಲ್ಲಿ ನಾನು ಹಲವಾರು ಬಾರಿ ಲಕ್ಷ್ಮಿ ಜೊತೆ ಮಾತನಾಡುವ ಸಂದರ್ಭ ಬಂದಿತ್ತು. ಇದೇ ಬ್ಲಾಗ್ ನಲ್ಲಿ ಬರೆದಿರುವ ವಿಷಯಗಳನ್ನೇ ಲಕ್ಷ್ಮಿ ಅಂದೂ ಹೇಳಿದ್ದು. ಗೇಲ್ ಲಕ್ಷ್ಮಿಗೆ ಅಷ್ಟು ಕ್ರೂರತೆ ತೋರಿಸಿದ್ದರೂ ಕೂಡ, ಲಕ್ಷ್ಮಿ ಗೇಲ್ ಹೋದದಕ್ಕೆ ದುಃಖವನ್ನೇ ವ್ಯಕ್ತಪಡಿಸಿದಳು, ಮತ್ತೆ ಮರಳಿ ಬರಲಿ ಎಂದು ಆಶಿಸಿದಳು. ಗೇಲ್ ಅಮ್ಮನ ಆಶ್ರಮವನ್ನು ಬಿಟ್ಟುಬಂದ ಮೇಲೆ ಅವಳಿಗೆ ಒಂದು ಮೊತ್ತದ ಹಣ ನೀಡಿತು. ಅದನ್ನು ಅವಳು “ಪೆನ್ಷನ್” ಎಂದು ಕರೆದಳು. ಆ ಹಣವನ್ನು ಒಬ್ಬ ಇನ್ವೆಸ್ಟ್ ಮೆಂಟ್ ಅಡ್ವೈಸರ್ ನ ಬಳಿ ಡೆಪಾಸಿಟ್ ಮಾಡುವಲ್ಲಿ ನಾನು ಅವಳಿಗೆ ಸಹಾಯ ಮಾಡಿದ್ದೆ, ಹಾಗಾಗಿ ನನಗೆ ಈ ವಿಷಯ ವಯಕ್ತಿಕವಾಗಿ ತಿಳಿದಿದೆ. ಈ ಒಂದು ವಿಷಯವನ್ನು ಗೇಲ್ ತನ್ನ ಪುಸ್ತಕದ ಹೊರಗಿಟ್ಟಿರುವುದು ನನಗೆ ಕುತೂಹಲ ಎನಿಸಿದೆ. ತಾನೊಬ್ಬ “ಫ್ಯುಜಿಟೀವ್” (ಅಪರಾಧಿ) ಯಂತೆ ಕದ್ದು ಪಲಾಯನ ಮಾಡಬೇಕಾಯಿತು, ಮತ್ತು ಅಡಗಿಕೊಳ್ಳಬೇಕಾಯಿತು ಎಂದು ಬರೆದುಕೊಂಡಿದ್ದಾಳೆ; ಇದು ನನಗೆ ಗೊಂದಲವುಂಟು ಮಾಡುತ್ತದೆ. ಯಾಕೆಂದರೆ ಅವಳು ಎಲ್ಲಿದ್ದಾಳೆ ಎಂದು ಗೊತ್ತಿದ್ದರೂ ಆಶ್ರಮದವರು ಯಾರು ಅವಳನ್ನು ಬೆನ್ನಟ್ಟಿಬರಲಿಲ್ಲ.

“ಅವಳು ಆಶ್ರಮಕ್ಕೆ ಮರಳಬೇಕು ಎಂದು ಯಾರೂ ಅವಳನ್ನು ಬಲವಂತ ಮಾಡಲಿಲ್ಲ.”

ಅವಳು ಆಶ್ರಮಕ್ಕೆ ಮರಳಬೇಕು ಎಂದು ಯಾರೂ ಅವಳನ್ನು ಬಲವಂತ ಮಾಡಲಿಲ್ಲ. ಕೆಲವು ಸಂದರ್ಭಗಳಲ್ಲಿ ಅವಳು ಸ್ವಾಮಿ ಅಮೃತಸ್ವರೂಪಾನಂದರ ಜೊತೆ ಪೋನಿನಲ್ಲಿ ಮಾತಾಡಿದ್ದುಂಟು; ಅವಳೇ ನಮ್ಮ ಮನೆಯ ಫೋನ್ ನಂಬರನ್ನು ಅವರಿಗೆ ಖುದ್ದಾಗಿ ಕೊಟ್ಟಿದ್ದಳು. ಅಷ್ಟು ಬಿಟ್ಟರೆ ಅಮ್ಮನ ಆಶ್ರಮದವರು ಅವಳನ್ನು ಅವಳ ಪಾಡಿಗೆ ಇರಲು ಬಿಟ್ಟಿದ್ದರು. ದಯಾಮೃತ ಸ್ವಾಮಿ ಹವಾಯಿಗೆ ಬಂದು, ಭಕ್ತರಿಗೆ ವಾರ್ಷಿಕ ರಿಟ್ರೀಟ್ (ಶಿಬಿರವನ್ನು) ನಡೆಸಿದಾಗ, ಹಲವಾರು ಭಕ್ತರು ನಮ್ಮ ಮನೆಯಲ್ಲಿ ಉಳಿದುಕೊಳ್ಳುವ ಕಾರಣ ಆ ಒಂದು ವಾರ ಗೇಲ್ ಗಾಗಿ ಬೇರೊಂದು ಜಾಗ ಬಾಡಿಗೆಗೆ ಹಿಡಿದೆವು. ರಿಟ್ರೀಟ್ ನಡೆದಿದ್ದಾಗ ಒಂದು ದಿನ ಭಕ್ತರಿಗೆಲ್ಲಾ ಗೇಲ್ ಸ್ವತಃ ಅಡುಗೆ ಮಾಡಿದಳು; ನಾವದನ್ನು ತೆಗೆದುಕೊಂಡು ಹೋಗಿ ಭಕ್ತರಿಗೆ ಬಡಿಸಿದೆವು. ಗೇಲ್ ಆಭರಣಗಳನ್ನು ಮಾಡಿ, ಮಾರಿ ಹಣ ಸಂಪಾದನೆ ಮಾಡತೊಡಗಿದಳು. ಅಡುಗೆ ಮಾಡಿ ಮನೆಯಿಂದ ಕೇಟರಿಂಗ್ ಮಾಡತೊಡಗಿದಳು. ಇಂಡಿಯನ್ ಕುಕ್ಕಿಂಗ್ (ಭಾರತೀಯ ಪಾಕಗಳನ್ನು) ಕಲಿಸುವ ತರಗತಿಯನ್ನೂ ನಡೆಸತೊಡಗಿದಳು. ಹೊಸ ಜೀವನದಲ್ಲಿ ಸಮಾಧಾನ ಪಡೆದವಳಂತೆ ತೋರುತ್ತಿದ್ದಳು. ಹೀಗಿರುವಾಗ, ಆಶ್ರಮ ಬಿಟ್ಟ ಹೊಸತರದಲ್ಲಿ ಒಂದಿಷ್ಟು ಸೂಚನೆಯೂ ಕೊಡದಿದ್ದ ಕಥೆಗಳನ್ನು ಈಗ ಹೇಗೆ ಹುಟ್ಟುಹಾಕಿಕೊಂಡಿದ್ದಾಳೆ ಎನ್ನುವುದು ನನಗಂತೂ ಗೊತ್ತಾಗುತ್ತಿಲ್ಲ. ತಿಳಿಯುವ ಕುತೂಹಲವೂ ನನಗಿಲ್ಲ; ಏನಾದರೂ ಆಗಬಾರದ್ದು ಆಗಿದ್ದರೆ ಆ “ಟ್ರೌಮ” (ಗಾಯ)ಆಶ್ರಮ ಬಿಟ್ಟ ಹೊಸತರಲ್ಲಿ ಹಸಿಯಾಗಿ ಅವಳ ಮನಸ್ಸಿನಲ್ಲಿ ಅದು ಗಾಢವಾಗಿರಬೇಕಿತ್ತಲ್ಲವೆ?

“ಈ ಆರೋಪಗಳಲ್ಲಿ ಒಂದೆಳೆಯಷ್ಟಾದರೂ ಸತ್ಯವೇ ಇರುವುದಾಗಿದ್ದರೆ, ಅದನ್ನು ಹೊರಗೆಡುಹಲು ಅವಳು ಇಷ್ಟು ವರ್ಷ ಯಾಕೆ ಕಾದಳು?”

ಅವಳು ಪುಸ್ತಕದಲ್ಲಿ ಹೇಳಿರುವ ವಿಷಯಗಳು ಏಕರೂಪವಾಗಿ, ಆಶ್ರಮ ಬಿಟ್ಟ ಮೊದಲು ವರ್ಷದಲ್ಲಿ ನಾನು ಕಂಡ ವ್ಯಕ್ತಿಯದಾಗಿರಲು ಸಾಧ್ಯವಿಲ್ಲ. ಅವು ಸಮರ್ಪಕವಾಗಿ ಹೊಂದುವುದಿಲ್ಲ. ಆಶ್ರಮದಿಂದ ಹೊರಗಿನ ಜೀವನಕ್ಕೆ ಹೊಂದಿಕೊಳ್ಳಲು ಅವಳಿಗೆ ಸ್ವಲ್ಪ ಕಷ್ಟವಾಗಿದ್ದಿರಬಹುದು ಹಾಗು ಆಶ್ರಮದ ಅನೇಕ ವಿಷಯಗಳ ಬಗ್ಗೆ ತನ್ನ ನಿರಾಶೆ, ಸಿಟ್ಟನ್ನು ವ್ಯಕ್ತಪಡಿಸಿದ್ದಳು, ಸರಿಯೇ. ಆದರೆ ಎಂದಿಗೂ ಲೈಂಗಿಕ ಶೋಷಣೆಯ ಬಗ್ಗೆ ಅಥವಾ, ಅಮ್ಮ ಅಥವಾ ಸ್ವಾಮಿಯರು ಲಿಂಗಾಧಾರಿತ ಭೇದಭಾವ ತೋರುವುದರ ಬಗ್ಗೆ ಒಂದು ಮಾತೂ ಹೇಳಿರಲಿಲ್ಲ. ಈ ಆರೋಪಗಳಲ್ಲಿ ಒಂದೆಳೆಯಷ್ಟಾದರೂ ಸತ್ಯವೇ ಇರುವುದಾಗಿದ್ದರೆ, ಅದನ್ನು ಹೊರಗೆಡುಹಲು ಅವಳು ಇಷ್ಟು ವರ್ಷ ಯಾಕೆ ಕಾದಳು?

ಒಂದು ವರ್ಷದ ಅವಳೊಂದಿಗಿನ ನನ್ನ ಒಡನಾಟದ ಆಧಾರದ ಮೇಲೆ, ಹಾಗು ನಾನು ಇಲ್ಲಿಗೆ ಮರಳಿ ಬಂದ ಮೇಲೆ ಕ್ಯಾಲಿಫೋರ್ನಿಯಾದಲ್ಲಿ ಅವಳ ಜೊತೆಗೆ ಆಗಾಗ ನಾನು ಭೇಟಿಮಾಡುತ್ತಿದ್ದಾಗಲೂ, ಆ ಒಡನಾಟದ ಆಧಾರದ ಮೇಲೆ ಹೇಳುವುದಾದರೆ, ಅವಳು ಈಗ ಮಾಡುತ್ತಿರುವ ಆರೋಪಗಳಲ್ಲಿ ಒಂದು ಕೂದಳೆಯಷ್ಟೂ ಸತ್ಯವಿಲ್ಲ. ಈ ಕಾರಣದಿಂದಾಗಿಯೇ, ನಾನು ಮುಂದೆ ಬಂದು ಸತ್ಯವನ್ನು ತಿಳಿಸಿ, ನನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳಲು ನಿರ್ಬಂಧಿತಳಾಗಿದ್ದೇನೆ.

– ಅರ್ಪಣಾ

Source:Arpana’s Memories of Gayatri

ಗೇಲ್ ಟೆಡ್ವೆಲ್ ಹೀಗಿದ್ದಳು -ಸೂಸನ್ ವೆಕ್ಕರ್ ಬರೆಯುತ್ತಾರೆ. ಸದ್ಯ ಆಶ್ರಮದಲ್ಲಿರುವ ಸ್ವಿಸ್ ಭಕ್ತೆತೆಯೊಬ್ಬರಿಂದ ಈ ಪತ್ರ:

ನನ್ನ ಹೆಸರು ಸೂಸನ್ ವೆಕ್ಕರ್. ನಾನು ಅಮ್ಮನನ್ನು ೧೯೯೦ ರಲ್ಲಿ ಮೊದಲ ಸಲ ಭೇಟಿಮಾಡಿದೆ. ಅಮ್ಮ ತಮ್ಮ ವಾರ್ಷಿಕ ಯೂರೋಪ್ ಯಾತ್ರೆಯಲ್ಲಿ ಮ್ಯೂನಿಕ್ ಗೆ ಬಂದಾಗಲೆಲ್ಲಾ ೧೯೯೨ ರಿಂದಲೂ, ಅಮ್ಮ ಮತ್ತು ಅಮ್ಮನ ಹಿರಿಯ ಸನ್ಯಾಸೀ ಶಿಷ್ಯರ ಅತಿಥೇಯಳಾಗುವ ಭಾಗ್ಯ ನನ್ನದಾಗಿದೆ. ಗೇಲ್ ಟ್ರೆಡ್ವ್ ಲ್ ಳ ಪುಸ್ತಕದ ಪುನರಾವಲೋಕನವನ್ನು ಓದಿದ ಮೇಲೆ ನನಗೆ ಗೇಲ್ ಳೊಂದಿಗೆ ಆಗಿರುವ ಕೆಲವು ಅನುಭವಗಳನ್ನು ಅಮ್ಮ ಮತ್ತು ಅಮ್ಮನ ಸಂಸ್ಥೆಯೊಂದಿಗಿನ ನನ್ನ ಅನುಭವಗಳನ್ನು ಹಂಚಿಕೊಳ್ಳಬೇಕೆನಿಸಿದೆ.

“ಅಮ್ಮನ ಒಡನಾಟಕ್ಕೆ ಬಂದ ಈ ೨೩ ವರ್ಷಗಳಲ್ಲಿ ನಾನು ಒಮ್ಮೆಯೂ ಗೇಲ್ ಳನ್ನಾಗಲೀ ಅಥವಾ ಇನ್ನಾರನ್ನೇ ಆಗಲೀ ಅಮ್ಮ ಹಿಂಸಿಸುವುದನ್ನು ನೋಡಿಲ್ಲ. ನಾನೂ ಮತ್ತು ಗೇಲ್ ಎಷ್ಟು ಆಪ್ತರಿದ್ದೆವು, ಹಾಗಿದ್ದೂ ಯಾವತ್ತೂ ಅವಳು ‘ಅಮ್ಮ ತನಗೆ ಹಿಂಸೆ ನೀಡಿದರು’ ಎಂದು ಹೇಳಿಕೊಂಡಿರಲಿಲ್ಲ.”

ಅಮ್ಮನ ಒಡನಾಟಕ್ಕೆ ಬಂದ ಈ ೧೩ ವರ್ಷಗಳಲ್ಲಿ ನಾನು ಒಮ್ಮೆಯೂ ಗೇಲ್ ಳನ್ನಾಗಲೀ ಅಥವಾ ಇನ್ನಾರನ್ನೇ ಆಗಲೀ ಅಮ್ಮ ಹಿಂಸಿಸುವುದನ್ನು ನೋಡಿಲ್ಲ. ನಾನೂ ಮತ್ತು ಗೇಲ್ ಎಷ್ಟು ಆಪ್ತರಿದ್ದೆವು, ಹಾಗಿದ್ದೂ ಯಾವತ್ತೂ ಅವಳು “ಅಮ್ಮ ತನಗೆ ಹಿಂಸೆ ನೀಡಿದರು” ಎಂದು ಹೇಳಿಕೊಂಡಿರಲಿಲ್ಲ. ಅಮ್ಮ ಯೂರೋಪ್ ಯಾತ್ರೆಯಲ್ಲಿದ್ದಾಗ ಗೇಲ್ ತನ್ನ ಕಷ್ಟಗಳನ್ನು ನನ್ನ ಬಳಿ ಆಗಾಗ ಹೇಳಿಕೊಳ್ಳುತ್ತಿದ್ದಳು. ನಾನು ಅವಳನ್ನು ಮೊದಲು ಭೇಟಿಯಾದಾಗ ಅವಳಿಗೆ ಅಮ್ಮನ ಮೇಲೆ ತುಂಬಾ ಭಕ್ತಿಯಿದ್ದಂತೆ ಕಂಡಿತು. ಕಾಲ ಸರಿದಂತೆ ಅವಳಿಗೆ ಅಮ್ಮನನ್ನು ಟೀಕಿಸುವುದೊಂದೇ ಕೆಲಸವಾಯಿತು. ಉದಾಹರಣೆಗೆ, ಅಮ್ಮ ರಾತ್ರಿ ಆತಿಥೇಯರ ಮನೆಗೆ ಹಿಂತಿರುಗುವರಾ ಅಥವಾ ಹಾಲಿನಲ್ಲೇ ಮಲಗುವರಾ ಎಂದು ಮೊದಲೇ ಸ್ವಾಮಿಜೀಯರಿಗೆ ಅಥವಾ ಅಮ್ಮನ ಸಹಾಯಕರಿಗೆ ತಿಳಿಸುತ್ತಿರಲಿಲ್ಲ. ಅದು ಅಮ್ಮನ ರೀತಿಯಾಗಿತ್ತು. ಇದರಿಂದಾಗಿ ಮುಂದಿನ ವ್ಯವಸ್ಥೆ ಮಾಡುವವರಿಗೆ ಕಷ್ಟವಾಗುತಿತ್ತು ಸರಿ, ಆದರೆ ಇದು ಅಮ್ಮನ ರೀತಿ ಎಂದು ಎಲ್ಲರೂ ಒಪ್ಪಿಕೊಳ್ಳುತ್ತೇವೆ. ನಾವು ಫ್ಲೆಕ್ಸಿಬಲ್ (ಎಂಥಹಾ ಪರಿಸ್ಥಿತಿಗೂ ಒಗ್ಗುವಂತೆ/ಬಗ್ಗುವಂತೆ) ಆಗಲು, ನಾವು ಹೆಚ್ಚು ಸಮರ್ಥರಾಗಲು, ಎಂಥಾ ಒತ್ತಡ ಇದ್ದರೂ ಮನಸ್ಸಿನ ಸಮಚಿತ್ತತೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಇದೆಯೆ ಎಂದು ನಮ್ಮನ್ನೇ ಪರೀಕ್ಷಿಸಿಕೊಳ್ಳಲು ಒಂದು ಅವಕಾಶ ಎಂದಾಗಿ ಭಾವಿಸುತ್ತೇವೆ. ಆದರೆ ಗೇಲ್ ಗೆ ಈ ರೀತಿಯಲ್ಲಿ ಪರಿಸ್ಥಿತಿಯನ್ನು ಕಾಣಲು ಸಾಧ್ಯವೇ ಆಗುತ್ತಿರಲಿಲ್ಲ. ಅಮ್ಮ ವಿಷಯವನ್ನು ಹೇಳದೇ ಇರುವುದು ಅಥವಾ ಕಡೇ ನಿಮಿಷಗಳಲ್ಲಿ ಅವಸರ ಮಾಡಿ ವ್ಯವಸ್ಥೆ ಬದಲಿಸುವುದು -ಇದನ್ನೆಲ್ಲಾ ಅವಳು ತನಗಾದ ಅಪಮಾನ ಎಂದು ಭಾವಿಸುತ್ತಿದ್ದಳು.

ಅಂಥಾ ಭಾವನೆಗಳನ್ನೆಲ್ಲಾ ನನ್ನ ಮುಂದೆ ಹೇಳಿಕೊಳ್ಳುತ್ತಿದ್ದ ಗೇಲ್, ಹದಿನೈದು ವರ್ಷಗಳ ನಂತರ ಬರೆದಿರುವ ತನ್ನ ಪುಸ್ತಕದಲ್ಲಿ ಮಾಡಿರುವ ಆರೋಪಗಳ್ಯಾವುವನ್ನೂ ಒಮ್ಮೆಯೂ ಹೇಳಿಕೊಂಡಿರಲಿಲ್ಲ. ಅಮ್ಮ ತನ್ನನ್ನು ಹೊಡೆದರು ಎಂದು ಇವತ್ತು ಬರೆಯುತ್ತಿದ್ದಾಳೆ; ಆದರೆ ಅಮ್ಮನ ಜೊತೆಗೆ ಆಶ್ರಮದಲ್ಲಿ ಗೇಲ್ ಇದ್ದ ಸಮಯದಲ್ಲಿ ಅನೇಕ ಭಕ್ತರಿಗೂ ಮತ್ತು ಆಶ್ರಮವಾಸಿಗಳಿಗೂ ಗೊತ್ತು ಅವಳು ಏನು ಹೇಳುತ್ತಿದ್ದಾಳೋ ಅದು ಸತ್ಯಕ್ಕೆ ದೂರ, ಮತ್ತು ಸತ್ಯಕ್ಕೆ ವಿರುದ್ಧ ಎಂದು. (ಮೀರ, ಸ್ವಾಮಿ ಪರಮಾತ್ಮಾನಂದ, ರುಕ್ಮಿಣಿ, ಕ್ರಿಸ್ಟೀ, ಅನು) ಮುಂಗೋಪಿಯಾಗಿದ್ದುದು ಗೇಲ್, ಅಮ್ಮ ಅಲ್ಲ. ಕೋಪ ನಿಗ್ರಹಿಸಲಾಗದೆ ಅವಳು ತನ್ನ ಕೆಳಗಿದ್ದವರ ಮೇಲೆ ಕಿಡಿಕಾರುತ್ತಿದ್ದಳು. ಗೇಲ್ ಳ ಆಕ್ರಮಣಕಾರಿ ಸ್ವಭಾವದ ಹೆಚ್ಚಿನ ಪ್ರಕೋಪವನ್ನು ಸಹಿಸಬೇಕಾಗುತ್ತಿದ್ದುದು ಹಾಲೆಂಡಿನ ಲಕ್ಷ್ಮಿ ಗೆ; ಅವಳೀಗ ೩೦ ವರ್ಷದಿಂದ ಅಮ್ಮನ ಜೊತೆಗಿರುವವಳು. ಕೆಲವು ಸಲ ಗೇಲ್ ಅಮ್ಮನ ಮೇಲೂ ಕೊಡ ತನ್ನ ಕ್ರೂರತೆ ತೋರಿದ್ದಾಳೆ.

“ತನ್ನ ಅಜ್ಞಾನದಿಂದಾಗಿಯೋ ಅಥವಾ ತನ್ನ ಮಾತ್ಸರ್ಯದಿಂದಾಗಿಯೋ, ಅಂತೂ ಗೇಲ್ ಈಗ ಸಿಡಿದೆದ್ದಿದ್ದಾಳೆ; ಈ ಭುವಿಯ ಮೇಲೆ ನಡೆದಾಡಿರುವ ಅತ್ಯಂತ ಮಹೋನ್ನತ ಆಧ್ಯಾತ್ಮಿಕ ಗುರುವಲ್ಲೋರ್ವರಾದ ಅಮ್ಮನ ಮೇಲೆ ಜನರ ವಿಶ್ವಾಸವನ್ನು ನಾಶಮಾಡುವ ಪ್ರಯತ್ನ ಮಾಡುತ್ತಿದ್ದಾಳೆ. ಇದು ಕತ್ತಲೆಯು ಸೂರ್ಯನನ್ನು ನಾಶಮಾಡಲು ಹೊರಟ ಹಾಗಲ್ಲದೆ ಮತ್ತೇನಲ್ಲ.”

ಗೇಲ್ ಅಮ್ಮನ ಆಶ್ರಮವನ್ನು ಯಾಕೆ ಬಿಟ್ಟುಹೋದಳೆಂಬ ಸತ್ಯ ಈಗ ಸ್ಪಷ್ಟವಾಗಿ ಎಲ್ಲರಿಗೂ ಗೊತ್ತಾಗಿದೆ. ಅವಳು ಹಿಂಸೆಗೆ ಒಳಗಾದಳು ಎಂದಲ್ಲ, ಬದಲಿಗೆ ಅವಳ ವೈಯಕ್ತಿಕ ಬಯಕೆಗಳು ಅವಳು ಪಾಲಿಸಬೇಕಿದ್ದ ಸನ್ಯಾಸಾಶ್ರಮಕ್ಕೆ ಒಪ್ಪುವಂಥದಾಗಿರಲಿಲ್ಲ. ಇಂದು, ಅಮ್ಮನ ಸಂಸ್ಥೆಯನ್ನು ಬಿಟ್ಟುಹೋಗಿ ಮದುವೆಯಾಗಿದ್ದು ನಂತರ ವಿಚ್ಚೇದನ ಪಡೆದ್ದದ್ದು ಎನ್ನುವುದೆಲ್ಲಾ ಈಗ ಕಾನೂನಿನಲ್ಲಿ ದಾಖಲಾಗಿ ಯಾರಿಗೂ ಲಭ್ಯವಿದೆ.

ಕಳೆದ ೨೩ ವರ್ಷಗಳಲ್ಲಿ ಅಮ್ಮನೊಂದಿಗೆ ಯಾತ್ರೆ ಮಾಡುವ, ಅಮ್ಮನೊಂದಿಗೆ ಉಳಿದುಕೊಳ್ಳುವ ಮತ್ತು ಅಮ್ಮನನ್ನು ನನ್ನ ಮನೆಯಲ್ಲಿ ಉಪಚರಿಸುವ ಭಾಗ್ಯ ನನಗೆ ಸಿಕ್ಕಿದೆ. ಅಮ್ಮನ ಅತ್ಯಂತ ಹಿರಿಯ ಸನ್ಯಾಸೀ ಶಿಷ್ಯರೂ ನನ್ನ ಆಪ್ತರಾಗಿದ್ದಾರೆ. ಹೀಗಿದ್ದೂ ಗೇಲ್ ತನ್ನ ಪುಸ್ತಕದಲ್ಲಿ ಬರೆದುಕೊಂಡಿರುವ ವಿಷಯಗಳ ಬಗ್ಗೆ ಸೂಕ್ಷ್ಮವಾಗಿಯೂ ಸಹ ನಾನು ಕೇಳಿಲ್ಲ, ಕಂಡಿಲ್ಲ. ಬದಲಿಗೆ ಅಮ್ಮನ ಪ್ರೇಮ, ಅಮ್ಮನ ವಿನಯತೆ, ತಾಳ್ಮೆ ಮತ್ತು ಕರುಣೆ – ಇವನ್ನು ಮಾತ್ರವೇ ಕಾಣುತ್ತಿದ್ದೇನೆ.

“ಅಮ್ಮ ಮತ್ತು ಅಮ್ಮನ ಅಶ್ರಮವು ಲೋಕಹಿತಕ್ಕಾಗಿ ಏನೆಲ್ಲ ಕಾರ್ಯಗಳನ್ನು ಮಾಡುತ್ತಿದೆ ಎಂಬುದನ್ನು ನೇರವಾಗಿ ನಾನೇ ಕಾಣುವಂಥ ಸ್ಥಿತಿಯಲ್ಲಿ ನಾನಿರುವೆ; ಇದು ನನ್ನ ಮನವನ್ನು ಗಾಢವಾಗಿ ಸ್ಪರ್ಷಿಸಿ, ನನ್ನನ್ನು ವಿನೀತವಾಗಿಸುವ ಅನುಭವವಾಗಿದೆ!”

೧೫ ವರ್ಷಗಳ ಹಿಂದೆ ಗೇಲ್ ಆಶ್ರಮ ಬಿಟ್ಟು ಹೋದಂದಿನಿಂದ ಅಮ್ಮನ ಸೇವಾ ಕಾರ್ಯಗಳು ಅಗಾಧವಾಗಿ ಬೆಳೆದುನಿಂತಿವೆ. ಅಮ್ಮನ ಸರಳ ಜೀವನಕ್ರಮವನ್ನು, ಬಡವರನ್ನು ನಿರ್ಗತಿಕರನ್ನು ಅಮ್ಮನ ಆಶ್ರಮವು ನಡೆಸಿಕೊಳ್ಳುವ ರೀತಿಯನ್ನು ನೋಡಿರುವ ನಾನು, ಸ್ವತಃ ಯೂರೋಪ್ ಮತ್ತು ಹೊರದೇಶಗಳಲ್ಲಿ ಅಮ್ಮನ ಸೇವಾ ಯೋಜನೆಗಳಿಗೆ ಹಣವನ್ನು ದಾನವಾಗಿ ನೀಡಿದ್ದೇನೆ. ವಾಸ್ತವದಲ್ಲಿ, ೨೦೦೯ ರಿಂದ ಈಚೆಗೆ, ನಾನು ಹೆಚ್ಚಾಗಿ ಭಾರತದಲ್ಲಿ ಅಮ್ಮನ ಆಶ್ರಮದಲ್ಲೇ ವಾಸಿಸುತ್ತಿದ್ದೇನೆ, ಮತ್ತು ಸ್ಥಳೀಯ ಮಹಿಳೆಯರನ್ನು ಸಬಲರನ್ನಾಗಿಸುವ ಅಮ್ಮನ ಕಾರ್ಯಕ್ರಮವೊಂದರಲ್ಲಿ ನೇರವಾಗಿ ನಾನೇ ಭಾಗಿಯಾಗಿದ್ದೇನೆ. ಅಮ್ಮ ಮತ್ತು ಅಮ್ಮನ ಆಶ್ರಮವು ಲೋಕಿಹಿತಕ್ಕಾಗಿ ಏನೆಲ್ಲ ಕಾರ್ಯಗಳನ್ನು ಮಾಡುತ್ತಿದೆ ಎಂಬುದನ್ನು ನೇರವಾಗಿ ನಾನೇ ಕಾಣುವಂಥ ಸ್ಥಿತಿಯಲ್ಲಿ ನಾನಿರುವೆ; ಇದು ನನ್ನ ಮನವನ್ನು ಗಾಢವಾಗಿ ಸ್ಪರ್ಷಿಸಿ, ನನ್ನನ್ನು ವಿನೀತವಾಗಿಸುವ ಅನುಭವವಾಗಿದೆ! ಇದಕ್ಕಾಗಿ ನಾನು ಧನ್ಯತೆ ಅರ್ಪಿಸಬಯಸುತ್ತೇನೆ. ದಾನವಾಗಿ ಬಂದ ಹಣವನ್ನು ಅಮ್ಮ ತಮ್ಮ ಮನೆಮಂದಿಗೆ ಕೊಡುತ್ತಾರೆ ಎಂಬ ವಿಚಾರ ಪೊಳ್ಳು. ಅಂಥಾ ಯಾವುದನ್ನೂ ನಾನು ಸ್ವಲ್ಪವೂ ನೋಡಿಲ್ಲ. ಬದಲಿಗೆ, ಅಮ್ಮನ ಸೇವಾಯೋಜನೆಗಳು ಹೇಗೆ ವಿಶಾಲವಾಗುತ್ತಾ ಬೆಳೆದಿವೆ, ಮತ್ತು ಬೆಳೆಯುತ್ತಲೇ ಇವೆ ಎಂಬುದನ್ನು ನೋಡುತ್ತಲೇ ಇದ್ದೇನೆ.

ದುಃಖದ ಸಂಗತಿ ಎಂದರೆ, ಗೇಲ್ ಆಧಾತ್ಮ ಸಾಧಕರಿಗೆ ಒಬ್ಬ ಆದರ್ಶವ್ಯಕ್ತಿ ಆಗಬಹುದಿತ್ತು, ಆಗಲಿಲ್ಲ. ತನ್ನ ಅಜ್ಞಾನದಿಂದಾಗಿಯೋ ಅಥವಾ ತನ್ನ ಮಾತ್ಸರ್ಯದಿಂದಾಗಿಯೋ, ಅಂತೂ ಗೇಲ್ ಈಗ ಸಿಡಿದೆದ್ದಿದ್ದಾಳೆ; ಈ ಭುವಿಯ ಮೇಲೆ ನಡೆದಾಡಿರುವ ಅತ್ಯಂತ ಮಹೋನ್ನತ ಆಧ್ಯಾತ್ಮಿಕ ಗುರುವಲ್ಲೋರ್ವರಾದ ಅಮ್ಮನ ಮೇಲೆ ಜನರ ವಿಶ್ವಾಸವನ್ನು ನಾಶಮಾಡುವ ಪ್ರಯತ್ನ ಮಾಡುತ್ತಿದ್ದಾಳೆ. ಇದು ಕತ್ತಲೆಯು ಸೂರ್ಯನನ್ನು ನಾಶಮಾಡಲು ಹೊರಟ ಹಾಗಲ್ಲದೆ ಮತ್ತೇನಲ್ಲ.

– ಸೂಸನ್ ವೆಕ್ಕರ್

Source: A Letter from Susanne Wecker

ಮಾತಾ ಅಮೃತಾನಂದಮಯಿ ಮಠ (MAM) ಹಾಗೂ ಅಮೃತಾ ಎಂಟರ್ ಪ್ರೈಸಸ್ ಪ್ರೈ. ಲಿಮಿಟೆಡ್ (AEPL)

ಕಟ್ಟುಕಥೆ: ಮಾತಾ ಅಮೃತಾನಂದಮಯಿ ಮಠವು ಅಮೃತಾ ಎಂಟರ್ ಪ್ರೈಸಸ್ ಪ್ರೈ. ಲಿಮಿಟೆಡ್ ಇದನ್ನು ನಡೆಸುತ್ತದೆ.
ವಾಸ್ತವತೆ : “ಮಾತಾ ಅಮೃತಾನಂದಮಯಿ ಮಠ” ಹಾಗೂ “ಅಮೃತಾ ಎಂಟರ್ ಪ್ರೈಸಸ್ ಪ್ರೈ. ಲಿಮಿಟೆಡ್” (AEPL) ಇವುಗಳ ಬಗ್ಗೆ ಜನರಲ್ಲಿ ಏಳುವ ಪ್ರಶ್ನೆಗಳಿಗೆ ಸ್ಪಷ್ಟೀಕರಣ ಕೋರಿ AEPLನ ಡೈರೆಕ್ಟರ್ ಶ್ರೀ ಕೆ. ಶ್ರೀಕುಮಾರ್ ಅವರನ್ನು “ಅಮ್ಮಸ್ಕಾಂಡಲ್” ಸಂಪರ್ಕಿಸಿತು. ಅವರು ನುಡಿದರು, “ಅಮೃತಾ ಎಂಟರ್ ಪ್ರೈಸಸ್ ಪ್ರೈ. ಲಿಮಿಟೆಡ್” (AEPL) ” ಎಂಬುದು ಪ್ರತ್ಯೇಕ ಲೀಗಲ್ ಎಂಟಿಟಿ ಆಗಿದೆ. “ಇಂಡಿಯನ್ ಕಂಪನೀಸ್ ಆಕ್ಟ್ ೧೮೫೬” ಅಡಿಯಲ್ಲಿ ನೊಂದಾವಣಿ ಆಗಿದೆ. ಇದಕ್ಕೂ ಮತ್ತು ಚಾರಿಟಬಲ್ ಟ್ರಸ್ಟ್ ಆಗಿ ನೊಂದಾವಣಿಯಾಗಿರುವ ಮಾತಾ ಅಮೃತಾನಂದಮಯಿ ಮಠಕ್ಕೂ ಯಾವುದೇ ಸಂಬಂಧವಿಲ್ಲ. ಹೆಸರಿನಲ್ಲಿ “ಅಮೃತ” ಎಂಬ ಪದವಿರುವ ಎಲ್ಲಾ ಅಸ್ತಿತ್ವಗಳನ್ನು ಮಾತಾ ಅಮೃತಾನಂದಮಯಿ ಮಠಕ್ಕೆ ಸಂಬಂಧಿಸಿದೆ ಎಂದರೆ ಅದು ತಪ್ಪುಗ್ರಹಿಕೆಯಾಗುತ್ತದೆ. “ಅಮೃತಾ ಎಂಟರ್ಪ್ರೈಸಸ್ ಪ್ರೈ. ಲಿ.” ಇದುವರೆಗೂ ಪ್ರತಿವರ್ಷವೂ ಕಾರ್ಪೊರೇಟ್ ಸೋಷಿಯಲ್ ಜವಾಬ್ದಾರಿಯನ್ನು ತಕ್ಕ ಮಟ್ಟಿಗೆ ನಿರ್ವಹಿಸಿದೆ.

Source: MAM and AEPL

ಹಿಂದೆ ಅಮೃತಪುರಿಯ ನಿವಾಸಿಯಾಗಿದ್ದು, ನಂತರ ಬಿಟ್ಟುಹೋದ, “ಸಂತೋಷ್” ಎಂದು ತನ್ನನ್ನು ಕರೆದುಕೊಳ್ಳಬಯಸುವ ಒಬ್ಬ ವ್ಯಕ್ತಿ ಗೇಲ್ ಟ್ರೆಡ್ವೆಲ್ ಳ ಸ್ವಭಾವದ ಬಗ್ಗೆ ಹೇಳುತ್ತಾರೆ.

ಗೇಲ್ ಆಶ್ರಮ ಬಿಟ್ಟುಹೋದ ಸಮಯದಲ್ಲೇ ಆಶ್ರಮದಿಂದ ಹೊರಹೋದ ವ್ಯಕ್ತಿಯೊಬ್ಬರು “The God Light” ಎಂಬ ಆನ್ ಲೈನ್ ಪೋರಮನಲ್ಲಿ ಪೋಸ್ಟ್ ಮಾಡಿದ ಲೇಖನವಿದು. ಗೇಲ್ ಟ್ರೆಡ್ವೆಲ್ ಳನ್ನು ನೇರವಾಗಿ ಬಲ್ಲವರಿಗೆ ಅವಳ ಬಗ್ಗೆ ಇರುವ ಅಭಿಪ್ರಾಯವನ್ನೇ ಈ ವ್ಯಕ್ತಿಯೂ ವ್ಯಕ್ತಪಡಿಸುತಿದ್ದಾರೆ. ಈ ವ್ಯಕ್ತಿ ತಮ್ಮನ್ನು “ಸಂತೋಷ್” ಎಂದು ಗುರುತಿಸಿ ಕೊಳ್ಳಬಯಸುತ್ತಾರೆ. ಇಲ್ಲಿರುವುದು ಅವರ ಪತ್ರದ ಪ್ರತಿ. ಮೂಲವನ್ನು ನೋಡಬಯಸುವವರು ಇಲ್ಲಿ ನೋಡಿ:

http://spiritualforum.me.uk/thread/5321

(ಬ್ರಹ್ಮಚಾರಿಣಿ ಲಕ್ಷ್ಮಿ) ಅವರ ಪತ್ರವು ಅಹಂಕಾರವನ್ನು ನಿಯಂತ್ರಿಸಲಾಗದೆ ಅದರ ಬೇಕು ಬೇಡಗಳನ್ನು ಈಡೇರಿಸಲು ಯಾವ ಮಟ್ಟಿಗೆ ಬೇಕಾದರೂ ಇಳಿಯಲು ಸಿದ್ಧವಾಗಿ ದಾರಿತಪ್ಪುವ ಸಾಧಕರೆಲ್ಲರಿಗೆ ಬಹಳ ಪ್ರಸಕ್ತವಾಗಿದೆ. ನನ್ನ ಇತಿಮಿತಿಗಳನ್ನು ನನ್ನ ಗುರುವಿನ ಮೇಲೆ ಹೇರಿ, ಅವರನ್ನೇ ಆರೋಪಿಸುತ್ತಾ ನಾನು ಮಾತಾ ಅಮೃತಾನಂದಮಯಿ ಮಠವನ್ನು ತೊರೆದೆ. ಹಾಗು ನಾನು ಆಶ್ರಮದಲ್ಲಿ ನನಗೆ ಬೇಕಾದಂತೆ ಇರಲು ಬಿಡಲಿಲ್ಲವಲ್ಲಾ ಎಂಬ ಸಿಟ್ಟಿನಿಂದಾಗಿ ಸ್ವಲ್ಪ ಕಾಲ ಸಾರ್ವಜನಿಕ ವೇದಿಕೆಗಳಲ್ಲಿ ಗುರುವಿನ ಅವಹೇಳನ ಸಹ ಮಾಡಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದೆ. ಗೇಲ್ ಟ್ರೆಡ್ವೆಲ್ ( ಗಾಯತ್ರಿ) ಆಶ್ರಮ ಬಿಟ್ಟ ಅದೇ ಸಮಯದಲ್ಲೇ ನಾನೂ ಬಿಟ್ಟಿದ್ದು. ಅವಳನ್ನು ಅಮ್ಮನ ಬಹುಮುಖ್ಯ ಶಿಷ್ಯೆ ಎಂದು ಪರಿಗಣಿಸಲಾಗಿತ್ತು. ಅವಳು ಹೋದಳೆಂದಾಗ, ನನಗೆ ನನ್ನ ತಪ್ಪುಗಳನ್ನು ನೋಡಿ ತಿದ್ದಿಕೊಳ್ಳಲಾಗದೆ ಓಡಿಹೋಗುವಷ್ಟು ಅಹಂಕಾರ ಸಿಡಿದೆದ್ದಿತು. ಗಾಯತ್ರಿಗೆ ಬಂದ ಸಮಯದಿಂದಲೂ ಸಮಸ್ಯೆಗಳಿದ್ದವು; ಅವಳ ಸ್ವಭಾವ ಬಹು ಕಠಿಣವಾಗಿತ್ತು. ಸುಳ್ಳನ್ನು ಸರಾಗವಾಗಿ ಹೇಳುತ್ತಿದ್ದಳು. ತನಗೆ ಬೇಕಾದ್ದನ್ನು ಸಾಧಿಸಲು ಅವಳು ಆಶ್ರಮವಾಸಿಗಳಿಗೆ ಶಾರೀರಕವಾಗಿಯೂ ಸಹ ತೊಂದರೆ ಕೊಡುತ್ತಿದ್ದಳು. ಅವಳಿಗೆ “ರಾಣಿ ಜೇನು” ಎಂಬ ಅಡ್ಡಹೆಸರು ಬಿದ್ದಿತ್ತು.

“ಚಿಕ್ಕ ಮಕ್ಕಳನ್ನು ಕೊದಲು ಹಿಡಿದೆತ್ತಿ ನೆಲದ ಮೇಲೆ ಅಪ್ಪಳಿಸುತ್ತಿದ್ದಳು; ಅಮ್ಮ ಆ ಮಕ್ಕಳ ಕೈಗೆ ಕೊಟ್ಟಿರುತ್ತಿದ್ದ ಪ್ರಸಾದವನ್ನು ಕಿತ್ತುಕೊಂಡು ಅದನ್ನು ನೆಲಕ್ಕೆ ಅಥವಾ ಕಿಟಕಿಯಾಚೆ ಬಿಸಾಡಿ ಜೋರಾಗಿ ನಗುತ್ತಿದ್ದಳು. ಇದನ್ನು ನಾನೇ ನೋಡಿದ್ದೇನೆ. ಅವಳ ಮಾನಸಿಕ ಸ್ತಿಮಿತತೆಯ ಬಗ್ಗೆ ನಮ್ಮಲ್ಲಿ ಎಷ್ಟೋ ಜನರಿಗೆ ಸಂಶಯ ಬಂದಿದ್ದುಂಟು.”

ನಾನು ಯಾವುದೇ ರೀತಿಯಲ್ಲಿ ಗೇಲ್ ಳ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿಲ್ಲ; ಈ ಲೇಖನದಿಂದಾಗಿ ಅವಳ ಹೆಸರಿಗೆ ಹೆಚ್ಚು ಪಬ್ಲಿಸಿಟಿ ದೊರಕಲಿ, ಅವಳ ಪುಸ್ತಕಕ್ಕೆ ಹೆಚ್ಚು ಬೇಡಿಕೆ ಬರಲಿ ಎಂಬ ಉದ್ದೇಶವಂತೂ ನನಗಿಲ್ಲ. ಹಾಗೆ ಅಪವ್ಯಾಖ್ಯಾನವಾಗದಿರಲಿ. ಆ ಪುಸ್ತಕದಲ್ಲಿ ಸತ್ಯದ ಒಂದು ಎಳೆಯೂ ಇಲ್ಲ, ಸಾಕ್ಷಿ ಪುರಾವೆಗಳೂ ಯಾವುದೇ ಪುಟದಲ್ಲೂ ಇಲ್ಲ. ಸನ್ಯಾಸ ಪದವಿಯನ್ನು ಅವಳು ಆಗಾಗ ದುರುಪಯೋಗ ಪಡಿಸಿಕೊಳ್ಳುತ್ತಿದ್ದಳು. ಇದು ನಮಗ್ಯಾರಿಗೂ ಒಪ್ಪಿಗೆಯಾಗುತ್ತಿರಲಲ್ಲಿ. ಅವಳು ಬಿಟ್ಟುಹೋದಾಗ ನಮ್ಮಲ್ಲಿ ಅನೇಕರಿಗೆ ನಿರಾಳವೆನಿಸಿತ್ತು. ಕೆಲವು ಭಾರತೀಯ ಹುಡುಗಿಯರನ್ನು ಅವಳು ಸಾರ್ವಜನಿಕವಾಗಿ ದೈಹಿಕವಾಗಿ ಹಿಂಸಿಸುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ವಿಚಾರಿಸಿದಾಗ, ನನ್ನ ಬಂಧುವೂ ಆಗಿದ್ದ ಒಬ್ಬ ಹುಡುಗಿಯಿಂದ ತಿಳಿದುಬಂದಿದ್ದು ಇದು; ಮಕ್ಕಳಿಗೆ ಕಷ್ಟ ಕೊಡುವುದಕ್ಕಾಗಿ ಗಾಯತ್ರಿ ಯಾವ ಹಂತಕ್ಕೂ ಇಳಿಯಬಲ್ಲಳು; ಚಿಕ್ಕ ಮಕ್ಕಳನ್ನು ಕೊದಲು ಹಿಡಿದೆತ್ತಿ ನೆಲದ ಮೇಲೆ ಅಪ್ಪಳಿಸುತ್ತಿದ್ದಳು; ಅಮ್ಮ ಆ ಮಕ್ಕಳ ಕೈಗೆ ಕೊಟ್ಟಿರುತ್ತಿದ್ದ ಪ್ರಸಾದವನ್ನು ಕಿತ್ತುಕೊಂಡು ಅದನ್ನು ನೆಲಕ್ಕೆ ಅಥವಾ ಕಿಟಕಿಯಾಚೆ ಬಿಸಾಡಿ ಜೋರಾಗಿ ನಗುತ್ತಿದ್ದಳು. ಇದನ್ನು ನಾನೇ ನೋಡಿದ್ದೇನೆ. ಅವಳ ಮಾನಸಿಕ ಸ್ತಿಮಿತತೆಯ ಬಗ್ಗೆ ನಮ್ಮಲ್ಲಿ ಎಷ್ಟೋ ಜನರಿಗೆ ಸಂಶಯ ಬಂದಿದ್ದುಂಟು. ಮಾಜೀ ಆಶ್ರಮವಾಸಿಯಾಗಿ ನಾನು ಇಷ್ಟನ್ನು ದೃಢವಾಗಿ ಹೇಳಬಯಸುತ್ತೇನೆ: ಗೇಲ್ ಗೆ “ರಾಣಿ ಜೇನು” ಪದವಿಯನ್ನು ಸ್ವಲ್ಪವಾದರೂ ಮರಳಿಪಡೆಯಬೇಕೆಂಬ ಉದ್ದೇಶ ಈ ಪುಸ್ತಕದಲ್ಲಿ ಎದ್ದುತೋರುತ್ತಿದೆ. ವಿಚಾರಿಸಿ ನೋಡಿದಾಗ ಅದರಲ್ಲಿ ಪೊಳ್ಳುತನ ಮಾತ್ರವೇ ಕಾಣುವುದು. ನನ್ನಂತೆ ಅವಳೂ, ಅಹಂಕಾರದಿಂದ ಉತ್ತೇಜನ ಪಡೆಯುತ್ತಿರುವ ತನ್ನ ಹತಾಶೆಯನ್ನು ನಿವಾರಿಸಿಕೊಳ್ಳಲು ಕಲೆಯುವವರೆಗೂ, ಅವಳ ಇಂಥ ದುಷ್ಕಾರ್ಯಗಳು ನಡೆಯುತ್ತಲೇ ಇರುತ್ತದೆ.

ಎರಡು ದಶಕಗಳ ಕಾಲ ತನ್ನ ಗುರುವಿನ ಸನ್ಯಾಸಿ ಶಿಷ್ಯೆಯಾಗಿದ್ದ ಗೇಲ್ ಟ್ರೆಡ್ವೆಲ್ ಮಾತಾ ಅಮೃತಾನಂದಮಯಿ ಮಠವನ್ನು ೧೯೯೯ರಲ್ಲಿ ಬಿಟ್ಟುಹೋದಳು. ಗುರುವಿನ ಬಗ್ಗೆ ಅವಹೇಳನಕಾರಿಯಾದ ಅವಳ ಪುಸ್ತಕವನ್ನು ಸಾರ್ವಜನಿಕರು ಗಂಭೀರವಾಗಿ ಪರಾಮರ್ಶಿಸಿ ನೋಡಿದ ಮೇಲೆ, ಅವಳಿಗೆ ಗುರುವಿನ ಬಗ್ಗೆ ಹತಾಶೆ ಪ್ರಾರಂಭವಾಗಿದ್ದು ಹೇಗೆಯೆಂದರೆ, ಅಮ್ಮನ ನ್ಯೂಯಾರ್ಕ್ ಭಕ್ತನೊಬ್ಬನು ಅವಳ ಪ್ರೇಮವನ್ನು ನಿರಾಕರಿಸಿದ ಕಾರಣದಿಂದ ಎಂದು ಬೆಳಕಿಗೆ ಬಂದಿದೆ. ಗೇಲ್ ಗೆ ಹಲವಾರು ಜನ ಪರಿಚಾರಕರಿದ್ದು ಅವಳ ಲೌಕಿಕ ಬಯಕೆಗಳನ್ನು ಅವರು ಈಡೇರಿಸುತ್ತಿದ್ದ ಕಾರಣ “ರಾಣಿಜೇನು” ಎಂಬ ಅಡ್ಡ ಹೆಸರು ಇದ್ದಿತಾದರೂ, ಅವಳು ತನ್ನನ್ನು “ಅಮ್ಮನ ಛಾಯೆ” ಎಂದು ತಾನೇ ಕರೆದುಕೊಳ್ಳುತ್ತಿದ್ದಳು. ಅಮ್ಮನ ವೈಯಕ್ತಿಕ ಪರಿಚಾರಿಕೆಯಾದ ಮತ್ತು ಭಾರತದ ಆಶ್ರಮದಲ್ಲಿ ಗೇಲ್ ಗೆ ಸಮೀಪವೆನಿಸಿದ್ದ ಬ್ರಹ್ಮಚಾರಿಣಿ ಲಕ್ಷ್ಮಿ ಅವರು ಬರೆದಿರುವ ಪತ್ರ ಇಲ್ಲಿದೆ. ತನ್ನ ಪುಸ್ತಕದ ಮೇಲೆ ಕೆಟ್ಟ ವಿಮರ್ಶೆ ಮಾಡುವ ಯಾರನ್ನೂ ತರಾಟೆಗೆ ತೆಗೆದುಕೊಳ್ಳಲು ಸಿದ್ಧವಿರುವ ಅವಳ ಒಂದು ತಂಡವೇ ಬೆಂಬಲಕ್ಕೆ ಇದೆ. ಇತ್ತೀಚೆಗೆ ಗೇಲ್ ಳ ಒಬ್ಬ ಫ್ರೆಂಡ್ ಹಾಗೂ ಬೆಂಬಲಿಗರೊಬ್ಬರು, ಬ್ರಹ್ಮಚಾರಿಣಿ ಲಕ್ಮಿ ಆಶ್ರಮ ತೊರೆದಳು ಎಂಬ ವಂದತಿ ಹಬ್ಬಿಸಿದರು. ಅದಕ್ಕೆ ಸ್ಪಂದಿಸುತ್ತಾ ಲಕ್ಮಿ ಈ ಪತ್ರ ಬರೆದು ಪ್ರಕಟಿಸಿದರು. “ಗುರುನಿಂದೆ” ಎನ್ನುವುದು ಪಂಚ ಮಹಾ ಪಾಪಗಳಲ್ಲಿ ಅತ್ಯಂತ ಘೋರವಾದುದು; ಅದನ್ನು ಭಗವಂತನೂ ಕೂಡ ಕ್ಷಮಿಸಲಾರ ಎಂದಿದೆ.

– ಸಂತೋಷ್

Source:A Former Ashram Resident Who Left Amritapuri Speaks Out About Gail Tredwell’s True Nature

ಬಹುಕಾಲದ ಭಕ್ತೆಯೂ ಆಶ್ರಮವಾಸಿಯೂ ಆದ ಕ್ರಿಸ್ಟೀ ಬರೆಯುತ್ತಾರೆ.

ಹಲೋ! ನನ್ನ ಹೆಸರು ಕ್ರಿಸ್ಟೀ. ನಾನು ನನ್ನ ಭಾಗದ ಕಥೆಯನ್ನು ಹೇಳಬಯಸುವೆ. ಗೇಲ್ ಟ್ರೆಡ್ವೆಲ್ ಆಶ್ರಮ ಬಿಟ್ಟು ಹೋದ ಕಾಲದಲ್ಲಿ ನಾನು ಆಶ್ರಮದಲ್ಲಿ ನೆಲೆಸಿದ್ದೆ. ಕಾರಣಗಳೇನೆಂದು ನನಗೆ ಗೊತ್ತಿಲ್ಲ, ಆದರೆ ಅವಳು ಹೋದಕೂಡಲೆ ಅವಳ ಆಪ್ತಗೆಳತಿಯರು ನನ್ನನ್ನು ತಮ್ಮ ಗುರಿಯಾಗಿಸಿಕೊಂಡು, ಅಮ್ಮನ ಮೇಲಿನ ನನ್ನ ವಿಶ್ವಾಸವನ್ನು ಹಾಳುಮಾಡಲು ತುಂಬಾ ಪ್ರಯತ್ನಿಸಿದರು. ಅವರ ಜೊತೆ ನಾನೂ ಆಶ್ರಮದಿಂದ ಹೊರಹೋಗಬೇಕು ಎಂದು ನನ್ನನ್ನು ಬೇಡುತ್ತಿದ್ದರು. ಅವರು ಬೇಕಾದಂತೆ ಸುಳ್ಳುಗಳನ್ನು ಹಬ್ಬಿಸುತ್ತಿದ್ದರು. ಕೊಂಚಕಾಲದ ವರೆಗೆ ಅದೆಲ್ಲವೂ ವಿಷದ ಹಾಗೆ ನನ್ನ ಮನಸ್ಸನ್ನು ಹೊಕ್ಕವು; ಕೊಂಚಕಾಲ ನಾನು ಅವರು ಹೇಳುತ್ತಿದ್ದನ್ನು ಕೇಳಿಸಿಕೊಂಡೆ.

ಅಮ್ಮನ ಜೊತೆಗೆ ಅಷ್ಟೊಂದು ವರ್ಷ ಕಳೆದಮೇಲೂ, ಅಮ್ಮನ ಅಸಾಮಾನ್ಯ ಪ್ರೇಮವನ್ನು ಪಡೆದವಳಾಗಿಯೂ, ನಾನು ಒಂದು ಕ್ಷಣವಾದರೂ ಸರಿ, ಏಕೆ ನಾನೆಂದೂ ನಂಬದ ಒಬ್ಬಾಕೆಯ ಅಭಿಪ್ರಾಯಗಳನ್ನು ಆಧರಿಸಿದ ಅವರುಗಳ ಮಾತು ಕೇಳುವಂತಾದೆ? ಎಂದು ಅನೇಕ ಸಲ ಈಗಲೂ ಯೋಚಿಸುತ್ತೇನೆ. ನಾನು ಮನುಷ್ಯಳಲ್ಲವೆ? ನನ್ನದೇ ಆದ ಭಯಾತಂಕಗಳು ದುರ್ಗುಣಗಳೂ ಇರುತ್ತವೆ; ಸೂಕ್ತ ಸಂದರ್ಭ ಎದುರಾದಾಗ ತಾತ್ಕಾಲಿಕವಾಗಿ ನಾನು ಅವುಗಳಿಂದಾಗಿ ಅಂಧೆಯಾಗಿದ್ದೆ. ಆಗ ನಾನು ಕೂತು ಆತ್ಮಾವಲೋಕನ ಮಾಡತೊಡಗಿದೆ. ನನ್ನ ಜೀವನದಿಂದ ನಾನು ಮಾಡಬೇಕಾಗಿರುವುದು ಏನು ಎಂದು ಕಂಡುಕೊಂಡೆ. ಇವತ್ತು ನನಗೆ ಪಶ್ಚಾತ್ತಾಪವಿಲ್ಲ. ಸಂಶಯವೂ ಇಲ್ಲ. ಅಮ್ಮ ನನಗೆ ಏನೆಲ್ಲಾ ನೀಡಿದ್ದಾರೆ ಅದಕ್ಕೆ ನಾನು ಧನ್ಯತೆಯೊಂದನ್ನು ಮಾತ್ರವೇ ಹೇಳಬಲ್ಲೆ. ಕಳೆದ ೧೫ ವರ್ಷಗಳು ನನ್ನ ಜೀವನದಲ್ಲಿ ಅತ್ಯಂತ ಸಂತೋಷಮಯ ಕಾಲವಾಗಿದೆ. ಎಷ್ಟೇ ಚಿಕ್ಕದಾಗಿ ಆದರೂ ಸಹ ನಾನು ಅಮ್ಮನ ಸಂಸ್ಥೆಯ ಭಾಗವಾಗಿರುವುದು, ನನಗೆ ಸಮಾಧಾನ ನೀಡಿದೆ, ತೃಪ್ತಿ ನೀಡಿದೆ.

“ಗೇಲ್, ತಾನೇ ಇತರರನ್ನು ಹಿಂಸಿಸುತ್ತಿದ್ದಳು; ಹಾಗಿದ್ದೂ ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಗೆ ಗುರಿಯಾದೆ ಎಂದು ಬರೆದುಕೊಂಡಿರುವುದು ನನಗೆ ವ್ಯಂಗ್ಯೋಕ್ತಿಯಾಗಿ ತೋರುತ್ತಿದೆ. ಅವಳು ಅಮ್ಮನನ್ನು ಎರಡು ಮುಖದವರಾಗಿ ಚಿತ್ರಿಸುತ್ತಾಳೆ, ಆದರೆ ಆ ಮುಖಗಳ ವರ್ಣನೆ ನೋಡಿದಾಗ ನನಗೆ ಅಮ್ಮ ಅಲ್ಲ, ಗೇಲ್ ನೆನಪಾಗುತ್ತಾಳೆ.”

ಗೇಲ್ ಬಿಟ್ಟುಹೋದಾಗಿನಿಂದ, ಇಂದಿನ ವರೆಗೂ ತಾನು ಶೋಷಣೆಗೆ ಬಲಿಯಾದೆ ಎಂಬ ತನ್ನ ಅನಿಸಿಕೆಯ ಸುಳ್ಳುಗಳನ್ನೇ ಹರಡುತ್ತಿದ್ದಾಳೆ. ನಿಮ್ಮನ್ನೂ ಬಲಿಹಾಕಬೇಕೆಂಬ ಅವಳ ಹೊಂಚಿನ ಕಾರಣ, ನಾನು ನಿಮ್ಮನ್ನು ಉದ್ದೇಶಿಸಿ ಈಗ ಬರೆಯುತ್ತಿರುವುದು. ಅವಳ ಪುಸ್ತಕವನ್ನು ನೀವು ಓದುವಿರಾದರೆ ಸ್ಪಷ್ಟ ತಾರ್ಕಿಕ ಮನಸ್ಸಿನಿಂದ ಓದುವಂತಾಗಲಿ; ನಿಮ್ಮದೇ ಅನುಭವಗಳನ್ನು ಕಡೆಗಾಣಿಸಿ ಅಥವಾ ಇಲ್ಲವಾಗಿಸಿಕೊಂಡು ಅದರಲ್ಲಿ ಕಳೆದುಹೋಗದಿರಲಿ ಎಂದು ಆಶಿಸುತ್ತಾ ನನ್ನ ಅನುಭವಗಳನ್ನು ನನ್ನ ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಛ್ಛಿಸುವೆ.

ಅವಳನ್ನು ನೆನಪಿಸಿಕೊಂಡರೆ ಅವಳು ಹೇಗಿದ್ದಳು ಎಂದು ಹೇಳುವುದೇ ಕಷ್ಟ. ಒಮ್ಮೆ ಸ್ನೇಹಪರಳಾಗಿದ್ದರೆ ಇನ್ನೊಮ್ಮೆ ಇನ್ನೊಬ್ಬರ ಕಡೆ, ನಮಗೆ ನಂಬಿಕೆ ಬರಲು ಕಷ್ಟವಾಗುವಷ್ಟು ದ್ವೇಷ, ಕುಹಕ ತೋರುತ್ತಿದ್ದಳು. ಒಮ್ಮೆ ಸಿಯಾಟಲ್ ಏರ್ಪೋರ್ಟ್ ನಲ್ಲಿ ನಡೆದಿದ್ದು ನೆನಪಾಗುತ್ತಿದೆ. ಅಮ್ಮನ ಫ್ಲೈಟ್ ಹೊರಡಲಿತ್ತು, ನಾವೆಲ್ಲಾ ಕಾಯುತ್ತಿದ್ದೆವು. ಅದೂ ಇದು ಮಾತಾಡುತ್ತಾ ಒಳ್ಳೆಯ ಮೂಡಿನಲ್ಲಿ ನಿಂತಿದ್ದೆವು. ನಾನಂತೂ ಹಾಗೆಂದುಕೊಂಡಿದ್ದೆ. ಒಂದು ಹಂತದಲ್ಲಿ ಒಬ್ಬ ಭಕ್ತರು ಪಾಪ, ಅವಳ ಹತ್ತಿರ ಹೋಗಿ, ತುಂಬಾ ವಿನಯದಿಂದಲೇ, ವಿಮಾನ ಹೊರಡುವ ಸಮಯವಾಯಿತು, “ಚೆಕ್ ಇನ್” ಮುಗಿಯುತ್ತಾ ಬಂತು ಎಂದು ನೆನಪಿಸಿದ. ಗೇಲ್ ಕೂಗಾಡತೊಡಗಿದಳು: “ನಾನು ಯಾರು ಎಂದು ನಿನಗೆ ಗೊತ್ತಿಲ್ಲವಾ? ನಾನು ಏನು ಮಾಡಬೇಕು ಎಂದು ಹೇಳಲು ನೀನು ಯಾರು? ಯೂ ಸ್ಟುಪಿಡ್ ಈಡಿಯೆಟ್, ಹೋಗಾಚೆ! ನಾನು ರೆಡಿಯಾದಮೇಲೆ ಚೆಕ್ ಇನ್ ಮಾಡಿಕೊಳ್ಳುವೆ!” ಎಂದುಬಿಟ್ಟಳು. ನಾನು ದಂಗುಬಡಿದು ಹೋದೆ. ನನಗೆ ಮುಜುಗರವೂ ಆಯಿತು. ಇಂಥ “ಬೈ ಪೋಲಾರ್ ಬಿಹೇವಿಯರ್” ಅನ್ನು ಅವಳಲ್ಲಿ ಆಗಾಗ ಕಂಡಿದ್ದರೆ ನಾನು ಅವಳ ಮಾನಸಿಕ ಆರೋಗ್ಯದ ಬಗ್ಗೆ ವಿಚಾರಿಸಿರುತ್ತಿದ್ದೆ. ಬದಲಿಗೆ “ಹೋಗಲಿಬಿಡು” ಎಂದುಕೊಂಡು ಆದದ್ದನ್ನು ಮರೆಯಲು ಪ್ರಯತ್ನಿಸಿದೆ.

“ಒಬ್ಬ ಭಕ್ತರು ಪಾಪ, ಅವಳ ಹತ್ತಿರ ಹೋಗಿ, ತುಂಬಾ ವಿನಯದಿಂದಲೇ, ವಿಮಾನ ಹೊರಡುವ ಸಮಯವಾಯಿತು, ಚೆಕ್ ಇನ್ ಮುಗಿಯುತ್ತಾ ಬಂತು ಎಂದು ನೆನಪಿಸಿದ. ಗೇಲ್ ಕೂಗಾಡತೊಡಗಿದಳು: “ನಾನು ಯಾರು ಎಂದು ನಿನಗೆ ಗೊತ್ತಿಲ್ಲವಾ? ನಾನು ಏನು ಮಾಡಬೇಕು ಎಂದು ಹೇಳಲು ನೀನು ಯಾರು? ಯೂ ಸ್ಟುಪಿಡ್ ಈಡಿಯೆಟ್, ಹೋಗಾಚೆ! ನಾನು ರೆಡಿಯಾದಮೇಲೆ ಚೆಕ್ ಇನ್ ಮಾಡಿಕೊಳ್ಳುವೆ!” ಎಂದುಬಿಟ್ಟಳು.”

ಗೇಲ್ ತಾನೇ ಇತರರನ್ನು ಹಿಂಸಿಸುತ್ತಿದ್ದಳು; ಹಾಗಿದ್ದೂ ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಗೆ ಗುರಿಯಾದೆ ಎಂದು ಬರೆದುಕೊಂಡಿರುವುದು ನನಗೆ ವ್ಯಂಗ್ಯೋಕ್ತಿಯಾಗಿ ತೋರುತ್ತಿದೆ. ಅವಳು ಅಮ್ಮನನ್ನುಎರಡು ಮುಖದವರಾಗಿ ಚಿತ್ರಿಸುತ್ತಾಳೆ, ಆದರೆ ಆ ಮುಖಗಳ ವರ್ಣನೆ ನೋಡಿದಾಗ ನನಗೆ ಅಮ್ಮ ಅಲ್ಲ, ಗೇಲ್ ನೆನಪಾಗುತ್ತಾಳೆ. ಮಾತ್ರವಲ್ಲ, ಗೇಲ್ ಗೆ ಸಹಾಯ ಮಾಡಿದ, ಅವಳನ್ನು ಆದರಿಸಿದ ಅದೇ ಜನರಿಗೆ, ಅವರ ಈ ಪ್ರೀತಿ ವಾತ್ಸಲ್ಯಕ್ಕೆ ಪ್ರತಿಯಾಗಿ ಅವಳು ನೀಡುತ್ತಿದ್ದ ಮಾನಸಿಕ ಹಾಗು ಕೆಲವೊಮ್ಮೆ ದೈಹಿಕ ಕಿರುಕುಳಗಳನ್ನು ಹೇಗೆ ತಾನೇ ಅವರು ಸಹಿಸಿಕೊಳ್ಳುತ್ತಿದ್ದರು ಎಂದು ಕೆಲವೊಮ್ಮೆ ಯೋಚಿಸಲು ನನಗೆ ಅಚ್ಚರಿಯಾಗುತ್ತದೆ. ತನ್ನ ಸುತ್ತಲೂ ಇದ್ದವರಿಂದ ಸೇವೆ, ಪ್ರೀತಿ, ಸ್ತುತಿ ಇವುಗಳನ್ನೇ ಸದಾ ಪಡೆಯುತ್ತಿದ್ದರೂ ಗೇಲ್ ಸದಾ ಮಂತ್ರದಂದೆ ಜಪಿಸುತ್ತಾ ಹೇಳುತ್ತಿದ್ದುದು, “ನನ್ನನ್ನು ಯಾರೂ ಪ್ರೀತಿಸುವುದಿಲ್ಲ… ನನ್ನ ಬಗ್ಗೆ ಯಾರೂ ಕೇರ್ ಮಾಡುವುದಿಲ್ಲ… ನನ್ನನ್ನು ಯಾರೂ ಕನ್ಸಿಡರ್ ಮಾಡುವುದಿಲ್ಲ…” ಎಂದು.

ಗೇಲ್ ಆಶ್ರಮ ಬಿಡುವ ಕೆಲವು ತಿಂಗಳ ಹಿಂದೆ ಅವಳು ಹೇಳಿದ ಒಂದು ಮಾತಿನಿಂದ ನಾನು ದಂಗುಬಡಿದುಹೋಗಿದ್ದು ನೆನಪಾಗುತ್ತಿದೆ. ಅಮ್ಮ ಇಲ್ಲದೆ ತಾನೊಬ್ಬಳೇ ಅಮೆರಿಕಾಗೆ ಹೋಗಬೇಕು, ತನ್ನದೇ ಟೂರನ್ನು ಮಾಡಬೇಕು, ತನ್ನದೇ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಅವಳಿಗೆ ಆಸೆಯಾಗಿತ್ತು. ಅವಳ ಈ ಹೇಳಿಕೆಯನ್ನು ಕೇಳಿ ನನಗೆ ಅತಿ ವಿಚಿತ್ರವೆನಿಸಿತು. ಹೀಗೆ ಏನೋ ಪ್ಲಾನ್ ಮಾಡುತ್ತಿದ್ದಳು ಎಂದು ಅಂದೇ ನನಗೆ ಹೊಳೆಯಬೇಕಿತ್ತು. ಅವಳಿಗೆ ಎಲ್ಲರ ಗಮನ ತನ್ನ ಮೇಲೆ ಇರಬೇಕು, ಎಲ್ಲರೂ ತನ್ನನ್ನೇ ಮುಖ್ಯವಾಗಿಸಬೇಕು ಎಂಬ ಅವಳ ತೀರದ ಬಯಕೆ ಅತಿಯಾಗಿರಬೇಕು; ಅದೇ ಅವಳ ಹೃದಯವನ್ನು ಮನಸ್ಸನ್ನೂ ಒಂದು “ವೈರಸ್ ನ” ಹಾಗೆ ಹರಡಿರಬೇಕು. ಅವಳಿಗೆ ಜೀವನದಲ್ಲಿ ಬೇಕಿದ್ದುದು ಜನರು ತನ್ನನ್ನು ಮಾತ್ರ ಶ್ಲಾಘಿಸಬೇಕು, ತನ್ನನ್ನು ಮಾತ್ರ ಗೌರವಿಸಬೇಕು, ತನ್ನನ್ನು ಮಾತ್ರ ಪ್ರೀತಿಸಬೇಕು ಎಂಬುದು ಈಗ ಸ್ಪಷ್ಟವಾಗುತ್ತಿದೆ.

ತಾನು ಆಶ್ರಮ ಬಿಡುವುದರಿಂದ ಆಶ್ರಮಕ್ಕೆ ದೊಡ್ದ ಆಘಾತವಾಗುತ್ತದೆ ಎಂದು ಗೇಲ್ ಆಲೋಚಿಸಿರಬೇಕು. ತಾನು ಎಂದರೆ ಯಾರು? ಗೇಲ್ ಟ್ರೆಡ್ವೆಲ್ ಅಲ್ಲವೆ? ಆದರೆ ಅದು ಹಾಗಾಗಲಿಲ್ಲ. ಜನ ಅವಳು ಹೋದದನ್ನು ಒಪ್ಪಿಕೊಂಡರು. ಬಹುಬೇಗ ನಾವೆಲ್ಲರೂ ಅವಳನ್ನು ಮರೆತುಬಿಟ್ಟೆವೂ ಸಹ. ಯಾಕೆ?… ಯಾಕೆಂದರೆ ನಾವು ಆಶ್ರಮದಲ್ಲಿ ಇದ್ದಿದ್ದು ಅಮ್ಮನಿಗಾಗಿ. ಗೇಲ್ ಳ ದುರ್ಗುಣಗಳನ್ನೆಲ್ಲಾ ಕವಿಯುವಷ್ಟು ಅಮ್ಮನ ಪ್ರೇಮಪ್ರಕಾಶ ಬೆಳಗುತ್ತಿತ್ತು. ಅಮ್ಮನ ಕರುಣೆಯ ಉದಾಹರಣೆಯಿಂದ ಕಲಿಯಲೆಂದೇ ನಾವೆಲ್ಲಾ ಅಲ್ಲಿ ಇದ್ದಿದ್ದು. ಎಲ್ಲರ ಗಮನವನ್ನು ಪಡೆಯುವ ಆಸೆ ಇದ್ದ ಗೇಲ್ ಗೆ ಇಷ್ಟು ಬೇಗ ನಾವೆಲ್ಲಾ ಅವಳನ್ನು ಮರೆತುಬಿಟ್ಟಿರುವುದು ಹೇಗನಿಸಿರಬೇಕು ಎಂದು ನಾನು ಊಹಿಸಬಲ್ಲೆ. ಇತರರ ಮನಸ್ಸುಗಳನ್ನು ಅಮ್ಮನಿಂದ ವಿಮುಖವಾಗಿಸಬೇಕೆಂಬ ಅವಳ ಯೋಜನೆಯು ವಿಫಲವಾಗಿ, ಹೀನವಾಗಿ ಸೋತಿತು… ಸೋಲನ್ನು ಒಪ್ಪಿಕೊಂಡು ತನ್ನ ಜೀವನವನ್ನು ಮುನ್ನಡೆಸಿಕೊಂಡು ಹೋಗುವ ಬದಲು ಅವಳು, “ತನ್ನ ದನಿ ಮತ್ತೆ ಕೇಳುವಂತಾಗಲು ಏನು ಮಾಡಬೇಕು, ಜನರ ಗಮನ ನನ್ನೆಡೆಗೆ ತಿರುಗಬೇಕು, ಜನ ನನ್ನನ್ನು ನೆನಪಿಸಿಕೊಳ್ಳಬೇಕು ಎಂದರೆ ಏನು ಮಾಡಬೇಕು?” ಎಂದು ಕುತಂತ್ರ ಮಾಡತೊಡಗಿರಬೇಕು.

“ರೋಲಿಂಗ್ ಸ್ಟೋನ್” ನಲ್ಲಿ ಗೇಲ್ ನೀಡಿರುವ ಸಂದರ್ಶನ ಓದುವಾಗ ಸತ್ಯವನ್ನು ಅವಳು ತಿರುಚುವ ರೀತಿ ಕಂಡು ನನಗೆ ಆಘಾತವಾಯಿತು. ಆಶ್ರಮ ಬಿಟ್ಟುಹೋಗುವ ವರ್ಣನೆಯಲ್ಲಿ ಅವಳು, “ನಾನು ಹೋಗಿ ಇರಬೇಕಾದ ಮನೆ ಖಾಲಿಯಾಗುವ ಕ್ಷಣದವರೆಗೆ ಕಾದೆ. ಆದಕೂಡಲೆ ಕಾರಿನ ಬ್ಯಾಕ್ ಸೀಟಿನ ಕೆಳಗೆ ಒಂದು ಬ್ಲಾಂಕೆಟ್ ನ ಮರೆಯಲ್ಲಿ ಕೂತೆ ಅಲ್ಲಿಗೆ ನಾನು ಹೋದೆ,” ಎಂದು ಬರೆಯುತ್ತಾಳೆ. ಅವಳು ಕಾರಿನಲ್ಲಿ ನೆಟ್ಟಗೆ ಕುಳಿತೇ ಹೋಗಿದ್ದರೂ ನೋಡಿದವರು ಯಾರೂ ಏನೂ ಯೋಚಿಸುತ್ತಿರಲಿಲ್ಲ. ಆದರೆ ಅವಳು ತನ್ನ ಮನಸಿನಲ್ಲಿ ಯಾವುದೋ ಜೇಮ್ಸ್ ಬಾಂಡ್ ಚಿತ್ರದ ಯಾವುದೋ ಒಂದು ಪಾತ್ರವನ್ನು ಅಭಿನಯಿಸುತ್ತಿದ್ದಳು! ಅವಳ ಪ್ಯಾರನೋಯ ಹೆಚ್ಚಿತ್ತು.

ಗೇಲ್ ಳ ಪುಸ್ತಕ ಓದಿದ ಮೇಲೆ, ಇಷ್ಟು ವರ್ಷಗಳ ಕಾಲವೂ ಅವಳ ಭ್ರಮೆಗಳೆಲ್ಲಾ ಹೇಗೆ ಬೆಳೆದುಕೊಂಡುಬಂದಿವೆ ಎಂದು ಕಂಡು ನನಗೆ ಆಶ್ಚರ್ಯವಾಗುತ್ತಿದೆ. ಹದಿನಾಲ್ಕು ವರ್ಷ ತಾನು ಹೇಳಬೇಕಾದ್ದನ್ನು ಯಾರೂ ಕೇಳದಿದ್ದರೆ, ಹದಿನಾಲ್ಕು ವರ್ಷಗಳ ಕಾಲ ಕೇಳುವವರೇ ಇಲ್ಲದಿದ್ದರೆ, ವ್ಯಕ್ತಿಯು ಆಗ ಬಾಯಿಗೆ ಬಂದಹಾಗೆ ಅನ್ನತೊಡಗುತ್ತಾನೆ, ಮನಸ್ಸಿಗೆ ಬಂದಿದ್ದನ್ನು ಮಾಡತೊಡಗುತ್ತಾನೆ. ತಮ್ಮ ಜೀವನಕ್ಕೆ ಅರ್ಥವಿಲ್ಲವಾಯಿತು ಎಂದು ಒಪ್ಪಿಕೊಳ್ಳಲು ಅವರಿಂದಾಗುವುದಿಲ್ಲ.

ಗೇಲ್ ಈಗ ಮಾಡುತ್ತಿರುವ ಆರೋಪಗಳನ್ನು ನೋಡಿದರೆ ಎಷ್ಟು ಅಸಂಬದ್ಧವೆಂದು ತೋರುತ್ತಿದೆ ಎಂದರೆ ಅವಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದೇ ತಿಳಿಯುತ್ತಿಲ್ಲ. ತನ್ನನ್ನು ಎಷ್ಟು ಹಾಸ್ಯಾಸ್ಪದವಾಗಿಸಿಕೊಳ್ಳುತ್ತಿದ್ದಾಳೆ ಎಂದು ನೋಡಿ ನನ್ನ ಮನಸ್ಸಿನ ಒಂದು ಭಾಗಕ್ಕೆ ನಗುಬರುತ್ತಿದೆ; ಇನ್ನೊಂದು ಭಾಗ, ಪವಿತ್ರವಾದ ಒಂದೊಂದನ್ನು ಕೈಗೆತ್ತಿಕೊಂಡು, ಒಂದಿಷ್ಟೂ ಹಿಂಜರಿಕೆಯಿಲ್ಲದೆ ಅವಳು ಅದರ ಮೇಲೆ ಉಗುಳುವುದನ್ನು ನೋಡಿದಾಗ ನನಗೆ ಅಳುಬರುತ್ತದೆ.

ಅವಳು ನನ್ನಲ್ಲಿ ಭಯ ಮತ್ತು ಸಂಶಯಗಳನ್ನು ಬಿತ್ತಲು ಪ್ರಯತ್ನಿಸಿದ್ದು ನೆನೆದರೆ ಗೇಲ್ ಟ್ರೆಡ್ವೆಲ್ ಳನ್ನು ದ್ವೇಷಮಾಡದೆ ಇರುವುದು ನನಗೆ ಬಹಳ ಕಷ್ಟವಾಗುತ್ತಿದೆ. ನನ್ನ ಜೀವನವನ್ನು ಒಂದು ಅಣಕವಾಗಿಸಲು ಪ್ರಯತ್ನಿಸುತ್ತಿರುವುದು ನೋಡಿದರೆ ಅವಳನ್ನು ದ್ವೇಷಮಾಡದೆ ಇರಲು ಕಷ್ಟವಾಗುತ್ತದೆ. ನಿಷ್ಕಳಂಕತೆಯಿಂದ ಹಾಗು ಸೌಂದರ್ಯದಿಂದ ಕೂಡಿರುವ, ಅಮ್ಮ ಕಲಿಸಿರುವ ಭಗವಂತನನ್ನು ಪ್ರೇಮಿಸುವ ಪಥವನ್ನು ಅವಳು ಹಾಳುಮಾಡುತ್ತಿರುವುದನ್ನು ಕಂಡಾಗ ಅವಳನ್ನು ದ್ವೇಷಮಾಡದೆ ಇರುವುದು ಕಷ್ಟವಾಗುತ್ತದೆ. ಆದರೆ ಅಂತಿಮವಾಗಿ ಅವಳನ್ನು ದ್ವೇಷಿಸಿ ನನಗೆ -ಅಥವಾ ಅವಳಿಗಾದರೂ- ಆಗುವ ಲಾಭವೇನು?

ಸಮಾಜದಲ್ಲಿ ಹಿರಿಯರೆನಿಸಿಕೊಂಡ ಯಾವ ವ್ಯಕ್ತಿಯೂ ವಿಮರ್ಶೆಯಿಂದಾಗಲೀ, ವಾಕ್ ಶೋಷಣೆಯಿಂದಾಗಲಿ, ಆಕ್ರಮಣದಿಂದಾಗಲಿ ಹೊರತಾಗಿಲ್ಲ ಎಂದು ತೋರುತ್ತದೆ. ಅದು ಇದ್ದಿದ್ದೇ. ಆದರೆ ಅಮ್ಮನ ವಿಷಯದಲ್ಲಿ ಅತ್ಯಂತ ಅಮೋಘವಾದುದು ಏನೆಂದರೆ, ಅಮ್ಮನ ಪಾಲಿಗೆ ಏನು ಬಂದರೂ ಸರಿ, ಅಮ್ಮ ಮಾತ್ರ ಪ್ರೇಮ ನೀಡುತ್ತಾ, ಎಲ್ಲರನ್ನೂ ಸ್ವೀಕರಿಸುತ್ತಾ, ಕ್ಷಮಿಸುತ್ತಾ ಸಾಗುತ್ತಾ ಇರುತ್ತಾರೆ. ಅದರ ಮೌಲ್ಯವನ್ನು ನಾವು ಅರಿತುಕೊಳ್ಳಲಿ ಬಿಡಲಿ- ಅದು ನಮಗೆ ಸೇರಿದ್ದು.

– ಕ್ರಿಸ್ಟೀ

Source:Kristy’s Memories of Gayatri

ಬಹುಕಾಲದಿಂದ ಭಕ್ತೆಯಾಗಿರುವ ಆಶ್ರಮವಾಸಿಯಾದ ಮೀರಾ ಅವರು ಬರೆದ ಪತ್ರ

ಅಮೃತಪುರಿ ಆಶ್ರಮದಲ್ಲಿ ನಾನು ಸುಮಾರು ಇಪ್ಪತ್ತು ವರ್ಷಗಳು ವಾಸಿಸಿದ್ದೆ; ಈಗ ಸಂದರ್ಭವು ನನ್ನನ್ನು ಸೌತ್ ಆಫ್ರಿಕಾಗೆ ತಂದುಬಿಟ್ಟಿದೆ. ಗೇಲ್ ನೊಂದಿಗೆ ನನಗೆ ಬಹಳವಾಗಿ ಒಡನಾಟವಿತ್ತು. ೧೯೮೯ ರಲ್ಲಿ ಆಶ್ರಮವಾಸಿಯಾದ ನಾನು, ಅವಳು ಆಶ್ರಮವನ್ನು ಬಿಟ್ಟುಹೋಗುವವರೆಗೂ, ಹೆಚ್ಚೂ ಕಮ್ಮಿ ದಿನವೂ ಅವಳನ್ನು ನೋಡುವುದಷ್ಟೇ ಅಲ್ಲದೆ ಅವಳ ಜೊತೆಗೆ ಪರಸ್ಪರ ವರ್ತಿಸಬೇಕಾಗುತ್ತಿತ್ತು.

ಗೇಲ್ ಅಮ್ಮನನ್ನು ಬಿಟ್ಟುಹೋದಾಗ ಬಹುತೇಕ ಜನರಿಗೆ ತುಂಬಾ ಆಘಾತವಾಯಿತು, ಆದರೆ ನನಗೆ ಒಂದಿಷ್ಟೂ ಆಶ್ಚರ್ಯವಾಗಲಿಲ್ಲ, ಕಾರಣ ಅವಳು ಹೋಗಬೇಕಾಗಿ ಬರುವವರೆಗೆ ನಡೆದ ಎಲ್ಲಾ ಘಟನೆಗಳನ್ನೂ ನಾನು ಸಾಕ್ಷಿಯಾಗಿ ನಿಕಟದಿಂದ ನೋಡಿದ್ದೆ. ಗೇಲ್ ಬಿಟ್ಟುಹೋದ ಅದೇ ಸಮಯಕ್ಕೇ ಹೆಚ್ಚೂ ಕಮ್ಮಿ ಅವಳ “ಅಂತರಂಗದ ಗೆಳತಿಯರಾದ” ಕೆಲವು ಹೆಂಗಸರ ಪುಟ್ಟ ಗುಂಪ್ಪು ಆಶ್ರಮವನ್ನು ಬಿಟ್ಟು ಹೋದದ್ದನ್ನು ಕಂಡು ನನಗೆ ಆಶ್ಚರ್ಯವೇನೂ ಆಗಲಿಲ್ಲ. ಏಕೆಂದರೆ, ಗೇಲ್ ಅವರನ್ನೆಲ್ಲಾ ಹೇಗೆ ಅಮ್ಮನ ವಿರುದ್ಧ ತಿರುಗುವಂತೆ ತಯಾರುಮಾಡಿದ್ದಳು ಎಂದೂ ನಾನು ನೋಡಿದ್ದೆ.

ನಾನು ಆಶ್ರಮಕ್ಕೆ ಬಂದ ಹೊಸತರಲ್ಲಿ ಗೇಲ್ ಬೇರೆಯೇ ವ್ಯಕ್ತಿಯಾಗಿದ್ದಳು. ಸ್ವಭಾವಕ್ಕೆ ಕೊಂಚ ಮೃದುವಾದ ಮುಖವೂ ಇತ್ತು; ಕೆಲವೊಮ್ಮೆ ಕರುಣೆ, ಕಳಕಳಿ ಎನ್ನುವುದು ಅವಳಿಲ್ಲಿ ಕಾಣುತ್ತಿತ್ತು. ಅವಳು ಅಮ್ಮನಿಗೆ ಹತ್ತಿರವಾಗಿರುತ್ತಿದ್ದ ಕಾರಣ ನನಗೆ ಅವಳ ಪ್ರತಿ ತುಂಬಾ ಗೌರವವಿತ್ತು. ಅವಳು ಹಿರಿಯ ಸಂನ್ಯಾಸಿನಿ ಆಗಿದ್ದಳು, ನಾನು ಅವಳನ್ನು ನನ್ನ ಅಕ್ಕ ಎಂದೇ ಭಾವಿಸಿದ್ದೆ. ಆದರೆ ಬಹುಬೇಗ ಅವಳು ಪೂರ್ಣವಾಗಿ ಸ್ವಾರ್ಥಪರಾಯಣೆಯಾಗಿರುವುದನ್ನು ಗಮನಿಸಿದೆ. ತನ್ನದೇಯಾದ-ಗೇಲ್ ಪ್ರಪಂಚದಲ್ಲಿ ಎಲ್ಲವೂ ಅವಳನ್ನು ಕೇಂದ್ರವಾಗಿಸಿಕೊಂಡು, ಅವಳ ಸುತ್ತ ತಿರುಗುತ್ತಿದ್ದುವು. ಅವಳಿಗೆ ಇಷ್ಟವಿಲ್ಲದ್ದು ಹೇಳಿದವರ ಅಥವಾ ಅವಳು ಹೇಳಿದ್ದನ್ನು ಒಪ್ಪದವರ ಮೇಲೆ ಅವಳು ಆಶ್ಚರ್ಯ ಹುಟ್ಟಿಸುವಷ್ಟು ಕ್ರೂರತೆ ಕಾರುತ್ತಿದ್ದಳು. ಮಾತ್ರವಲ್ಲ, ತನ್ನ ಖುಷಿಗಾಗಿ ಸಹ ಅವಳು ಜನರ ಮೇಲೆ ವಿನಾಕಾರಣ ಕ್ರೂರತೆ ಕಾರುತ್ತಿದ್ದಳು. ಎಲ್ಲರನ್ನೂ ತುಂಬಾ ಕಂಟ್ರೋಲ್ ಮಾಡುತ್ತಿದ್ದಳು. ತನಗೆ ಸಂಬಂಧಿಸಿಲ್ಲದಿದ್ದರೂ ಹಾಗೇ ಯಾರದೇ ವಿಷಯದಲ್ಲಿ ತಲೆಹಾಕಿ, ಅವರ ಮೇಲೆರಗಿ, ಆಶ್ರಮದಲ್ಲಿ ಅವರ ಜೀವನವನ್ನೇ ದುಃಖಮಯವಾಗಿಸುತ್ತಿದ್ದಳು. ಅವಳಿರುವಲ್ಲಿ ನಾವು ತುಂಬಾ ಹುಷಾರಾಗಿರಬೇಕಾಗುತ್ತಿತ್ತು; ಹೆಜ್ಜೆ ಸಪ್ಪಳ ಕೇಳಿಸದಂತೆ ನಡೆಯಬೇಕಿತ್ತು. ಅವಳ ಕ್ರೂರತನಕ್ಕೆ, ಅವಳ ಕೆಟ್ಟ ಬೈಗುಳಕ್ಕೆ, ಮತ್ತೆ ಅವಳ ಅಧಿಕಾರ ದುರುಪಯೋಗಕ್ಕೆ ನಾನು ಅನೇಕ ಸಲ ಗುರಿಯಾಗಿದ್ದೇನೆ.

ಒಂದು ದಿನ ನಾನು ನಾಯಿಯೋ ಏನೋ ಎನ್ನುವಂತೆ ನನ್ನನ್ನು ಬೈಯ್ಯುತ್ತಿದ್ದಳು; ಅವಳ ಬಾಯಿಯಿಂದ ನುಡಿಯಬಾರದ ನುಡಿಗಳು ಹೊರಬರುತ್ತಿದ್ದವು. ಕಾರಣ ಎಲ್ಲೋ ನಾನು ಏನನ್ನೋ ತಪ್ಪಾಗಿ ತಿಳಿದಿದ್ದೆ. ನಾನು “ಹಾಗೆ ನನ್ನೊಂದಿಗೆ ಮಾತಾಡಬೇಡ” ಎಂದೆ. ಅದೇ ಮೊದಲ ಸಲ ನಾನು ಅವಳೆದುರಿಗೆ ಧೈರ್ಯಮಾಡಿ ಎದ್ದುನಿಂತದ್ದು. ಓ, ಅದಕ್ಕಾಗಿ ನಾನು ಮುಂದೆ ಅದೆಷ್ಟು ಪಾಡುಪಡಬೇಕಾಯಿತು! ನನ್ನನ್ನು ಹೊಡೆಯಲು ಶುರುಮಾಡಿದಳು. ಆಮೇಲೆ, ಅವಳ ಮಾತನ್ನು ಕೇಳಿಸಿಕೊಳ್ಳುವವರಿಗೆಲ್ಲಾ ನಾನೆಷ್ಟು ಕೆಟ್ಟದಾಗಿ ಅವಳನ್ನು ನಡೆಸಿಕೊಂಡೆ ಎಂದು ಹೇಳತೊಡಗಿದಳು. ಅಧಿಕಾರವನ್ನು ಬಳಸಿಕೊಂಡು ಕೆಲವಾರು ವಾರ ಅಮ್ಮನ ಕೋಣೆಯ ಒಳಗೆ ಮತ್ತು ಸುತ್ತಮುತ್ತ ನಾನು ಮಾಡಬೇಕಿದ್ದ ಸೇವೆಯನ್ನು ನಾನು ಮಾಡಲಾಗದಂತೆ ವ್ಯವಸ್ಥೆ ಮಾಡಿದಳು. ಅದಾದ ಮೇಲೆ ಸುಮಾರು ತಿಂಗಳುಗಳ ಕಾಲ ಆಗಾಗ ನಾನು ಅವಳನ್ನು ಕೆಟ್ಟದಾಗಿ ನಡೆಸಿಕೊಂಡ ದಿನವನ್ನು ನೆನಪು ಮಾಡುತ್ತಿದ್ದಳು!

ಒಂದು ಸಲ ನನಗೆ ವಾಂತಿ, ಭೇದಿ; ತುಂಬಾ ಬಳಲಿದ್ದೆ. ಅವಳ ಮೂಡ್ ಸರಿಯಿರಲಿಲ್ಲ. ಅವಳು ನನ್ನ ಮೇಲೆ ಕೂಗಾಡುವಾಗ ನನಗೆ ಆರಾಮಿಲ್ಲ ಎಂದು ಅವಳ ಮಾತಿನ ಮಧ್ಯೆ ವಿವರಿಸಲು ಹೋಗಲು, ಅವಳು ಇನ್ನಷ್ಟು ಕೋಪದಿಂದ ಹುಚ್ಚಾಗಿ “ನಿನಗೆ ಹುಷಾರಿಲ್ಲದಿದ್ದರೆ – “*&%#$@” ಅದರಿಂದ ನನಗೇನೂ ಆಗಬೇಕಿಲ್ಲ” ಎಂದು ಒಂದು ನೀಚ ಪದವನ್ನು ಬಳಸಿ ನನಗೆ ಬೈಯ್ದಳು!

ಗೇಲ್ ನನ್ನನ್ನು ಎಷ್ಟೋ ಸಲ ಹೊಡೆದಿದ್ದಾಳೆ, ನನ್ನ ಕೂದಲನ್ನು ಹಿಡಿದು ಎಳೆದಿದ್ದಾಳೆ. ಹಾಗಿದ್ದೂ ಅವಳು ಲಕ್ಷ್ಮಿಯನ್ನು ನಡೆಸಿಕೊಳ್ಳುತ್ತಿದ್ದ ರೀತಿಗೆ ಹೋಲಿಸಿದರೆ ನನ್ನದು ಅಷ್ಟೇನೂ ಅಲ್ಲ ಎನ್ನಬೇಕು. ನನ್ನ ಮುಂದೆಯೇ ಎಷ್ಟೋ ಸಲ ಅವಳು ಲಕ್ಷ್ಮಿಯನ್ನು ಚೆನ್ನಾಗಿ ಹೊಡೆದಿದ್ದಾಳೆ, ಕೂದಲು ಕಿತ್ತು ಎಳೆದಿದ್ದಾಳೆ, ಅವಳ ಮುಖಕ್ಕೆ ನೇರವಾಗಿ ಉಗಿದಿದ್ದಾಳೆ, ಮತ್ತೆ ಬಲವಾಗಿ ಒದ್ದೂ ಇದ್ದಾಳೆ. ಇದನ್ನು ಸಾಕ್ಷಿಯಾಗಿ ನೋಡಿರುವುದು ನಾನು ಮಾತ್ರವಲ್ಲ, ಇತರರೂ ಇದ್ದಾರೆ. ಒಮ್ಮೆ ಅವಳು ಸುಡುತ್ತಿದ್ದ ಐರನ್ ಬಾಕ್ಸನ್ನು ಎತ್ತಿ ಸಿಟ್ಟಿನಿಂದ ಲಕ್ಷ್ಮಿಯ ಮೇಲೆ ಎಸೆದಾಗ ನಾನು ಅಲ್ಲಿದ್ದೆ. ಒಮ್ಮೆ ಇಂಥ ಒಂದು ಆಕ್ರಮಣ ಆದ ಮೇಲೆ ಲಕ್ಷ್ಮಿಯ ಕತ್ತಿನ ಮೇಲೆ ರಕ್ತ ಇದ್ದುದನ್ನು ನಾನೇ ನೋಡಿದ್ದೇನೆ. ಇದು ಯಾವುದೂ ಅಮ್ಮನ ಎದುರಿಗೆ ಆಗಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

“ಗೇಲ್ ಆ ದಿನ ಅಮ್ಮನಿಗೆ ಏನು ಮಾಡಿದಳೆಂದು ನಾನು ಯಾರಿಗೂ ಹೇಳಲಿಲ್ಲ, ಯಾಕೆಂದರೆ ಅಮ್ಮ ತಮ್ಮ ಅಪಾರ ಕರುಣೆಯಿಂದಾಗಿ ಅಲ್ಲಿ ಏನು ನಡೆಯಿತು ಎಂದು ಗೊತ್ತಾಗಿದ್ದ ನಮ್ಮೆಲ್ಲರಿಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದೂ, ಗೇಲ್ ಳನ್ನು ಏನೂ ಕೇಳಬೇಡಿ ಎಂದೂ ಹೇಳಿದ್ದರು. ಅಮ್ಮ ಗೇಲ್ ಗಾಗಿ “ಪ್ರಾರ್ಥನೆ ಮಾಡಿ” ಎಂದು ಮಾತ್ರ ಹೇಳಿದರು.”

ಲಕ್ಷ್ಮಿಯಿಂದ ಒಂದು ಸಣ್ಣ ತಪ್ಪು ಆದರೂ, ಕೆಲವು ದಿನ ಲಕ್ಷ್ಮಿ ಒಂದು ಮಾತು ಆಡಿದರೂ ಅಥವಾ ಒಮ್ಮೆ ನಕ್ಕರೂ ಸಾಕು, ಅವಳ ಮೇಲೆ ಆಕ್ರಮಣವಾಗುತ್ತಿತ್ತು. ನಾನು ಮತ್ತು ಲಕ್ಷ್ಮಿ ಅಕ್ಕತಂಗಿಯರ ಹಾಗಿದ್ದೆವು; ಆದ್ದರಿಂದ ಗೇಲ್ ನಮ್ಮನ್ನು ಮಾತಾಡಲು ಬಿಡುತ್ತಲೇ ಇರಲಿಲ್ಲ. ನಮಗೆ ಎಷ್ಟು ಭಯ ಎಂದರೆ ಒಬ್ಬರಿಗೊಬ್ಬರು ಏನಾದರೂ ಹೇಳಿಕೊಳ್ಳುವುದಿದ್ದರೆ ನಾವು ಪಿಸುಮಾತಿನಲ್ಲಿ ಹೇಳಿಕೊಳ್ಳುತ್ತಿದ್ದೆವು. ಕೇಳಿಸಿಬಿಟ್ಟರೆ ಗೇಲ್ ಎಲ್ಲಿ ಬಂದು ನಮ್ಮ ಮೇಲೆ ಕೂಗಾಡುತ್ತಾಳೋ ಎಂದು ಹೆದರಿಕೆ.

ಸ್ವೀಡನ್ನಿನಲ್ಲಿ ಏನಾಯಿತು ಎಂದು ಲಕ್ಷ್ಮಿ ಬರೆದಿರುವುದನ್ನು ಈಗ ತಾನೆ ಓದಿದೆ. ದೋಣಿಯಲ್ಲಿ ಅಮ್ಮನನ್ನು ಕೂರಿಸಿಕೊಂಡು ಹೊರಟ ಗೇಲ್ ದೋಣಿ ಮೊಗುಚುವಂತೆ ಮಾಡಿದಳು. ಅದನ್ನು ನಾನೂ ನೋಡಿದೆ, ಯಾಕೆಂದರೆ ನಾನೂ ಅಲ್ಲೇ ಇದ್ದೆ. ಅಮ್ಮ ಬೇಡವೆಂದು ಹೇಳುತ್ತಿದ್ದುದನ್ನು ಗೇಲ್ ಪೂರ್ತಿ ಅಲಕ್ಷ್ಯಮಾಡಿ, ದೋಣಿ ತಲೆಕೆಳಗಾಗುವಂತೆ ಅವಳೇ ಮಾಡಿದಳು. ಅಮ್ಮ ಬೋಟಿನ ಅಡಿಯಲ್ಲಿ ಸಿಕಿದ್ದರು; ಹಾಗಾಗಿ ಮೇಲೆ ಬರಲು ಸಾಕಷ್ಟು ಸಮಯವನ್ನೇ ತೆಗೆದುಕೊಂಡರು. ಮುಳುಗಿದಾಗ ಸೀರೆ ಅಮ್ಮನ ತಲೆಯನ್ನು ಮುಸುಕಿಬಿಟ್ಟಿತ್ತಂತೆ, ಹಾಗಾಗಿ ಮೇಲೆ ಬರಲು ಅಮ್ಮನಿಗೆ ಸ್ವಲ್ಪಹೊತ್ತು ಹಿಡಿದಿತ್ತು. ಗೇಲ್ ಆ ದಿನ ಅಮ್ಮನಿಗೆ ಏನು ಮಾಡಿದಳೆಂದು ನಾನು ಯಾರಿಗೂ ಹೇಳಲಿಲ್ಲ, ಯಾಕೆಂದರೆ ಅಮ್ಮ ತಮ್ಮ ಅಪಾರ ಕರುಣೆಯಿಂದಾಗಿ ಅಲ್ಲಿ ಏನು ನಡೆಯಿತು ಎಂದು ಗೊತ್ತಾಗಿದ್ದ ನಮ್ಮೆಲ್ಲರಿಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದೂ, ಗೇಲ್ ಳನ್ನು ಏನೂ ಕೇಳಬೇಡಿ ಎಂದೂ ಹೇಳಿದ್ದರು. ಅಮ್ಮ ಗೇಲ್ ಗಾಗಿ “ಪ್ರಾರ್ಥನೆ ಮಾಡಿ” ಎಂದು ಮಾತ್ರ ಹೇಳಿದರು.

ಆಶ್ರಮವು ವಿಶಾಲವಾಗುತ್ತಾ ಹೆಚ್ಚು ಹೆಚ್ಚು ಜನ ಇಲ್ಲೇ ಇರಲು ಬರತೊಡಗಿದರು; ಗೇಲ್ ಗೆ ಅಧಿಕಾರ ನೆತ್ತಿಗೆ ಹತ್ತುತ್ತಿದ್ದುದನು ನಾನು ನೋಡುತ್ತಿದ್ದೆ. ಅವಳಿಗೆ ಸಂನ್ಯಾಸ ದೀಕ್ಷೆ ದೊರೆತ ಮೇಲೆ, ಜನ ಅವಳ ಪಾದ ಮುಟ್ಟುತ್ತಿದ್ದರು, ಹಿಂದಿಗಿಂತಲೂ ಹೆಚ್ಚು ಗೌರವ, ಆದರಗಳನ್ನು ತೋರುತ್ತಿದ್ದರು, ತಾನು ನಿಜವಾಗಿಯೂ ತುಂಬಾ ಮಹಾನ್ ವ್ಯಕ್ತಿ ಎಂದು ಗೇಲ್ ನಂಬಿದಳು. ಅವಳಿಗೆ ಅವಳ ಕೆಲವು “ಪ್ರೀತಿ”ಯವರಿದ್ದರು; ಅಂತರಂಗದ ಗೆಳತಿಯರು. ತಾವು ಗೇಲ್ ಗೆ ಹತ್ತಿರವಾಗಿರುವ ಕಾರಣ ಹೇಗೋ ಅಮ್ಮನಿಗೂ ಹತ್ತಿರವಾಗಿದ್ದೇವೆ ಎಂದು ತಪ್ಪಾಗಿ ಭಾವಿಸಿದ್ದರು. ಅವರು ಗೇಲ್ ಗೆ ಸೇವೆಮಾಡುತ್ತಿದ್ದರು, ಅವಳು ಬಯಸಿದ್ದನ್ನೆಲ್ಲಾ ಮಾಡುತ್ತಿದ್ದರು, ಅವಳು ಹೇಳಿದ್ದಕ್ಕೆಲ್ಲಾ, ಅದೆಷ್ಟೇ ಅಸಂಬದ್ಧವಾಗಿದ್ದರೂ, ಅದೆಲ್ಲಕ್ಕೂ ಸರಿ ಎಂದು ಗೋಣುಹಾಕುತ್ತಿದ್ದರು. ದಿನಕಳೆದಂತೆ ಗೇಲ್ ನ “ಇನ್ನರ್ ಸರ್ಕಲ್” ನ ಸದಸ್ಯರ (ಅಂತರಂಗದವರ) ಜೀವನಗಳು ಅಮ್ಮನ ಸುತ್ತ ಅಲ್ಲ, ಗೇಲ್ ನ ಸುತ್ತ ತಿರುಗಲು ಶುರುವಾಯಿತು. ಗೇಲ್ ಹುಶಾರಾಗಿ ಅವರನ್ನು ತಯಾರು ಮಾಡುತ್ತಿದ್ದಳು. ಅವರ ಜೀವನಗಳನ್ನೇ ತನ್ನ ಕೈಯ್ಯಲ್ಲಿ ತೆಗೆದುಕೊಂಡಳು. ಕ್ರಮೇಣ ಅಮ್ಮನಿಂದ ಅವರನ್ನು ವಿಮುಖ ಮಾಡಿಸಿಬಿಟ್ಟಳು. ಒಂದು ದಿನ ಒಬ್ಬ ಯುವತಿ ತಲೆಗೆ ಕೈ ಒತ್ತಿಕೊಂಡು ನೆಲದ ಮೇಲೆ ಕೂತಿದ್ದಳು. ನೋಡಿ ಏನಾಯಿತೆಂದು ಕೇಳಿದೆ. ಅವಳು ಅಳತೊಡಗಿದಳು. ಅಳುತ್ತಾ, ಗೇಲ್ ನಿಂದಾಗಿ ತನಗೆ ಅಮ್ಮನಲ್ಲಿ ನಂಬಿಕೆಯೇ ಹೋಗುತ್ತಿದೆ ಎಂದಳು. ಆ ವಿಷಯವನ್ನು ಅಮ್ಮನಿಗೆ ಹೇಳು ಎಂದೆ. ಅವಳು ಹಾಗೆ ಮಾಡಿದಳೋ ಇಲ್ಲವೋ ಗೊತ್ತಿಲ್ಲ. ಆದರೆ ಗೇಲ್ ಹೋದ ಸಮಯದಲ್ಲೇ ಅವಳೂ ಆಶ್ರಮ ಬಿಟ್ಟುಹೋದಳು. ಈ ಯುವತಿಗೆ ಅಮ್ಮನ ಮೇಲೆ ನಿಜವಾದ ಪ್ರೇಮ ಇತ್ತು; ಅದನ್ನು ನಾನು ಅರಿತಿದ್ದ ಕಾರಣ ಅವಳು ಹೋದಳೆಂದು ಕೇಳಿ ನನಗೆ ತುಂಬಾ ದುಃಖವಾಯಿತು. ಗೇಲ್ ಹೀಗೇ ತನ್ನ ಸುತ್ತ ಇದ್ದ ಹೆಣ್ಣುಮಕ್ಕಳ ತೆಲೆ ಕೆಡಿಸಿ ಅವರ ಮನಸ್ಸಿನಲ್ಲಿ ವಿಷ ಬಿತ್ತುತ್ತಿದ್ದಳು. ಗೇಲ್ ಹೋದ ಸಮಯದಲ್ಲೇ ಹೆಚ್ಚೂ ಕಮ್ಮಿ ಅವರೆಲ್ಲರೂ ಅಮ್ಮನನ್ನು ಬಿಟ್ಟುಹೋದರು.

ಕಡೆಯ ಕೆಲವು ವರ್ಷಗಳು ಗೇಲ್ ಒಂದೂ ಕೆಲಸ ಮಾಡುತ್ತಿರಲಿಲ್ಲ. ತನ್ನ ಕೋಣೆಯಲ್ಲೇ ಹೆಚ್ಚಾಗಿ ಇರುತ್ತಿದ್ದಳು; ಅಲ್ಲಿ ಗೆಳತಿಯರೊಂದಿಗೆ ಮಾತಾಡುತ್ತಿದ್ದಳು, ಮಸಾಜ್ ಮಾಡಿಸಿಕೊಂಡಿರುತ್ತಿದ್ದಳು. ಗೇಲ್ ಇರುತ್ತಿದ್ದ ರೂಮು ಮೇಲಿನ ಮಹಡಿಯಾದ್ದರಿಂದ ರೂಮಿನಲ್ಲಿ ತುಂಬಾ ಸೆಖೆಯಿರುತ್ತಿತ್ತು. ಅವಳಿಗೆ ಒಂದು ಎಲೆಕ್ಟ್ರಿಕ್ ಫ್ಯಾನ್ ಇತ್ತು. ಹಾಗಿದ್ದೂ, ಮಧ್ಯಾಹ್ನದ ಹೊತ್ತು ಸೆಖೆ ವಿಪರೀತವಾದಾಗ ಅವಳು ನನಗೆ ಆಜ್ಞಾಪನೆ ಮಾಡುತ್ತಿದ್ದಳು: ತಣ್ಣೀರನ್ನು ಬಕೆಟ್ಟುಗಳಲ್ಲಿ ತೆಗೆದುಕೊಂಡು ಹೋಗಿ, ಏಣಿ ಹತ್ತಿ, ಅವಳ ಕೋಣೆಯ ಮೇಲಿನ ತಾರಸಿಗೆ ಹೋಗಿ, ಆ ತಣ್ಣೀರನ್ನು ತಾರಸಿಯ ಮೇಲೆ, ಮೇಲಿಂದ ಮೇಲೆ ಸುರಿಯಬೇಕಿತ್ತು. ಅವಳ ಕೋಣೆ ತಣ್ಣಗಾಗುವ ವರೆಗೂ! ಅದು ಸುಲಭದ ಕೆಲಸವಾಗಿರಲಿಲ್ಲ. ತುಂಬಾ ದಣಿವಾಗುತ್ತಿತ್ತು. ಸಂನ್ಯಾಸ ಸಂಪ್ರದಾಯದ ಬಗ್ಗೆ ನನಗಿದ್ದ ಗೌರವದ ಕಾರಣ ನಾನು ಎಂದಿಗೂ “ನನ್ನಿಂದಾಗದು” ಎನ್ನಬೇಕು ಎಂದೇ ತೋರಲಿಲ್ಲ.

“ಸಾನ್ ರಮೋನ್ ನಿಂದ ಅವಳ ಪಲಾಯನ ಸಾಹಸದ ನಾಟಕವೂ ನನಗೆ ಗೊಂದಲಮಯವಾಗಿ ಕಾಣುತ್ತದೆ. ಯಾಕೆಂದರೆ ಯಾತ್ರೆಯು ಆರಂಭವಾಗುವುದಕ್ಕೆ ಕೆಲವು ವಾರಗಳ ಹಿಂದೆಯೇ ಗೇಲ್ ನನಗೂ, ಇತರರಿಗೂ ಸ್ಪಷ್ಟವಾಗಿ ಹೇಳಿದ್ದಳು, ಯಾತ್ರೆಯು ಆದಮೇಲೆ ಒಂದು ದೀರ್ಘ ವಿರಾಮ – “ಬ್ರೇಕ್” ತೆಗೆದುಕೊಳಲು ಮತ್ತು ಸಾನ್ ರೋಮನ್ ನಲ್ಲಿ ಕೆಲವು ತಿಂಗಳುಗಳ ಕಾಲ ವಾಸಿಸಲು ಅಮ್ಮ ಅವಳಿಗೆ ಅನುಮತಿ ನೀಡಿದ್ದಾರೆ,ಎಂದು.”

ಗೇಲ್ ಹೋಗುವ ಹಿಂದಿನ ವರ್ಷ ಯಾತ್ರೆಯ ಸಮಯದಲ್ಲಿ ನಾನು ಅಮ್ಮನ ಮನೆಯಲ್ಲಿ ಉಳಿದುಕೊಂಡು, ಗೇಲ್ ಇದ್ದ ರೂಮಿನಲ್ಲೇ ಮಲಗುತ್ತಿದ್ದೆ. ನಾನು ಅನುಭವಿಸಿಯೇ ಇಲ್ಲದ ಸಂದರ್ಭಗಳನ್ನು, ನಾನು ನುಡಿದೇ ಇಲ್ಲದ ನುಡಿಗಳನ್ನು ಗೇಲ್ ತನ್ನ ಪುಸ್ತಕದಲ್ಲಿ ನಾನು ಅನುಭವಿಸಿರುವುದಾಗಿ ಹಾಗು ಹೇಳಿರುವುದಾಗೆ ಸೇರಿಸಿಕೊಂಡಿರುವುದು ತುಂಬಾ ಕುತೂಹಲಕಾರಿಯಾಗಿದೆ. ಅಮೃತಪುರಿಯ ತನ್ನ ಪ್ರತ್ಯೇಕ ಕೋಣೆಯಲ್ಲಿ ಹಾಗು ಯಾತ್ರೆಯ ಸಮಯದಲ್ಲಿ ಗೇಲ್ ನಮ್ಮೆಲ್ಲರಿಗಿಂತಾ ಹೆಚ್ಚು ನಿದ್ರೆಮಾಡುತ್ತಿದ್ದಳು. ಯಾತ್ರೆಯಲ್ಲಿ ಅಮ್ಮ ಬೆಳಗಿನ ದರ್ಶನಕ್ಕೆ ಹೋಗಿ ಆದ ಎಷ್ಟೋ ಸಮಯದ ಮೇಲೆ ಯಾವಾಗಲೋ ಎದ್ದೇಳುತ್ತಿದ್ದಳು. ಗೇಲ್ ಗೆ ಅಡುಗೆಮನೆಯಲ್ಲಿ ನಾನು ಅವಳಿಗೆ ಸಹಾಯ ಮಾಡುತ್ತಿದ್ದ ಕಾರಣ ನನಗೆ ಇದು ನೋಡಿ ಗೊತ್ತಿದೆ. ಅಡುಗೆ ಕೆಲಸದ ಕಾರಣ ಕಾರ್ಯಕ್ರಮಕ್ಕೆ ಹೋಗದೆ ಮನೆಯಲ್ಲೇ ಉಳಿದಿರುತ್ತಿದ್ದೆ. ನಾನು ಕಾಫಿ ಮಾಡಿಕೊಟ್ಟಮೇಲೇ ಅವಳು ಏಳುತ್ತಿದ್ದುದು. ಆಗ ಸಾಧಾರಣ ಸಮಯ ಹತ್ತುಗಂಟೆಗೆ ಹತ್ತಿರವಾಗಿರುತ್ತಿತ್ತು. ಪುಸ್ತಕದಲ್ಲಿ, “ಅಮ್ಮನನ್ನು ಬಿಟ್ಟು ಹೋದಮೇಲೆ ಮೊದಲ ಸಲ ಎಷ್ಟೋ ವರ್ಷಗಳ ತರುವಾಯ ತಾನು ಒಳ್ಳೇ ನಿದ್ರೆ ಮಾಡಿದೆ,” ಎಂದು ಹೇಳಿಕೊಂಡಿದ್ದಾಳೆ; ಇದು ನನಗೆ ತಮಾಷೆಯಾಗಿ ತೋರುತ್ತದೆ.

ಸಾನ್ ರಮೋನ್ ನಿಂದ ಅವಳ ಪಲಾಯನ ಸಾಹಸದ ನಾಟಕವೂ ನನಗೆ ಗೊಂದಲಮಯವಾಗಿ ಕಾಣುತ್ತದೆ. ಯಾಕೆಂದರೆ ಯಾತ್ರೆಯು ಆರಂಭವಾಗುವುದಕ್ಕೆ ಕೆಲವು ವಾರಗಳ ಹಿಂದೆಯೇ ಗೇಲ್ ನನಗೂ, ಇತರರಿಗೂ ಸ್ಪಷ್ಟವಾಗಿ ಹೇಳಿದ್ದಳು, ಯಾತ್ರೆಯು ಆದಮೇಲೆ ಒಂದು ದೀರ್ಘ ವಿರಾಮ – “ಬ್ರೇಕ್” ತೆಗೆದುಕೊಳಲು ಮತ್ತು ಸಾನ್ ರೋಮನ್ ನಲ್ಲಿ ಕೆಲವು ತಿಂಗಳುಗಳ ಕಾಲ ವಾಸಿಸಲು ಅಮ್ಮ ಅವಳಿಗೆ ಅನುಮತಿ ನೀಡಿದ್ದಾರೆ,ಎಂದು. ಹೆಚ್ಚೆಂದರೆ ಮುಂದಿನ ಜನವರಿ ಹೊತ್ತಿಗೆ ತಾನು ತಿರುಗಿ ಬರುವುದಾಗಿಯೂ ಅವಳು ನನಗೆ ಹೇಳಿದಳು. ಈ ವಿಷಯ ನನಗೆ ಚೆನ್ನಾಗಿ ಸ್ಪಷ್ಟಪಡಿಸಲಾಗಿತ್ತು; ಯಾತ್ರೆಯಲ್ಲಿ ಎಷ್ಟೋ ಸಲ ಇದರ ಪ್ರಸ್ತಾಪವೂ ನಮ್ಮಿಬ್ಬರ ಮಾತಿನಲ್ಲಿ ಬಂದಿತ್ತು. ಹಾಗಿದ್ದಾಗ, ಅಮ್ಮ ಅಮೆರಿಕಾದಲ್ಲೇ ಇರುವಾಗಲೇ ಸಾನ್ ರಮೋನ್ ಆಶ್ರಮದಿಂದ ರಾತ್ರಿಯ ಕತ್ತಲಲ್ಲಿ ತಪ್ಪಿಸಿಕೊಂಡು ಹೋಗುವ ಅವಶ್ಯಕತೆಯೇನಿತ್ತು? ಅಮ್ಮನ ಹೆಸರು ಕೆಡಿಸಬೇಕು, ಅಮ್ಮ ಒಂದು ವಿಚಿತ್ರ “ಕಲ್ಟ್” ನ ನಾಯಕಿ ಎಂದು ಬಿಂಬಿಸಬೇಕು ಎನ್ನುವುದಾಗಿತ್ತು ಅವಳ ದುರುದ್ದೇಶ.
ಅಮ್ಮ, ಸ್ವಾಮೀಜಿ ಹಾಗೂ ಅಮೃತಾತ್ಮಾನಂದ ಸ್ವಾಮಿಯವರ ಮೇಲೆ ಗೇಲ್ ಮಾಡಿರುವ ಹಾಸ್ಯಾಸ್ಪದ ಆರೋಪಗಳಿಗೆ ಪ್ರತಿಕ್ರಿಯಿಸಬೇಕು ಎಂದರೂ ಅದು ಅಸಂಗತವೆನಿಸುತ್ತದೆ. ಗೇಲ್ ಬರೆದಿರುವುದನ್ನು ಓದಿದಾಗ, ಅಮ್ಮನ ಬಳಿ ಹೊಸದಾಗಿ ಬಂದವರಿಗೆ ಅಥವಾ ಅಮ್ಮನನ್ನು ನೋಡೇ ಇಲ್ಲದವರಿಗೆ ಗಲಿಬಿಲಿ ಆಗಬಹುದು; ಈ ಕಾರಣದಿಂದ ನಾನಿಲ್ಲಿ ಕೆಲವಾದರು ವಿಷಯಗಳನ್ನು ಹೇಳಬೇಕಾಗಿದೆ. ೧೯೯೧ರಿಂದ ಅಮ್ಮ ಸಂಜೆ ಭಜನೆ ಆದಮೇಲೆ ಅಮ್ಮನೊಂದಿಗೆ ಸಮಯ ಕಳೆಯಲು ಅವಕಾಶಮಾಡಿಕೊಟ್ಟಿದ್ದರು. ಹದಿನೆಂಟು ವರ್ಷಗಳ ಕಾಲ ಸಂಜೆ ಭಜನೆ ಆದ ಮೇಲೆ ಅಮ್ಮನೊಟ್ಟಿಗೆ ಇರುತ್ತಿದ್ದೆ. ಹಲವಾರು ಬಾರಿ ಮರುದಿನ ಮುಂಜಾನೆಯವರೆಗೂ ಅಮ್ಮನ ಜೊತೆ ಇರುತ್ತಿದ್ದೆ. ಅಮ್ಮ ಕುರ್ಚಿಯಲ್ಲಿ ಕುಳಿತು ಜನರೊಂದಿಗೆ ಮಾತಡುತ್ತಿದ್ದಾಗ ನಾನು ಅಮ್ಮನ ಕುರ್ಚಿಯ ಪಕ್ಕದಲ್ಲೇ ಕುಳಿತಿರುತ್ತಿದ್ದೆ. ಅಮ್ಮನ ಕೋಣೆಗೆ ಹೊಂದಿಕೊಂಡು ರಿಸೆಪ್ಷನ್ (ಬಂದವರನ್ನು ಸ್ವೀಕರಿಸಲು) ರೂಮು ಕಟ್ಟಿದ ಮೇಲೆ, ಆಗಲೂ ಅಮ್ಮನ ಜೊತೆ ಸಂಜೆಯ ಸಮಯ ಕಳೆಯುತ್ತಲಿದ್ದೆ. ಅಮ್ಮ, ಸ್ವಾಮೀಜಿ ಅಥವಾ ಅಮೃತಾತ್ಮನಂದ ಸ್ವಾಮೀಜಿ ಅಥವಾ ಇತರ ಯಾವುದೇ ಸ್ವಾಮೀಜಿಗಳು ಇರುವಾಗ ಅಸಂಖ್ಯಾತ ಸಂದರ್ಭಗಳಲ್ಲಿ ನಾನು ಅಮ್ಮನ ಜೊತೆ ಇರುತ್ತಿದ್ದೆ. ಅವರ ಮೇಲ್ ಗೇಲ್ ಆರೋಪಿಸುವ ದುರ್ನಡತೆಯ ಕುರುಹು ಒಮ್ಮೆ ಕೂಡಾ ನನ್ನ ಗಮನಕ್ಕೆ ಬಂದಿಲ್ಲ. ಹತ್ತು ವರ್ಷಗಳಕಾಲ ದಿನಕ್ಕೆ ಎರಡು ಸಲ -ಅಮ್ಮ ಭಜನೆಗೆ ಹೋಗಿದ್ದಾಗ ಮತ್ತು ದರ್ಶನಕ್ಕೆ ಹೋಗಿದ್ದಾಗ- ನಾನು ಅಮ್ಮನ ಕೋಣೆಯನ್ನು ಶುಚಿಮಾಡುತ್ತಿದ್ದೆ. ಅಮ್ಮನ ಹಾಸಿಗೆ ಸರಿಮಾಡುತ್ತಿದ್ದೆ, ಶೀಟ್ ಗಳನ್ನು ಬದಲಿಸುತ್ತಿದ್ದೆ. ಅಮ್ಮ ಹಾಸಿಗೆಯ ಮೇಲೆ ಯಾವಾಗಲಾದರೊಮ್ಮೆ ಕುಳಿತುಕೊಳುತ್ತಿದ್ದರು; ಅಮ್ಮ ಮಲಗುತ್ತಿದ್ದುದು ಯಾವಾಗಲೂ ನೆಲದ ಮೇಲೇಯೇ. ಅದೆಷ್ಟೋ ವರ್ಷ ನಾನು ಯಾತ್ರೆಯ ಸಮಯದಲ್ಲಿ ಅಮ್ಮನ ಬಟ್ಟೆಗಳನ್ನೂ, ಶೀಟುಗಳನ್ನು, ಟವೆಲ್ಲುಗಳನ್ನೂ ತೊಳೆಯುತ್ತಿದ್ದೆ. ಅಸಂಬದ್ಧವಾದ ಏನೂ ನನಗೆ ಕಿಂಚಿತ್ತೂ ಕಂಡುಬರಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಲೇ ಬೇಕಿಲ್ಲ.

“ಅಮ್ಮ ಮತ್ತು ಸ್ವಾಮಿಗಳ ವಿರುದ್ಧದ ಅವಳ ಆರೋಪಗಳು ಎಷ್ಟು ಅಸಂಬದ್ಧವಾಗಿವೆ ಎಂದರೆ ಗೇಲ್ ಅಂಥವಳು ಇಷ್ಟು ಕೀಳುಮಟ್ಟಕ್ಕೆ ಇಳಿಯಬಲ್ಲಳಾ ಎನ್ನುವುದನ್ನು ನಂಬುವುದೇ ಕಷ್ಟವಾಗುತ್ತಿದೆ. ಹೀಗಿದ್ದೂ, ಅಮ್ಮ ಗೇಲ್ ಳನ್ನು ನಾವು ಯಾರೂ ಅರ್ಥಮಾಡಿಕೊಳ್ಳಲಾಗದಷ್ಟು ಈಗಲೂ ಪ್ರೀತಿಸುತ್ತಿರುತ್ತಾರೆ ಎಂದು ನನಗೆ ಗೊತ್ತು. ಗೇಲ್ ಈ ವಾಸ್ತವತೆಯನ್ನು ಅರಿತುಕೊಳ್ಳುವ ದಿನ ಬರಲಿ!”

ಎಲ್ಲರಿಗಿಂತಾ ಹೆಚ್ಚಾಗಿ ಅಮೃತಾತ್ಮನಂದ ಸ್ವಾಮಿಯವರು ಗೇಲ್ ಳ ದ್ವೇಷಕ್ಕೆ ಗುರಿಯಾಗಿದ್ದರು. ಯಾವುದೋ ಅವ್ಯಕ್ತ ಕಾರಣದಿಂದಾಗಿ ತನ್ನ ಮನಸ್ಸಿನ ಅಂಧಕಾರವನ್ನು ಹೆಚ್ಚಾಗಿ ಅವರ ಮೇಲೆ ಹೊರಿಸುತ್ತಿದ್ದಳು. ಅವರು ಯಾವಾಗಲೂ ಸ್ನೇಹಪರರಾದ ಕರುಣೆಯುಳ್ಳ ಸ್ವಾಮಿಯಾಗಿಯೇ ನನಗೆ ಗೊತ್ತಿರುವುದು; ಆದರೆ ಅವಳ ದೃಷ್ಟಿಯಲ್ಲಿ ಅವರು ಮಾಡಿದ್ದು ಯಾವುದೂ ಸರಿಯಲ್ಲ ಎನ್ನುವಂತಾಗಿತ್ತು.

ಆದರೆ, ಸ್ವಾಮಿ ಅಮೃತಸ್ವರೂಪಾನಂದ (ಪೂರ್ವಾಶ್ರಮದ ಹೆಸರು ಬಾಲು) ಅಥವಾ ಸ್ವಾಮೀಜಿ ಅವರ ವಿರುದ್ಧ ಗೇಲ್ ಎಂದೂ ಏನೂ ನಕಾರಾತ್ಮಕವಾಗಿ ಹೇಳಿರುವುದನ್ನು ನಾನು ಕೇಳಿಲ್ಲ. ಬದಲಿಗೆ ಸ್ವಾಮೀಜಿ ಒಬ್ಬರೇ ಅವಳಿಗೆ ಇಷ್ಟವಾದ ಸ್ವಾಮಿ ಎಂದೂ, ಅವರು ಮಾತ್ರ ತನ್ನ ಸೋದರನಂತೆ ತೋರುವರು ಎಂದೂ ಹೇಳಿದ್ದು ನನಗಿನ್ನೂ ನೆನಪಿದೆ. ಹೀಗಿರುವಾಗ, ಸ್ವಕಲ್ಪಿತ ವಿಚಾರಗಳು ತುಂಬಿದ ತನ್ನ ಪುಸ್ತಕದಲ್ಲಿ, ಹೇಸಿಗೆಬರಿಸುವಂಥ ಸುಳ್ಳಿನ ಕಂತೆಯನ್ನು ಅವಳು ಹೆಣೆದಿರುವುದು ಅಮ್ಮನ ನಂತರ ಸ್ವಾಮೀಜಿಯ ಮೇಲೇ ಎಂದು ನೋಡಿದಾಗ ನನಗೆ ದಂಗುಬಡಿದಂತಾಗುತ್ತಿದೆ. ಸ್ವಾಮೀಜಿಯವರು ಆಶ್ರಮದ ಅತ್ಯಂತ ಹಿರಿಯ ಸ್ವಾಮಿಯಾಗಿರುವರು; ಜಗತ್ತಿನ ಎಲ್ಲೆಡೆ ಅವರನ್ನು ಜನ ಗೌರವಿಸುತ್ತಾರೆ. ಅವರ ಬಗ್ಗೆ ಹೀಗೆ ಬರೆದು ಅಮ್ಮನಿಗೆ ಹೆಚ್ಚಿನ ನೋವು ಉಂಟುಮಾಡುವುದು ಅವಳ ಉದ್ದೇಶ ಎಂದು ತೋರುತ್ತದೆ. ಅವರು ಅತ್ಯಂತ ಮುಗ್ಧರು ಮತ್ತು ತಮ್ಮ ಗುರುವಿನ ಬಳಿ ಅತ್ಯಂತ ಭಕ್ತಿಪೂರ್ವಕವಾಗಿ ನೆಡೆದುಕೊಳ್ಳುತ್ತಾರೆ.
ಸಿಟ್ಟು ಅಥವಾ ಸೇಡಿನಿಂದಾಗಿ ನಾನು ಇಲ್ಲಿ ನನ್ನ ನೆನಪುಗಳನ್ನು ಹಂಚಿಕೊಂಡಿಲ್ಲ. ಯಾರದೇ ದುರುದ್ದೇಶದಿಂದಾಗಿ ಸತ್ಯವನ್ನು ತಿರುಚಲಾಗದು, ಬದಲಾಯಿಸಲಾಗದು. ಗೇಲ್ ಇಷ್ಟೊಂದು ಶುದ್ಧಸುಳ್ಳಿನ ಕತೆಗಳನ್ನು ಎಲ್ಲೆಡೆ ಹಬ್ಬುತ್ತಿರುವಾಗ ನನಗೆ ಮೌನವಾಗಿ ಸುಮ್ಮನೆ ಕುಳಿತಿರುವುದು ಆಗಲಿಲ್ಲ. ಅಮ್ಮ ಮತ್ತು ಸ್ವಾಮಿಗಳ ವಿರುದ್ಧದ ಅವಳ ಆರೋಪಗಳು ಎಷ್ಟು ಅಸಂಬದ್ಧವಾಗಿವೆ ಎಂದರೆ ಗೇಲ್ ಅಂಥವಳು ಇಷ್ಟು ಕೀಳುಮಟ್ಟಕ್ಕೆ ಇಳಿಯಬಲ್ಲಳಾ ಎನ್ನುವುದನ್ನು ನಂಬುವುದೇ ಕಷ್ಟವಾಗುತ್ತಿದೆ. ಹೀಗಿದ್ದೂ, ಅಮ್ಮ ಗೇಲ್ ಳನ್ನು ನಾವು ಯಾರೂ ಅರ್ಥಮಾಡಿಕೊಳ್ಳಲಾಗದಷ್ಟು ಈಗಲೂ ಪ್ರೀತಿಸುತ್ತಿರುತ್ತಾರೆ ಎಂದು ನನಗೆ ಗೊತ್ತು. ಗೇಲ್ ಈ ವಾಸ್ತವತೆಯನ್ನು ಅರಿತುಕೊಳ್ಳುವ ದಿನ ಬರಲಿ!

– ಮೀರ

Source: A Letter From Mira

ನಿಜವಾದ ಮಾತಾ ಅಮೃತಾನಂದಮಯಿ

ಕೆಲವರು ಹೇಳುತ್ತಾರೆ ಮಾತಾ ಅಮೃತಾನಂದಮಯಿ ಪವಾಡ ಮಾಡಿದ್ದಾರೆ ಎಂದು. ಕೆಲವರು ಹೇಳುತ್ತಾರೆ ಅದೆಲ್ಲಾ ದಂತಕಥೆಗಳು ಮಾತ್ರ ಎಂದು. ಆದರೆ ಅಮ್ಮನ ಜೀವನವು ಮಾನವತೆಗಾಗಿ ಮೀಸಲಾಗಿದೆ ಎನ್ನುವ ಮಾತನ್ನು ಮಾತ್ರ ಯಾರೂ ತಳ್ಳಿಹಾಕಲಾರರು. ಹದಿನೈದು, ಇಪ್ಪತ್ತು ತಾಸು – ಕೆಲವು ಸಲ ಇಪ್ಪತ್ತನಾಲ್ಕು ತಾಸುಗಳಿಗೂ ಅಧಿಕ, ಇನ್ನೊಬ್ಬರ ಕಣ್ಣೀರು ಒರೆಸುವಾ, ಇನ್ನೊಬ್ಬ ವ್ಯಕ್ತಿಗೆ ಆಲಿಂಗನ ಸಾಂತ್ವನ ನೀಡುವಾ, ಇನ್ನೊಬ್ಬ ದುಃಖಿಯ ಮುಖದಲ್ಲಿ ಮುಗುಳ್ನಗೆ ಮೂಡಿಸುವಾ ಎಂದು ತಮ್ಮ ಎಲ್ಲಾ ಶಾರೀರಕ ಅಗತ್ಯತೆಗಳನ್ನು ಅಲಕ್ಷಿಸಿ ಅಮ್ಮ ಕುಳಿತಿರುತ್ತಾರೆ. ತಮಗಾಗಿ ಒಂದು ನಿಮಿಷ ಎಂದಾಗಲೀ, ಬದಲಿಗೆ ಏನಾದರೂ ಸುಖವನ್ನು ಪಡೆಯುವುದಾಗಲೀ, ತಮಗಾಗಿ ಏನೇನೂ ಬಯಸದೆ ಪ್ರತಿ ಗಂಟೆ, ಪ್ರತಿ ದಿನ, ವಾರಗಟ್ಟಲೆ, ಮಾಸಗಟ್ಟಲೆ ವರ್ಷದಿಂದ ವರ್ಷಕ್ಕೆ, ಒಂದು ದಿನವೂ ರಜೆ ಎಂಬುದಿಲ್ಲದೆ, ಅಮ್ಮ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಮಾನವತೆಯ ಸೇವೆಯಲ್ಲಿ ನಿರತರಾಗಿದ್ದಾರೆ. ನನ್ನ ಪಾಲಿಗೆ ಇಷ್ಟು ಮಾತ್ರವೇ ಒಂದು ಅದ್ಭುತ ಪವಾಡವಾಗಿದೆ. ಪ್ರಪಂಚದಲ್ಲಿ ಯಾರಾದರೂ ತಮ್ಮ ಬಳಿಗೆ ಬರುವ ಯಾರನ್ನಾದರೂ – ಎಲ್ಲರನ್ನೂ ಸಹ – ಹೀಗೆ ತಬ್ಬಿಕೊಂಡಿದ್ದು ಇದೆಯೆ? ಅಮ್ಮ ಮಾಡಿರುವ ಮತ್ತೆಲ್ಲ ಕೆಲಸಗಳನ್ನು ಪಕ್ಕಕ್ಕೆ ಸರಿಸಿ ನೋಡಿದರೂ, ಈ ಒಂದು ವಾಸ್ತವತೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ.

“ಅಮ್ಮನ ಜೀವನವು ಮಾನವತೆಗಾಗಿ ಮೀಸಲಾಗಿದೆ ಎನ್ನುವ ಮಾತನ್ನು ಮಾತ್ರ ಯಾರೂ ತಳ್ಳಿಹಾಕಲಾರರು. ಹದಿನೈದು, ಇಪ್ಪತ್ತು ತಾಸು, ಕೆಲವು ಸಲ ಇಪ್ಪತ್ತನಾಲ್ಕು ತಾಸುಗಳಿಗೂ ಅಧಿಕ, ಇನ್ನೊಬ್ಬರ ಕಣ್ಣೀರು ಒರೆಸುವಾ, ಮುಗುಳ್ನಗೆ ಮೂಡಿಸುವಾ ಎಂದು ತಮ್ಮ ಎಲ್ಲಾ ಶಾರೀರಕ ಅಗತ್ಯತೆಗಳನ್ನು ಅಲಕ್ಷಿಸಿ ಅಮ್ಮ ಕುಳಿತಿರುತ್ತಾರೆ.”

ಅಮೃತಪುರಿಯಲ್ಲಿ, ಅಮ್ಮ ಸಾಮಾನ್ಯವಾಗಿ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಗೆ ದರ್ಶನದ ಹಾಲಿಗೆ ಬರುತ್ತಾರೆ. ಬಂದ ಕೂಡಲೆ ದರ್ಶನ ನೀಡತೊಡಗುತ್ತಾರೆ. ಎಲ್ಲಾ ತರದ ಜನರೂ, ಎಲ್ಲಾ ದೇಶಗಳಿಂದ, ಎಲ್ಲಾ ವಯೋಮಾನದವರು, ಎಲ್ಲಾ ಸಂಸ್ಕಾರದವರೂ, ಎಲ್ಲಾ ಮತದವರೂ ಮತ್ತೆ ವಿವಿಧ ಆರ್ಥಿಕ ಹಿನ್ನೆಲೆಯವರೂ ಅಮ್ಮನ ಬಳಿಗೆ ಬರುತ್ತಾರೆ. ಬಳಿಗೆ ಬಂದವರು ನೊಬೆಲ್ ಪಾರಿತೋಷಕ ಪಡೆದವರಾಗಿರಲಿ, ಅಥವಾ ಗ್ರಾಮೀ ಅವಾರ್ಡ್ ಪಡೆದ ಸಂಗೀತಜ್ಞರಾಗಿರಲಿ, ರಾಜಕೀಯ ಧುರೀಣರಾಗಿರಲಿ, ೮೦ ವರ್ಷದ ವೃದ್ಧರಾಗಿರಲಿ, ಎರಡು ವರ್ಷದ ಮಗುವಾಗಿರಲಿ, ಕಡುಬಡವನಾಗಿರಲಿ, ಕುಷ್ಠರೋಗಿಯೇ ಆಗಿರಲಿ – ಅವರ ಹಂತಕ್ಕೆ ಹೋಗಿ, ಮಿಡಿದು, ಅವರೊಂದಿಗೆ ಸಂವಾದ ನಡೆಸಲು ಅಮ್ಮನಿಗೆ ಸಾಧ್ಯವಿದೆ. ಪ್ರತಿಯೊಬ್ಬ ವ್ಯಕ್ತಿಯೂ ಅಮ್ಮನ ಕರುಣೆಯನ್ನು, ಪೂರ್ಣಗಮನವನ್ನೂ ಮತ್ತು ಮಾತೃಪ್ರೇಮವನ್ನು ತಪ್ಪದೇ ಪಡೆಯುತ್ತಾರೆ.

ಅಮ್ಮ ಜನರನ್ನು ಕೇವಲ ಶಾರೀರಕವಾಗಿ ಆಲಂಗಿಸುವುದು ಮಾತ್ರವಲ್ಲ. ಅವರ ದೈನಂದಿನ ಸಮಸ್ಯೆಗಳನ್ನೂ ಆಲಿಸುತ್ತಾರೆ; ಅವರ ಆಧ್ಯಾತ್ಮಿಕ ಸಮಸ್ಯೆಯನ್ನೂ ಆಲಿಸಿ, ಸಂಶಯ ನಿವಾರಿಸಿ, ಮಾರ್ಗದರ್ಶನ ನೀಡುತ್ತಾರೆ. ಇದು ದರ್ಶನ ಸಾಲಿನಲ್ಲಿ ಬರುವ ಜನರ ವಿಷಯ ಮಾತ್ರವಲ್ಲ, ಅಮ್ಮನ ಎಡಕ್ಕೂ ಬಲಕ್ಕೂ ಜನರ ಬೇರೆ ಸಾಲುಗಳೂ ಇವೆ. ಅದು ಆಶ್ರಮವಾಸಿಗಳ, ಶಿಷ್ಯರ, ಅಮ್ಮನ ವಿವಿಧ ಶೈಕ್ಷಣೆಕ ಹಾಗೂ ಮಾನವ ಸೇವಾ ಯೋಜನೆಗಳನ್ನು ನಡೆಸುವ ಭಕ್ತ ಸೇವಾವ್ರತಿಗಳ ಸಾಲು, ಅವರಿಗೂ ಅಮ್ಮನನ್ನು ಕೇಳಬೇಕಾದ ಪ್ರಶ್ನೆಗಳಿರುತ್ತವೆ. ಅಮ್ಮನ ಅಕ್ಕಪಕ್ಕದಲ್ಲಿ ಅಮ್ಮನೊಂದಿಗೆ ನಿಜವಾದ ಮೀಟಿಂಗ್ ಗಳು ನಡೆಯುವುದು ಸರ್ವೇ ಸಾಮಾನ್ಯ; ಆಗಲೂ ದರ್ಶನ ಮುಂದುವರೆದಿರುತ್ತದೆ! ಅಮ್ಮ ಮೀಟಿಂಗ್ ನಲ್ಲೂ ಪೂರ್ಣವಾಗಿ ಭಾಗವಹಿಸುತ್ತಿರುತ್ತಾರೆ. ಆಧ್ಯಾತ್ಮವಿರಲಿ, ಅರ್ಥಶಾಸ್ತ್ರವಿರಲಿ, ಮನೋವಿಜ್ಙಾನವಿರಲಿ, ವೈದ್ಯಕೀಯ ಶಾಸ್ತ್ರ ಇರಲಿ, ಬಯೋ ಟೆಕ್ನಾಲಜಿಯೇ ಇರಲಿ, ಕಂಪ್ಯೂಟರ್ ಸೈನ್ಸ್ ಇರಲಿ, ಅಥವಾ ಹದಿಹರೆಯದವರ ಮುರಿದ ಪ್ರಣಯದ ಸಮಸ್ಯೆಯೇ ಆಗಿರಲಿ – ಯಾವುದೇ ಟಾಪಿಕ್ ಬಗ್ಗೆ ಬಹು ಚಾಣಕ್ಷತನದಿಂದ ಅಮ್ಮ ಚರ್ಚೆ ಮಾಡಬಲ್ಲರು. ಅಮ್ಮ ವಾಸ್ತವವಾಗಿ ಪಡೆದಿರುವುದು ಕೇವಲ ನಾಲ್ಕನೆ ತರಗತಿಯವರೆಗಿನ ಶಿಕ್ಷಣ ಎಂದು ದಯವಿಟ್ಟು ಮರೆಯದಿರಿ.

ಇದು ಅಮ್ಮನ ಹತ್ತಿರ ನಡೆಯುವ ಮೀಟಿಂಗ್; ಇನ್ನು ದೂರದಿಂದ ನಡೆಯುವ ಮೀಟಿಂಗ್ ಗಳೂ ಇವೆ. ಸೇವಾ ಯೋಜನೆಗಳ ಪ್ರಾಜೆಕ್ಟ್ ಮ್ಯಾನೇಜರ್ ಮಕ್ಕಳು ದೂರದೂರುಗಳಿಂದ ಅಮ್ಮನ ನಿರ್ದೇಶನ ಬಯಸಿ ಫೋನಿನಲ್ಲಿ ಕರೆಮಾಡುವರು. ಹುಷಾರಿಲ್ಲದ ಭಕ್ತರು, ಆಸ್ಪತ್ರೆಯಲ್ಲಿರುವ ಭಕ್ತರು, ಮತ್ತಿತರರು ಕರೆಮಾಡುತ್ತಾರೆ. ಅಮ್ಮ ಇವರೊಂದಿಗೂ ಫೋನಿನಲ್ಲಿ ಮಾತಾಡುತ್ತಾರೆ; ಎದುರಿನಿಂದ ಬರುವ ದರ್ಶನಾರ್ಥಿಗೆ ತಮ್ಮ ಗಮನ ಕಡಿಮೆಯಾಗಬಾರದೆಂದು ಅಮ್ಮ, ಫೋನಿನಲ್ಲಿ ಮಾತಾಡುವಾಗ ಸ್ವಲ್ಪ ತಡೆಯುತ್ತಾರೆ. ಪ್ರತಿಯೊಬ್ಬ ದರ್ಶನಾರ್ಥಿಗೆ ಅಮ್ಮ ಕಿವಿಯಲ್ಲಿ ಪಿಸುಮಾತು ನುಡಿಯುತ್ತಾರೆ, ಅವರ ಸಮಸ್ಯೆಯನ್ನು ಆಲಿಸುತ್ತಾರೆ, ಅವರ ಕಣ್ಣೀರು ಒರೆಸುತ್ತಾರೆ. ಹೀಗೆ ಅಮ್ಮ ಎಲ್ಲಾ ದಿಕ್ಕಿನಲ್ಲೂ ತಿರುಗಿ, ಕತ್ತುಹೊರಳಿಸಿ, ಪ್ರಪಂಚದ ಸೇವೆಗೆ ತಮ್ಮನ್ನೇ ಅರ್ಪಿಸಿಕೊಳ್ಳುತ್ತಿರುವರು – ಇದನ್ನು ಕಣ್ಣಾರೆ ನೋಡುವುದೂ ಒಂದು ಅನುಭವವೆ.

ಆಮೇಲೆ ಅನ್ನಪ್ರಾಶನದ ಸರದಿ. ಅಮ್ಮನ ಕೈಯಿಂದ ಎಳೇಮಕ್ಕಳಿಗೆ ಮೊದಲ ಸಲ ಅನ್ನ ತಿನ್ನಿಸುವ ಆಚಾರ. ಇದಾದ ಮೇಲೆ ವಿದ್ಯಾರಂಭ; ಅಮ್ಮನಿಂದ ಮಕ್ಕಳಿಗೆ ಅಕ್ಷರಾಭ್ಯಾಸದ ಆರಂಭ. ನಿತ್ಯವೂ ಡಜನ್ ಗಟ್ಟಲೆ ಮಕ್ಕಳು ಇವೆಲ್ಲಕ್ಕಾಗಿ ಅಮ್ಮನ ಬಳಿ ಬರುತ್ತಾರೆ. ಬ್ರಾಹ್ಮಣ ಕುಟುಂಬದ ಮಕ್ಕಳಿಗೆ ಅಮ್ಮ ಉಪನಯನ ಸಂಸ್ಕಾರವನ್ನೂ ನೆರವೇರಿಸುತ್ತಾರೆ; ಯಜ್ಞೋಪವೀತ ಹಾಕಿ, ಗಾಯತ್ರೀ ಮಂತ್ರ ಬೋಧಿಸಿ, ದೀಕ್ಷೆ ಕೊಡುತ್ತಾರೆ. ಕ್ರಿಶ್ಚಿಯನ್ ಭಕ್ತರು ಬಿನ್ನವಿಸಿಕೊಂಡಾಗ ಅಮ್ಮ ಅವರ ಮಕ್ಕಳಿಗೆ ಬ್ಯಾಪ್ಟಿಸಮ್ ಸಹ ಮಾಡುತ್ತಾರೆ. ಇದಲ್ಲದೆ ಯಾರು ಕೇಳಿದರೂ ಅವರಿಗೆಲ್ಲಾ ಅಮ್ಮ ಮಂತ್ರ ನೀಡುತ್ತಾರೆ. ಈ ಮಂತ್ರಗಳು ಹಿಂದೂ ಮಂತ್ರವೇ ಆಗಿರುವುದೆಂದಿಲ್ಲ. ಹಿಂದೂ ದೇವ ದೇವಿಯರ ಮಂತ್ರ ಕೇಳುವವರಿದ್ದಾರೆ; ಅದೇ ರೀತಿ ಭಗವಾನ್ ಬುದ್ಧ, ಅಲ್ಲಾಹು, ಯೇಸು ಕ್ರಿಸ್ತ, ವರ್ಜಿನ್ ಮೇರಿಯ ಆರಾಧಕರು, ಅವರವರ ಇಷ್ಟದೈವದ ಮಂತ್ರ ಕೇಳಿ ಪಡೆಯುತ್ತಾರೆ. ಅಮ್ಮ ಜೈನ ಮಂತ್ರ ಪ್ರದಾನ ಮಾಡುತ್ತಾರೆ, ಯಹೂದಿ ಮಂತ್ರ ಪ್ರದಾನ ಮಾಡುತ್ತಾರೆ, ಸಿಖ್ಖರ ಮಂತ್ರ ಪ್ರದಾನ ಮಾಡುತ್ತಾರೆ ಭಗವಂತನ ನಿರಾಕಾರ ಸ್ವರೂಪದ ಮೇಲಿನ ಮಂತ್ರ ಬೇಕೆಂದು ಕೇಳುವವರೂ ಇದ್ದಾರೆ. ಪ್ರೇಮ, ಕರುಣೆ, ಪ್ರಕಾಶ – ಇಂಥ ಗುಣಗಳ ಮಂತ್ರ ಬೇಕೆನ್ನುವವರಿದ್ದಾರೆ. ಅಮ್ಮ ಯಾರನ್ನೂ ಯಾವುದೇ ದೇವತೆಯನ್ನು ಆಧಾರವಾಗಿಸಿ ಮಂತ್ರವನ್ನು ತೆಗೆದುಕೊಳ್ಳಬೇಕು ಎಂದು ಬಲವಂತ ಪಡಿಸುವುದಿಲ್ಲ.

(ಓದುಗರ ಗಮನಕ್ಕೆ: ಅಮ್ಮನದು ಅತ್ಯಂತ ವಿಶಾಲವಾದ ದೃಷ್ಟಿ. ಎಲ್ಲವನ್ನೂ ಒಳಗುಮಾಡಿಕೊಂಡಂಥ ದೃಷ್ಟಿ. ಅಮೃತಪುರಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಹಾಗೆ ಕ್ರಿಸ್ಮಸ್ ಸಹ ದೊಡ್ಡ ಹಬ್ಬ. ಇಂದಿನ ದಿನ ಇಲ್ಲಿನ ಹಾಗೆ ಬೇರೆ ಬೇರೆ ಸಂಸ್ಕಾರದ ಹಬ್ಬಗಳನ್ನು ಆಚರಿಸುವಂತ ಧಾರ್ಮಿಕ ಸಂಸ್ಥೆಗಳನ್ನು ಕಾಣುವುದು ಅಪರೂಪ. ಗಜರಾತಿನಲ್ಲಿ ೨೦೦೧ರಲ್ಲಿ ಭೂಕಂಪವಾದಾಗ, ಮಾತಾ ಅಮೃತಾನಂದಮಯಿ ಮಠವು ಭುಜ್ ಜೆಲ್ಲೆಯಲ್ಲಿ ಮೂರು ಹಳ್ಳಿಗಳನ್ನು ಪುನರ್ನಿರ್ಮಾಣ ಮಾಡಿಕೊಟ್ಟಿತು; ಆ ಸಂದರ್ಭದಲ್ಲಿ ಅಮ್ಮ ಒಂದು ಮಸೀದಿಯನ್ನೂ ನಿರ್ಮಿಸಿಕೊಟ್ಟರು; ಒಂದು ಚರ್ಚ್ ಕಟ್ಟಿಸಿಕೊಡಲು ಮುಂದೆಬಂದಿದ್ದರು.)

ಇದೆಲ್ಲಾ ನಡೆದಿರುವಾಗಲೂ ದರ್ಶನ ಮುಂದುವರಿದಿರುತ್ತದೆ. ಊಟದ ಸಮಯವಾಗಿ ಅದೂ ಮೀರುತ್ತದೆ; ಅಮ್ಮ ಊಟ ಮಾಡುವುದಿಲ್ಲ. ರಾತ್ರಿ ಊಟದ ಸಮಯವಾಗುತ್ತದೆ; ಆಗಲೂ ಅಮ್ಮ ಊಟ ಮಾಡುವುದಿಲ್ಲ. ಅಮ್ಮ ಕುಳಿತಲ್ಲಿಂದ ಏಳುವುದೇ ಇಲ್ಲ. ಕುಳಿತಲ್ಲೇ ಕುಳಿತು, ಒಬ್ಬರಾದ ಮೇಲೆ ಒಬ್ಬರನ್ನು ತಮ್ಮ ನಿಜಬಾಹುಗಳಲ್ಲಿ ಸ್ವೀಕರಿಸುತ್ತಾ ಇರುತ್ತಾರೆ. ಅಮ್ಮನ ಶಕ್ತಿಯಾಗಲೀ, ಸಹನಾಶಕ್ತಿಯಾಗಲೀ ಒಂದಿಷ್ಟೂ ಕಡಿಮೆಯಾಗುವುದಿಲ್ಲ. ವೇದಿಕೆಗೆ ಬಂದಾಗ ಯಾವ ರೀತಿ ಫ್ರೆಶ್ಶಾಗಿ ಹೊಳೆಯುತ್ತಿದ್ದರೋ ಅದೇ ರೀತಿ ಹದಿನೈದು ತಾಸು ದರ್ಶನ ನೀಡಿದ ಬಳಿಕವೂ ಫ್ರೆಶ್ಶಾಗಿ ಹೊಳೆಯುತ್ತಿರುತ್ತಾರೆ. ಬಂದವರೆಲ್ಲರನ್ನೂ ಕಂಡು ಅವರೆಲ್ಲರಿಗೂ ಅಪ್ಪುಗೆ ನೀಡಿ, ಅವರನ್ನು ಮಾತಾಡಿಸಿದಮೇಲೇ ಅಮ್ಮ ದರ್ಶನ ನಿಲ್ಲಿಸುವುದು. ಅಲ್ಲಿಯವರೆಗೂ ಅಮ್ಮ ಸಮಯವನ್ನೇ ಜಗ್ಗೀ ಜಗ್ಗೀ ಹಿಗ್ಗಿಸುತ್ತಾರೆ; ಪ್ರತಿಯೊಬ್ಬ ವ್ಯಕ್ತಿಗೆ ತಮ್ಮಿಂದ ಆದಷ್ಟೂ ಗಮನ ನೀಡುತ್ತಿರುತ್ತಾರೆ. ಅನೇಕ ಸಲ ದರ್ಶನ ಮುಗಿಸುವ ಹೊತ್ತಿಗೆ ಅಮ್ಮ ಯಾರನ್ನಾದರೂ ಕರೆದು, ‘ಹೋಗಿ ಹಾಲಿನಲ್ಲೆಲ್ಲಾ ಹುಡುಕು, ದರ್ಶನ ಸಿಕ್ಕಿಲ್ಲದವರು ಇರಬಹುದು,’ ಎಂದು ಕಳಿಸುತ್ತಾರೆ.

ಹದಿನೈದು ತಾಸಿಗೂ ಹೆಚ್ಚಿನ ಸಮಯದ ನಂತರ, ಅಂತೂ ದರ್ಶನ ಮುಗಿದ ಮೇಲೆ, ಅಮ್ಮ ಕುಳಿತಲ್ಲಿಂದ ಏಳುತ್ತಾರೆ. ೧೯೮೩ರಿಂದ ವಾಸವಿರುವ ಅದೇ ಒಂದು ಪುಟ್ಟ ಕೋಣೆಗೆ ಹೆಜ್ಜೆಹಾಕುತಾ ತೆರಳುತ್ತಾರೆ. ಕೋಣೆಗೆ ಹೋಗಿ ಅಮ್ಮನೇನೊ ಮಲಗುವುದಿಲ್ಲ. ಅಮ್ಮನ ಕೋಣೆಯ ದೀಪ ಉರಿಯುತ್ತಿರುವುದನ್ನು ಯಾರು ಬೇಕಾದರೂ ನೋಡಬಹುದು. ಅಮ್ಮ ಫೋನಿನಲ್ಲಿ ಮಾತಾಡುತ್ತಿರುತ್ತಾರೆ. ಆಶ್ರಮದ ಯಾವುದಾದರೂ ಸೇವಾಯೋಜನೆಯ ವಿವರಗಳ ಬಗ್ಗೆ: ದುರಂತ ಪರಿಹಾರ ಕೆಲಸವಿರಬಹುದು, ನಿರ್ಗತಿಕರಿಗೆ ಮನೆ ನಿರ್ಮಾಣ ಯೋಜನೆ ಇರಬಹುದು, ಬಡ ಮಹಿಳೆಯರಿಗೆ, ವೃದ್ಧರಿಗೆ, ವಿಕಲಚೇತನರಿಗೆ ನೀಡುವ ಪೆನ್ಷನ್ ಯೋಜನೆಯ ಬಗ್ಗೆ ಇರಬಹುದು, ಅನಾಥಾಶ್ರಮದ ಬಗ್ಗೆ ಇರಬಹುದು, ಉಚಿತ ವೈದ್ಯಕೀಯ ಸೇವೆಗಳ ಬಗ್ಗೆ ಇರಬಹುದು, ಸ್ಕಾಲರ್ಶಿಪ್ ಯೋಜನೆಯ ಬಗ್ಗೆ ಇರಬಹುದು, ಪ್ರಕೃತಿ ಸಂರಕ್ಷಣಾ ಯೋಜನೆಯ ಬಗ್ಗೆಯೂ ಇರಬಹುದು…. ಇದಲ್ಲದೆ ಅಮ್ಮ ಓದಬೇಕಾದ ಅನೇಕಾನೇಕ ಪತ್ರಗಳು ಕಾದಿರುತ್ತವೆ. ಪೋಸ್ಟ್ ಆಫೀಸಿನ ಮೂಲಕ ಬಂದವು, ಈ ಮೇಲ್ ಮೂಲಕ ಬಂದವು, ಅಮ್ಮನ ವೆಬ್ ಮೂಲಕ ಬಂದವು, ದರ್ಶನ ಸಮಯದಲ್ಲಿ ಅಮ್ಮನ ಕೈಗೆ ಭಕ್ತರು ನೇರವಾಗಿ ಕೊಟ್ಟ ಪತ್ರಗಳು, ದೂರದ ಭಕ್ತರು ಅಮ್ಮನಿಗೆಂದು ಕಳಿಸಿಕೊಟ್ಟ ಪತ್ರಗಳು, ಅಮೃತಾ ಯೂನಿವರ್ಸಿಟಿ ವಿದ್ಯಾರ್ಥಿಗಳ ಪತ್ರಗಳು, ಶಿಕ್ಷಕವರ್ಗದವರ ಪತ್ರಗಳು, ಶಿಷ್ಯರ ಪತ್ರಗಳು, ಭಕ್ತರ ಪತ್ರಗಳು…. ಅಮ್ಮ ಪ್ರತೀ ದಿನ ಎಷ್ಟು ಹೆಚ್ಚಿಗೆ ಓದಲು ಸಾಧ್ಯವೋ ಅಷ್ಟು ಪತ್ರಗಳನ್ನು ಓದುತ್ತಾರೆ. ಅಮ್ಮನ ಪರಿಚಾರಕಿ ಹೇಳುವ ಪ್ರಕಾರ ಅಮ್ಮ ಹಲ್ಲುಜ್ಜುವಾಗಲೂ ಸಹ ಪತ್ರಗಳನ್ನು ಓದುತ್ತಿರುತ್ತಾರಂತೆ.

ಇದರ ನಡುವೆ ಅಮ್ಮ ಹೇಗೋ ಸಮಯ ಹೊಂದಿಸಿಕೊಂಡು ಹೊಸಹೊಸಾ ಭಜನೆಗಳನ್ನು ಪ್ರಾಕ್ಟೀಸ್ ಮಾಡುತ್ತಾರೆ; ಈಚಿನ ದಿನಗಳಲ್ಲಿ ಅಮ್ಮನ ಮಾತೃಭಾಷೆ ಮಲಯಾಳಂ ಅಲ್ಲದೆ ಬೇರೆ ಬೇರೆ ಹಲವಾರು ಭಾಷೆಗಳಲ್ಲಿ ಭಜನೆಗಳು ರಚಿತವಾಗುತ್ತಿವೆ. ಆಯಾ ಭಾಷೆಯ ಭಕ್ತರ ಮನಸ್ಸಿಗೆ ಸಂತೋಷವಾಗುವುದೆಂದು ಅಮ್ಮ ತಮ್ಮ ಬಿಡುವಿಲ್ಲದ ಶೆಡ್ಯೂಲ್ ನ ನಡುವೆಯೇ ಕೆಲವಾರು ನಿಮಿಷ ಬಿಡುವು ಮಾಡಿಕೊಂಡು, ಪರಭಾಷೆಯ ಉಚ್ಚಾರವನ್ನು ಪರಿಶ್ರಮದಿಂದ ಕಲಿತು ಸ್ಫುಟವಾಗಿ ಹಾಡುತ್ತಾರೆ..

ವಿದೇಶಗಳಲ್ಲಿ ಯಾತ್ರೆ ಮಾಡುವಾಗ ಅಮ್ಮನ ವಸತಿ ಬಹು ಸರಳ. ಅನೇಕ ಸಲ ಪ್ರೋಗ್ರಾಮ್ ನಡೆಯುವ ಹಾಲಿನ ಬೇಸ್ ಮೆಂಟ್ ಫ್ಲೋರಿನಲ್ಲೇ ಒಂದು ಸಣ್ಣ ಲಾಕರ್ ರೂಮಿನಲ್ಲಿ, ಕಿಟಕಿಯಾಗಲೀ ಯಾವುದೇ ರೀತಿಯ ಗಾಳಿ ಸಂಚಾರವಾಗಲೀ ಇಲ್ಲದಂಥ ಕಡೆ, ಅಮ್ಮನ ವಿಶ್ರಾಂತಿಯ ನೆಲೆಯಾಗಿರುತ್ತದೆ. ಯಾಕೆ? ಯಾಕೆಂದರೆ ಕಾರ್ಯಕ್ರಮದ ಸ್ಥಳದಿಂದ ಭಕ್ತರ ಮನೆಗೆ ಹೋಗಿಬರುವ ಸಮಯವಿದೆಯಲ್ಲಾ – ಆ ಸಮಯವನ್ನು ಕೂಡ ಉಳಿಸಿದ್ದಲ್ಲಿ, ಅಮ್ಮ ಇನ್ನಷ್ಟು ಭಕ್ತರಿಗೆ ದರ್ಶನವನ್ನಾದರೂ ನೀಡಬಹುದಲ್ಲಾ ಎಂಬ ಭಾವದಿಂದಾಗಿ! ಅನೇಕ ಬಾರಿ ಅಮೇರಿಕೆಯಲ್ಲಿ ಆಗುವಂತೆ ಅಮ್ಮನ ಕಾರ್ಯಕ್ರಮಗಳು ನಡೆಯುವುದು ಒಳ್ಳೆಯ ಹೊಟೇಲ್ಲಿನಲ್ಲಾದರೂ, ಅಲ್ಲಿಯೂ ಅಮ್ಮ ಅಮೃತಪುರಿಯಲ್ಲಿ ಮಾಡುವ ಹಾಗೆ ನೆಲದಮೇಲೇ ಮಲಗುತ್ತಾರೆ. ಅಮ್ಮನ ರೀತಿ ಎಂದಿಗೂ ಸರಳವಾದುದು.

ಅಂತೂ ಬಿಡುವಾಗಿ, ಕೊಂಚ ಸಮಯ ಇನ್ನು ಮಲಗಲು ಸಮಯವಾಯ್ತು ಎನ್ನುವಷ್ಟರಲ್ಲಿ, ಅದೋ ಸೂರ್ಯೋದಯ ಆಗಿಬಿಟ್ಟಿರುತ್ತದೆ! ಅಮ್ಮ ಮಲಗುವರಾ? ಅಮ್ಮನ ಪರಿಚಾರಿಕೆಯ ಪ್ರಕಾರ, ‘ಒಂದೆರಡು ತಾಸು ಮಲಗುವರು, ಆದರೆ ಅದೇನೂ ಗಾಢನಿದ್ರೆಯಲ್ಲ. ಸುಮ್ಮನೆ ಶರೀರಕ್ಕೆ ವಿಶ್ರಾಂತಿ ನೀಡುವ ಸಲುವಾಗಿ ಒರಗುತ್ತಾರೆ.’ ಹೀಗೆ ಕೆಲವು ತಾಸುಗಳ ನಂತರ ಅಮ್ಮ ಎದ್ದು, ಮತ್ತೆ ಇನ್ನಷ್ಟು ಪತ್ರಗಳನ್ನು ಓದುತ್ತಾರೆ, ಅಂದಿನ ದರ್ಶನಕ್ಕೆ ಸಿದ್ಧರಾಗುತ್ತಾರೆ. ಇನ್ನು ಯಾವುದೇ ಕ್ಷಣ ದರ್ಶನ ಪ್ರಾರಂಭವಾಗಬಹುದು.

ಅಮ್ಮನ ದರ್ಶನ ಹಿಂದಿನ ದಿನದಂತೆಯೇ ಅವ್ಯಾಹತವಾಗಿ ಸಾಗುತ್ತದೆ.

-ಸ್ನೇಹ

Source:The Real Mata Amritanandamayi

ಮಾತಾ ಅಮೃತಾನಂದಮಯಿ ಮಠದ ವಿರುದ್ಧದ ಆರೋಪಗಳಿಗೆ ಅಮ್ಮ ನೀಡಿದ ಸ್ವಷ್ಟೀಕರಣ

ಮಾತಾ ಅಮೃತಾನಂದಮಯಿ ಮಠದ ವಿರುದ್ಧದ ಆರೋಪಗಳಿಗೆ
ಅಮ್ಮ ನೀಡಿದ ಸ್ವಷ್ಟೀಕರಣ
(ಪಾಲಕ್ಕಾಡ್ ಬ್ರಹ್ಮಸ್ಥಾನ ಮಹೋತ್ಸವದ ಸಂದರ್ಭ, ೨೦೧೪ ಫೆಬ್ರವರಿ ೨೨ರಂದು)

“ಪ್ರತಿವರ್ಷವೂ ಆಶ್ರಮವು (ಮಾತಾ ಅಮೃತಾನಂದಮಯಿ ಮಠವು) ಲೆಕ್ಕಪತ್ರಗಳನ್ನು ಸರ್ಕಾರಕ್ಕೆ ತಪ್ಪದೇ ಒಪ್ಪಿಸುತ್ತದೆ. ಎಲ್ಲವೂ ನಡೆಯಬೇಕಾದ ರೀತಿಯಲ್ಲೇ ನಡೆದಿದೆ. ಕೆಲವರು ಅಸಂಬದ್ಧವಾದ ಮಾತುಗಳನ್ನಾಡಿ ಅಪಾರ್ಥ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ, ಅಪವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ. ಅವರು ಆರೋಪಿಸುವ ಹಾಗೆ ನಮ್ಮಲ್ಲಿ ಕೋಟಿಗಟ್ಟಲೆ ಹಣ ಇದ್ದಿದ್ದರೆ, ಭಾರತದಲ್ಲೂ ಇಡೀ ಪ್ರಪಂಚದಲ್ಲೂ ಬಡತನವನ್ನೇ ನಿರ್ಮೂಲನ ಮಾಡುತ್ತಿದೆ. ಅದೇ ನನ್ನ ಹೆಬ್ಬಯಕೆ. ನಮ್ಮ ಆಶ್ರಮಕ್ಕೆ ಯಾವುದೇ ಮತವಾಗಲೀ ಜಾತಿಯಾಗಲೀ ಅಥವಾ ಸಮುದಾಯವಾಗಲೀ ಹಣ ನೀಡುವುದಿಲ್ಲ. ಸದಸ್ಯತ್ವ ಶುಲ್ಕವೆಂದೂ ನಾವು ಯಾರಿಂದಲೂ ಹಣ ವಸೂಲಿ ಮಾಡುವುದಿಲ್ಲ. ನಮ್ಮಲ್ಲಿ ಇರುವುದು ಕೇವಲ ನನ್ನ ಮಕ್ಕಳ ತ್ಯಾಗದಿಂದಾಗಿ ಬಂದಿದ್ದು.

“ನಮ್ಮ ಈ ಸಂಸ್ಥೆಯು ಸೇವೆಯನ್ನು ಮಾಡುವಂಥದು. ಜನರಲ್ಲಿ ಸೇವಾಮನೋಭಾವವನ್ನು ವರ್ಧಿಸಿಕೊಳ್ಳಲು ಸಹಾಯವನ್ನು ಮಾಡುವ ಸಂಸ್ಥೆ ಇದು. ಗುಜರಾತಿನಲ್ಲಿ ಭೂಕಂಪವಾದ ಬಳಿಕ (೨೦೦೧ರಲ್ಲಿ), ಆಶ್ರಮವು ಅಲ್ಲಿನ ಮೂರು ಹಳ್ಳಿಗಳನ್ನು ಪುನರ್ನಿರ್ಮಾಣ ಮಾಡಿಕೊಟ್ಟಿತು. ಈಗ, ಸುನಾಮಿಯಂಥಹ ದುರಂತಗಳ ನಂತರ ಪರಿಹಾರವಾಗಿ ಬಡವರಿಗೆ ಆಶ್ರಮವು ಮನೆಗಳನ್ನು ಕಟ್ಟಿಕೊಡುವಾಗ, ಗುಜರಾತಿನ ಆ ಹಳ್ಳಿಗಳಿಂದ ೮೫-೯೦ ವರ್ಷದವರೂ ಕೂಡ ಸೇವೆಸಲ್ಲಿಸಬೇಕೆಂದು ಬರುತ್ತಾರೆ.

“ವ್ಯಕ್ತಿಯ ತಿಳುವಳಿಕೆಯ ಮಟ್ಟ ಎಷ್ಟೇ ಇರಲಿ, ಅವನ ದೃಷ್ಟಿಕೋನ ಯಾವುದೇ ಇರಲಿ – ಅವನ ಪ್ರಕಾರ ಅದೇ ಸರಿ. ಅದು ಮಾತ್ರ ಸರಿ. ಹೆಚ್ಚಿನ ಜನರ ಆಲೋಚನೆ ಈ ರೀತಿಯಿದೆ.

“ನಮಗೆ ದೃಷ್ಟಿ ಇದೆ, ಆದರೆ ದೃಷ್ಟಿಕೋನವಿಲ್ಲ. ಈಗ ನಾವು ಕಾಣುತ್ತಿರುವುದು ಈ ಪರಿಸ್ಥಿತಿಯನ್ನೇ. ನಾನು ಯಾರನ್ನೂ ’ನನ್ನ ಸೇವೆ ಮಾಡಿರಿ’ ಎಂದು ಕೇಳಿಕೊಂಡಿಲ್ಲ. ನಾನೇ ಎಲ್ಲರ ಸೇವೆ ಮಾಡುತ್ತೇನೆ. ನಾನು ನನ್ನ ಮಕ್ಕಳ ಸೇವೆಯನ್ನು ಮಾಡುವ ತಾಯಿ ಮಾತ್ರ. ನಾವು ಯಾರಿಂದಲೂ ಕಳವು ಮಾಡುತ್ತಿಲ್ಲ, ಯಾರಿಂದಲೂ ಯಾಚಿಸಿ ಪಡೆಯುತ್ತಿಲ್ಲ. ಯಾರೂ ಆಲಸಿಗಳಾಗಿ ಇಲ್ಲಿ ಕುಳಿತಿಲ್ಲ. ನಾವು ಕಷ್ಟಪಟ್ಟು ಪರಿಶ್ರಮಿಸುತ್ತಿದ್ದೇವೆ ಹಾಗು ಇತರರ ಸೇವೆ ಮಾಡುತ್ತಿದ್ದೇವೆ. ನಾನು ದಿನಕ್ಕೆ ಒಪ್ಪತ್ತೇ ಆಹಾರ ಸೇವನೆ ಮಾಡುವುದು. ಕೆಲವು ದಿನಗಳಂತೂ ಏನೂ ತಿನ್ನುವುದೇ ಇಲ್ಲ. ಉಣ್ಣಲಿ ಬಿಡಲಿ, ಪ್ರತೀ ದಿನ ಹತ್ತಾರು ಗಂಟೆ ಕೂತು ಭಕ್ತರನ್ನು ಭೇಟಿಮಾಡುತ್ತೇನೆ. ಕೋಣೆಗೆ ಮರಳಿಬರಲು, ಪ್ರಪಂಚದ ಎಲ್ಲೆಡೆಯಿಂದ ಬಂದಿರುವ ನೂರಾರು ಪತ್ರಗಳನ್ನು ಓದುತ್ತೇನೆ; ಸಂಘಸಂಸ್ಥೆಗಳನ್ನು ನೋಡಿಕೊಳ್ಳಬೇಕು. ಮಕ್ಕಳು ಧ್ಯಾನ ಮಾಡಲು ಮಾರ್ಗದರ್ಶಿಸುತ್ತೇನೆ, ಪ್ರಶ್ನೋತ್ತರಕ್ಕೆ ಅವಕಾಶ ನೀಡುತ್ತೇನೆ. ಇಲ್ಲಿ ಯಾರೂ ಸೋಮಾರಿಗಳಾಗಿ ಕುಳಿತಿಲ್ಲ. ನನಗೆ ಯಾವುದೇ ಕೆಲಸವನ್ನು ಮಾಡಲು ಹಿಂಜರಿಕೆಯಿಲ್ಲ.

“ನಾನು ಯಾರನ್ನೂ ದೂಷಿಸುತ್ತಿಲ್ಲ. ನನ್ನ ಮಕ್ಕಳ ತ್ಯಾಗ ಮತ್ತು ಸಮರ್ಪಣೆಯ ಬಗ್ಗೆ ಹೇಳುತ್ತಿದ್ದೇನೆ ಅಷ್ಟೇ. ಅದರಿಂದಾಗಿ, ನಾವು ಅನೇಕ ಸೇವಾಕಾರ್ಯಗಳನ್ನು ಸಾಧಿಸಬಹುದಾಗಿದೆ. ದೋಷಾರೋಪ ಮಾಡುವವರು ಅನೇಕ ಜನರಿದ್ದಾರೆ, ಆದರೆ ಅವರು ಯಾರೂ ಸಮಾಜಕ್ಕೆ ಸಹಾಯ ಮಾಡುಲು ಮುಂದೆ ಬರುತ್ತಿಲ್ಲ. ಇದು ದುಃಖದ ವಿಷಯ.

ಅಮ್ಮ ಯಾರಿಗೂ ’ದೇವರನ್ನು ನಂಬಿ’ ಎಂದು ಹೇಳುವುದಿಲ್ಲ. “ದೇವರಿದ್ದಾನೆಯೆ?” ಎಂಬುದಲ್ಲ ಪ್ರಶ್ನೆ. “ನೊಂದರವು ಇದ್ದಾರೆಯೆ?” ಎಂಬುದೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. “ಅವರ ಸಂಕಟಗಳನ್ನು ನಾವು ಹೇಗೆ ನಿವಾರಿಸಬಹುದು?” ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ಮುಂದೆ ಬರುವ ಯಾರದೇ ಪಾದವನ್ನು ತೊಳೆಯಲು ಅಮ್ಮ ಸಿದ್ಧ.

“ಈ ಆಶ್ರಮವು ಶಾಂತಿಯ ಕೇಂದ್ರ. ನನಗೆ ಆತ್ಮ ಸಮರ್ಪಣೆ, ನಿಸ್ವಾರ್ಥ ಸೇವೆ ಮತ್ತು ಪ್ರಾಮ ಇವುಗಳಲ್ಲಿ ನಂಬಿಕೆ ಇದೆ. ನನ್ನ ಮಕ್ಕಳಿಗೆ ನಾನು ಕಲಿಸುತ್ತಿರುವುದೂ ಇದನ್ನೇ. ನಾನು ಒಂದು ತೆರೆದ ಪುಸ್ತಕ. ಹರಡುತ್ತಿರುವ ಎಲ್ಲಾ ಗುಸುಗುಸು ವದಂತಿಗಳು ಅಸತ್ಯವಾದುದು. ತಮ್ಮ ಬಯಕೆಗಳು ಪೂರ್ಣವಾಗದೇ ಹೋದಕಾರಣ, ಕೆಲವರು ಇಲ್ಲಸಲ್ಲದ ಆರೋಪ ಮಾಡತೊಡಗಿದ್ದಾರೆ. ಯಾರೋ, ಎಲ್ಲಿಂದಲೋ, ಮತೀಯ ಸಂಘರ್ಷಗಳನ್ನು ಉಂಟುಮಾಡುವ ಉದ್ದೇಶದಿಂದ, ಜನರು ಪರಸ್ಪರ ಕಾದಾಡುವಂತೆ, ಸಂಘರ್ಷ ಉಂಟುಮಾಡಲು ಪ್ರಯತ್ನಿಸುತ್ತಾ ಕುತಂತ್ರ ನಡೆಸಿದ್ದಾರೆ.

“ಎಲ್ಲರ ಹೃದಯಗಳಲ್ಲಿ ಸಜ್ಜನಿಕೆ ತುಂಬಲಿ, ಎಲ್ಲರ ಮನಸ್ಸೂ ಸಜ್ಜನಿಕೆಯಿಂದ ತುಂಬಲಿ ಎಂದೇ ನನ್ನ ಪ್ರಾರ್ಥನೆ. ನನ್ನ ಮಕ್ಕಳೆ, ಇತರರನ್ನು ಕ್ಷಮಿಸಿ ಆದದ್ದನ್ನು ಮರೆತುಕೊಳ್ಳುವ ಶಕ್ತಿ ನಿಮ್ಮಲ್ಲಿ ಮೂಡಲಿ ಎಂದು ಪ್ರಾರ್ಥಿಸಿ. ಒಳಗೂ ಹೊರಗೂ ಆಶಾಂತಿಯೇ ಇದೆ. ನಾವೆಲ್ಲ ಎತ್ತ ಸಾಗುತ್ತಿದ್ದೇವೋ ಗೊತ್ತಿಲ್ಲ. ಮನಸ್ಸೂ ಒಳೆಯ ಆಲೋಚನೆಗಳಿಂದ ತುಂಬಲಿ!”

(ಮೇಲಿನ ನುಡಿಗಳನ್ನು ಅಮ್ಮ ಪಾಲಕ್ಕಾಡಿನ ಪುತ್ತೂರ್ ನಲ್ಲಿ ಬ್ರಹ್ಮಸ್ಥಾನ ಮಹೋತ್ಸವದ ಸಂದರ್ಭದಲ್ಲಿ ೨೦೧೪ ಫೆಬ್ರವರಿ ೨೨ರಂದು ನುಡಿದರು.)

ಮಾತಾ ಅಮೃತಾನಂದಮಯಿ ಮಠದ ಪರವಾಗಿ

ಸ್ವಾಮಿ ಪೂರ್ಣಾಮೃತಾನಂದ ಪುರಿ,
ಜನರಲ್ ಸೆಕ್ರೆಟರಿ, ಬೋರ್ಡ್ ಆಫ್ ಟ್ರಸ್ಟೀಸ್.

Source: Amma’s Response to the Allegations Against the Mata Amritanandamayi Math